Asianet Suvarna News Asianet Suvarna News

ಉತ್ತರಪ್ರದೇಶ ಮಾಜಿ ಸಿಎಂ ಕಲ್ಯಾಣ್‌ ಸಿಂಗ್ ಆಸ್ಪತ್ರೆಗೆ ದಾಖಲು!

* ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್‌ ಸಿಂಗ್ ಅನಾರೋಗ್ಯ

* ಲಕ್ನೋವಿನ ಆಸ್ಪತ್ರೆಗೆ ಕಲ್ಯಾಣ್ ಸಿಂಗ್ ದಾಖಲು

* ಆಸ್ಪತ್ರೆಗೆ ಭೇಟಿ ಕೊಟ್ಟ ಹಾಲಿ ಸಿಎಂ ಯೋಗಿ ಆದಿತ್ಯನಾಥ್

Kalyan Singh admitted to hospital Yogi Adityanath visits former Uttar Pradesh CM pod
Author
Bangalore, First Published Jul 4, 2021, 12:46 PM IST

ಲಕ್ನೋ(ಜು.04): ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌(89) ರವರ ಆರೋಗ್ಯ ಹದಗೆಟ್ಟಿದ್ದು, ಅವವರನ್ನು ಲಕ್ನೋವಿನ ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಕಳೆದ ವಾರವಷ್ಟೇ ಅವರು ಇಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.

ವೈದ್ಯರು ಹೇಳಿದ್ದೇನು?

ಶನಿವಾರ ಮಧ್ಯಾಹ್ನವೇ ಸಿಂಗ್ ಆರೋಗ್ಯ ಏಕಾಏಕಿ ಹದಗೆಟ್ಟಿದೆ. ವೈದ್ಯರು ಅವರ ದೇಹದಲ್ಲಿ ಊತ ಕಾಣಿಸಿಕೊಂಡಿದೆ ಎಂದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಕ್ರಿಟಿನಿನ್ ಹಿಗ್ಗಿರುವುದು ಬೆಳಕಿಗೆ ಬಂದಿದೆ. ಇನ್ನು ಡಾಕ್ಟರ್ ಶ್ರೀಕೇಶ್ ಶರ್ಮಾ ನೀಡಿರುವ ಮಾಹಿತಿ ಅನ್ವಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ. 

ಆಸ್ಪತ್ರೆಗೆ ಯೋಗಿ ಭೇಟಿ

ಇನ್ನು ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಹದಗೆಟ್ಟಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಉತ್ತರ ಪ್ರದೇಶದ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇನ್ನು ಶೀಘ್ರದಲ್ಲೇ ಅವರ ಹೆಲ್ತ್‌ ಬುಲೆಟಿನ್‌ ಬಿಡುಗಡೆಗೊಳಿಸುವುದಾಗಿಯೂ ವೈದ್ಯರು ತಿಳಿಸಿದ್ದಾರೆ.

ಕೊರೋನಾ ಮಣಿಸಿದ ಕಲ್ಯಾಣ್ ಸಿಂಗ್

ಕಳೆದ ಸೆಪ್ಟೆಂಬರ್ 7ರಂದು ಕಲ್ಯಾಣ್‌ ಸಿಂಗ್‌ರವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ಲಕ್ನೋವಿನ ಆಯುರ್ವಿಜ್ಞಾನ ಸಂಸ್ಥೆಗೆ ಅವರನ್ನು ದಾಖಲಿಸಲಾಗಿತ್ತು. ಸುಮಾರು ಒಂದು ತಿಂಗಳ ಚಿಕಿತ್ಸೆ ಬಳಿಕ ಅಕ್ಟೋಬರ್‌ನಲ್ಲಿ ಅವರು ಡಿಸ್ಚಾರ್ಜ್ ಆಗಿದ್ದರು. ಬಿಜೆಪಿಯ ಪ್ರಮುಖ ನಾಯಕರಲ್ಲಿ ಗುರುತಿಸಿಕೊಂಡಿರುವ ಕಲ್ಯಾಣ್‌ ಸಿಂಗ್‌ರವರು ಯುಪಿಯ ಮಾಜಿ ಸಿಎಂ ಮಾತ್ರವಲ್ಲ, ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. 
 

Follow Us:
Download App:
  • android
  • ios