ಇಂದೋರ್ (ಮಾ. 03): ಹನುಮಂತನ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಬಿಜೆಪಿ ಪ್ರಧಾನ ಕಾರ್ಯದಿರ್ಶಿ ಕೈಲಾಸ್ ವಿಜಯವರ್ಗೀಯ, ಹನುಮಾನ ವಿಗ್ರಹ ಪ್ರತಿಷ್ಠಾಪನೆಯ ಪ್ರಯುಕ್ತ ಬುಧವಾರ ಇಡೀ ಇಂದೋರ್ ನಗರಕ್ಕೆ ಊಟ ಹಾಕಿಸಲಿದ್ದಾರೆ.

ವಿಮಾನದಲ್ಲಿ ನೋ ಇಂಟರ್‌ನೆಟ್‌ ಟೆನ್ಷನ್; ಸಿಗಲಿದೆ ವೈಫೈ!

ಕಾರ್ಯಕ್ರಮಕ್ಕೆ ಇಡೀ ಇಂದೋರ್ ನಗರವನ್ನು ಆಹ್ವಾನಿಸಲಾಗಿದ್ದು, ಸುಮಾರು ೧೫ ಲಕ್ಷ ಜನರು ಭೋಜನ ಸ್ವೀಕರಿಸುವ ನಿರೀಕ್ಷೆ ಇದೆ. ಇದೋರ್‌ನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪಿತೃ ಪರ್ವತ್ ಸಮೀಪ ಹನುಮನ ಮೂರ್ತಿಯನ್ನು ಸ್ಥಾಪಿಸುವ ಪ್ರತಿಜ್ಞೆಯೊಂದಿಗೆ ೨೦ ವರ್ಷಗಳ ಹಿಂದೆ ಧಾನ್ಯಗಳ ಸೇವನೆಯನ್ನು ವಿಜಯ ವರ್ಗೀಯ ನಿಲ್ಲಿಸಿದ್ದರು.

ಮನೆ ಬಾಗಿಲಿಗೆ ಇನ್ಮುಂದೆ ಸರ್ಕಾರಿ ಸೇವೆ

ವಿಜಯ ವರ್ಗೀಯ ಅವರು ಇಂದೋರ್ ಮೇಯರ್ ಆದ ಸಂದರ್ಭದಲ್ಲಿ ಪಿತೃ ಪರ್ವತವನ್ನು ನಿರ್ಮಿಸಿ ಮರಗಿಡಗಳನ್ನು ಬೆಳೆಸಿದ್ದರು. ಅಲ್ಲಿ ಈಗ ಹನುಮತ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ತಮ್ಮ ಹರಕೆ  ಈಡೇರಿದ ಹಿನ್ನೆಲೆಯಲ್ಲಿ ಇಡೀ ಇಂದೋರ್ ನಗರಕ್ಕೆ ಊಟ ಹಾಕಿಸುತ್ತಿದ್ದಾರೆ.