Asianet Suvarna News Asianet Suvarna News

ಜಿಲ್ಲಾಧಿಕಾರಿಯ ಅಚ್ಚರಿಯ ಭೇಟಿ, 'ಫೈಲ್‌ ಪೆಂಡಿಂಗ್‌' ಇರಿಸಿದ್ದ ಕಂದಾಯ ಅಧಿಕಾರಿಗೆ ಅಮಾನತು ಶಿಕ್ಷೆ!

ಅಂದಾಜು ಎರಡು ತಿಂಗಳಿನಿಂದ ಭೂಮಿ ರೂಪಾಂತರಕ್ಕಾಗಿ ಬಂದಿದ್ದ 97 ಫೈಲ್‌ಗಳನ್ನು ಪೆಂಡಿಂಗ್‌ ಇರಿಸಿದ್ದ ಕಾರಣಕ್ಕೆ ಕಂದಾಯ ಅಧಿಕಾರಿಯನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ. ಅದರೊಂದಿಗೆ 45 ಸಾವಿರ ರೂಪಾಯಿ ದಂಡವನ್ನೂ ಆತನಿಗೆ ವಿಧಿಸಲಾಗಿದೆ.
 

Kaimur district magistrate sawan kumar surprise inspection at circle office Bihar official suspended san
Author
First Published Apr 25, 2023, 7:49 PM IST | Last Updated Apr 25, 2023, 7:49 PM IST

ನವದೆಹಲಿ (ಏ.25): ಕಂದಾಯ ಇಲಾಖೆಯ ಕಚೇರಿಗೆ ಜಿಲ್ಲಾಧಿಕಾರಿಯೊಬ್ಬರು ಹಠಾತ್‌ ಭೇಟಿ ನೀಡಿದ್ದ ವೇಳೆ, ಅಧಿಕಾರಿಯೊಬ್ಬರು ಭೂಮಿ ರೂಪಾಂತರಕ್ಕೆ ಸಂಬಂಧಿಸಿದ 97 ಫೈಲ್‌ಗಳನ್ನು ಕಳೆದ ಎರಡು ತಿಂಗಳಿನಿಂದ ಪೆಂಡಿಂಗ್‌ ಇರಿಸಿದ್ದ ಕಾರಣಕ್ಕೆ ಅಮಾನತುಗೊಂಡಿದ್ದಾರೆ. ಅದರೊಂದಿಗೆ ಆತನಿಗೆ 45 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಅದರೊಂದಿಗೆ ನಿಗದಿತ ಸಮಯದ ಒಂದು ಗಂಟೆಯ ನಂತರವೂ ಕರ್ತವ್ಯಕ್ಕೆ ಗೈರುಹಾಜರಾದ ಗುತ್ತಿಗೆ ಗುಮಾಸ್ತರನ್ನು ವಜಾಗೊಳಿಸುವಂತೆ ಮತ್ತು ಐವರು ಅಧಿಕಾರಿಗಳ ಐದು ದಿನಗಳ ವೇತನವನ್ನು ಕಡಿತಗೊಳಿಸುವಂತೆ ಡಿಎಂ ನಿರ್ದೇಶಿಸಿದ್ದಾರೆ.ಹೊಸದಾಗಿ ಸೇರ್ಪಡೆಗೊಂಡ ಡಿಎಂ ಸಾವನ್‌ಕುಮಾರ್ ಸೋಮವಾರ ನುವಾನ್ ವೃತ್ತದ ಕಚೇರಿಯಲ್ಲಿ ದಿಢೀರ್‌ ಪರಿಶೀಲನೆ ನಡೆಸಿದ್ದು, ಇಲಾಖೆ ನಿಯಮಗಳಿಗೆ ವಿರುದ್ಧವಾಗಿ 60 ದಿನಗಳಿಂದ 97 ಭೂಮಿ ಮ್ಯುಟೇಶನ್ ಪ್ರಕರಣಗಳು ಬಾಕಿ ಉಳಿದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ, ಅವ್ಯವಹಾರ ಹಾಗೂ ಮೇಲಧಿಕಾರಿಗಳ ಆದೇಶ ಉಲ್ಲಂಘನೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವೃತ್ತಾಧಿಕಾರಿ ಬದ್ರಿ ಪ್ರಸಾದ್ ಗುಪ್ತಾ ಅವರನ್ನು ಮಂಗಳವಾರ ಅಮಾನತುಗೊಳಿಸಿದ್ದಾರೆ. ಇನ್ನು ಅವರಿಗೆ ವಿಧಿಸಿರುವ 45 ಸಾವಿರ ರೂಪಾಯಿ ದಂಡವನ್ನು ಅವರ ವೇತನದಿಂದ ಕಡಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಧೌರಾದಲ್ಲಿ ಕಂದಾಯ ಅಧಿಕಾರಿಯ ನಿವಾಸವಿದ್ದು, ಅಮಾನತು ಅವಧಿಯಲ್ಲಿ ಸರ್ಕಾರದಿಂದ ಅವರ ಜೀವನಭತ್ಯೆ ಮಾತ್ರವೇ ಪಾವತಿ ಮಾಡಬೇಕು. ಅದರ ಹೊರತಾಗಿ ಯಾವ ಒಂದೂ ಭತ್ಯೆ ಕೂಡ ಅವರಿಗೆ ನೀಡಬಾರದು ಎಂದು ಜಿಲ್ಲಾಧಿಕಾರಿ ಸಾವನ್‌ ಕುಮಾರ್‌ ನಿರ್ದೇಶನ ನೀಡಿದ್ದಾರೆ.ಮುಂದಿನ ಕ್ರಮಕ್ಕಾಗಿ ಪ್ರಸಾದ್ ವಿರುದ್ಧ 15 ದಿನಗಳಲ್ಲಿ ಆರೋಪಗಳನ್ನು ದಾಖಲಿಸುವಂತೆ ಕಚೇರಿಗೆ ಸೂಚಿಸಲಾಗಿದೆ.

