ನವದೆಹಲಿ(ಸೆ. 14)  ಮಹಾರಾಷ್ಟ್ರ ಸರ್ಕಾರವನ್ನು ಕಂಗನಾ ಎದುರು ಹಾಕಿಕೊಂಡಿದ್ದೂ ಎಲ್ಲರಿಗೂ ಗೊತ್ತೆ ಇದೆ.   ಕಂಗನಾ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆ ನೀಡಿದೆ.

ಮುಂಬೈಗೆ ಬಂದಿದ್ದ ಕಂಗನಾ ಮುಂಬೈ ತೊರೆದಿದ್ದಾರೆ . ಇದೇ ಅವಕಾಶ ಬಳಸಿಕೊಂಡ ವಕೀಲ ಬ್ರಿಜೇಶ್ ಕಾಳಪ್ಪ ಕಂಗನಾ ಅವರಿಗೆ ನೀಡಿರುವ ವೈ ಪ್ಲಸ್ ಭದ್ರತೆ ಹಿಂಪಡೆಯಬೇಕು ಎಂದು ಟ್ವೀಟ್ ಮಾಡಿದ್ದರು.

ಮಹಾ ಸರ್ಕಾರಕ್ಕೆ ಸವಾಲೆಸೆದ ಕಂಗನಾಗೆ ಹೊಸ ಜವಾಬ್ದಾರಿ

ಮುಂಬೈನಿಂದ ಹಿಮಾಚಲ ಪ್ರದೇಶದ ತಮ್ಮ ಮನೆಗೆ ಹೊರಟ ಅವರು ಈಗ ಸುರಕ್ಷಿತ. ಅವರಿಗೆ ಭದ್ರತೆ ಬೇಕಾಗಿಲ್ಲ. ವೈ ಪ್ಲಸ್ ಸೆಕ್ಯೂರಿಟಿಗೆ ಪ್ರತಿ ತಿಂಗಳು ಹತ್ತು ಲಕ್ಷ ರೂ. ಖರ್ಚಾಗುತ್ತದೆ.  ಇದು ದೇಶದ ತೆರಿಗೆದಾರರ ಹಣ. ಈಗ ಕಂಗನಾ ತವರನಲ್ಲಿ ಸೇಫ್( ಅವರು ಹೇಳಿದ್ದ ಪಾಕ್ ಆಕ್ರಮಿತ ಕಾಶ್ಮೀರದಿಂದ ದೂರ)  ಮೋದಿ ಸರ್ಕಾರ ದಯಮಾಡಿ ಆಕೆಗೆ ನೀಡುರುವ ಭದ್ರತೆ ಹಿಂದಕ್ಕೆ ಪಡೆಯಬೇಕು ಎಂದು ಬ್ರಿಜೇಶ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಅಷ್ಟೆ ಚೆನ್ನಾಗಿ ಉತ್ತರ ನೀಡಿರುವ ಕಂಗನಾ, ಬ್ರಿಜೇಶ್ ಅವರೆ ನೀವು ಅಥವಾ ನಾವು ಯೋಚನೆ ಮಾಡಿದ ಆಧಾರದ ಮೇಲೆ ಭದ್ರತೆ ನೀಡಲಾಗುವುದಿಲ್ಲ.  ಗುಪ್ತಚರ ದಳ ನೀಡುವ ಮಾಹಿತಿ ಆಧಾರದಲ್ಲಿ ಭದ್ರತೆ ನೀಡಲಾಗುತ್ತದೆ. ದೇವರ ದಯೆ ಇದ್ದರೆ ಮುಂದಿನ ದಿನದಲ್ಲಿ ಸೆಕ್ಯೂರಿಟಿ ಹಿಂದಕ್ಕೆ ಪಡೆಯಬಹುದು, ಒಂದು ವೇಳೆ ಗುಪ್ತಚರ ದಳದ ವರದಿ ಮತ್ತೆ ಬೆದರಿಕೆ ಇದೆ ಅಂದರೆ ನೀಡಿರುವ ಸೆಕ್ಯೂರಿಟಿ ಇನ್ನೊಂದು ಕೈ ಹೆಚ್ಚಾಗಬಹುದು ಎಂದಿದ್ದಾರೆ.