ಕುರುಬ-ಕೋಲಿ ಸಮುದಾಯಕ್ಕೆ ಮೀಸಲು ನೀಡಿ; ಲೋಕಸಭೆಯಲ್ಲಿ ಬಿಜೆಪಿ ಸಂಸದ ಆಗ್ರಹ

ಕುರುಬ ಮತ್ತು ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸುವಂತೆ ಆಗ್ರಹ ಲೋಕಸಭೆಯಲ್ಲಿ ಸಂಸದ ಉಮೇಶ್ ಜಾಧವ್ ಪ್ರಸ್ತಾಪ/ ಸಾಮಾಜೀಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮಂಡಿಸಿದ್ದ ವಿಧೇಯಕ/ ವಿಧೇಯಕದ ಪರವಾಗಿ ಮಾತನಾಡಿದ ಉಮೇಶ್ ಜಾಧವ್/ ಕುರುಬ ಮತ್ತು ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸಲು ಒತ್ತಾಯ/ ಈ ಕುರಿತು ಹಲವಾರು ದಾಖಲೆಗಳು ಬುಡಕಟ್ಟು ಕಲ್ಯಾಣ ಸಚಿವಾಲಯಕ್ಕೆ ಕಳಿಸಲಾಗಿದೆ

Kalaburagi MP umesh jadhav urges to give reservation for kuruba and koli community mah

ನವದೆಹಲಿ(ಮಾ. 19) ಕರ್ನಾಟಕದಲ್ಲಿ ನಡೆಯುತ್ತಿದ್ದ ಮೀಸಲು ಹೋರಾಟ ಇದೀಗ ನವದೆಹಲಿ ಸಂಸತ್ ಅಂಗಳವನ್ನು ತಲುಪಿದೆ ಕುರುಬ ಮತ್ತು ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸುವಂತೆ ಸಂಸದ ಉಮೇಶ್  ಜಾಧವ್  ಆಗ್ರಹ ಮಾಡಿದ್ದಾರೆ.

ಲೋಕಸಭೆಯಲ್ಲಿ ಸಂಸದ ಉಮೇಶ್ ಜಾಧವ್ ವಿಷಯ ಪ್ರಸ್ತಾಪ ಮಾಡಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮಂಡಿಸಿದ್ದ ವಿಧೇಯಕದ ಪರವಾಗಿ  ಉಮೇಶ್ ಜಾಧವ್ ಮಾತನಾಡಿದರು. ಕುರುಬ ಮತ್ತು ಕೋಲಿ ಸಮಾಜವನ್ನು ಎಸ್ ಟಿಗೆ ಸೇರಿಸಲು ಒತ್ತಾಯ ಮಾಡಿದರು.

ಜಾತಿವಾರು ಮೀಸಲು ತೆಗೆಯಲು ಕೇಂದ್ರದ ಆಲೋಚನೆ

ಈ ಕುರಿತು ಹಲವಾರು ದಾಖಲೆಗಳನ್ನು ಬುಡಕಟ್ಟು ಕಲ್ಯಾಣ ಸಚಿವಾಲಯಕ್ಕೆ ಕಳಿಸಲಾಗಿದೆ. ಅತೀ ಶೀಘ್ರದಲ್ಲೇ ದಾಖಲೆಗಳನ್ನು ಪರಿಶೀಲಿಸಿ ಎಸ್ ಟಿಗೆ ಸೇರಿಸಬೇಕು ಎಂದು ವಿಧೇಯಕದ ಚರ್ಚೆ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಕಲಬುರಗಿ ಸಂಸದರು ಆಗ್ರಹ ಮಾಡಿದರು.

ಕರ್ನಾಟಕದಲ್ಲಿ ಪಂಚಮಸಾಲಿ, ಒಕ್ಕಲಿಗ ಮತ್ತು ಕುರುಬ ಸಮುದಾಯಕ್ಕೆ ಮೀಸಲು ನೀಡಬೇಕು ಎಂದು ಬಹುದಿನಗಳಿಂದ ಹೋರಾಟ ನಡೆಯುತ್ತಿದೆ. ಪ್ರತಿಭಟನೆಗಳು ನಡೆದಿದ್ದು ಹಲವು ಸಂದರ್ಭ ಕರ್ನಾಟಕ ರಾಜ್ಯ ಸರ್ಕಾರವೇ  ಇಕ್ಕಟ್ಟಿಗೆ ಸಿಲುಕಿತ್ತು. 

 

Latest Videos
Follow Us:
Download App:
  • android
  • ios