ಬಾಲ್ಯದಲ್ಲಿ ನಮ್ಮನ್ನು ಅಚ್ಚರಿಗೆ ನೂಕಿದ್ದ 'ಸರ್ಕಸ್‌' ಪಿತಾಮಹ ಜೆಮಿನಿ ಶಂಕರನ್‌ ವಿಧಿವಶ!

ಎಂಎನ್‌ಆರ್‌ಇಜಿಎ ಕಾರ್ಯಕ್ರಮ ಅಧಿಕಾರಿ, ಮುಖ್ಯ ಗುಮಾಸ್ತ ಕುಮಾರ್ ಓಂ ಪ್ರಕಾಶ್, ಗುತ್ತಿಗೆ ಗುಮಾಸ್ತ ದೇವ್ ಕುಮಾರ್ ರಾಮ್, ಐಟಿ ಸಹಾಯಕ ಮನು ಕುಮಾರ್, ಡೇಟಾ ಎಂಟ್ರಿ ಆಪರೇಟರ್ ಅಭಯ್ ತಿವಾರಿ ಮತ್ತು ಆಧಾರ್ ಕಾರ್ಡ್ ಎಂಟ್ರಿ ಆಪರೇಟರ್ ಸುನೀಲ್ ಕುಮಾರ್ ಅವರು ಬೆಳಿಗ್ಗೆ 11.15ರ ಸಮಯದಲ್ಲಿ ಕಚೇರಿಯ ಕರ್ತವ್ಯದಲ್ಲಿ ಇದ್ದಿರಲಿಲ್ಲ. ವಿವರಣೆಯನ್ನು ಪಡೆದ ನಂತರ ಅವರ ಐದು ದಿನದ ವೇತನವನ್ನು ಕಡಿತಗೊಳಿಸುವಂತೆ ಮತ್ತು ದೇವ್ ಕುಮಾರ್ ರಾಮ್ ಅವರ ಒಪ್ಪಂದವನ್ನು ಕೊನೆಗೊಳಿಸುವಂತೆ ಡಿಎಂ ಸೂಚನೆ ನೀಡಿದ್ದಾರೆ.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ನಲ್ಲಿ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಖಚಿತಪಡಿಸಿಕೊಳ್ಳಲು ಮತ್ತು ಪೈಪ್‌ಲೈನ್‌ಗಳನ್ನು ಹಾಕುವಾಗ ಹಾನಿಗೊಳಗಾದ ಲೇನ್‌ಗಳು ಮತ್ತು ಡ್ರೈನೇಜ್‌ಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಡಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ (ಡಿಪಿಆರ್‌ಒ) ಸತ್ಯೇಂದ್ರ ತ್ರಿಪಾಠಿ ಹೇಳಿದರು.

Latest Videos
Follow Us:
Download App:
  • android
  • ios