ಪಂಜಾಬ್‌ನ ಲೂಧಿಯಾನದಲ್ಲಿ ವಾರದ ಅಂತರದಲ್ಲಿ ಇಬ್ಬರು ಕಬಡ್ಡಿ ಆಟಗಾರರಾ ಹತ್ಯೆಯಾಗಿದೆ. ಕಳೆದವಾರ ತೇಜ್‌ಪಾಲ್ ಸಿಂಗ್ ಮತ್ತು ಈಗ ಗುರ್ವಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಗುರ್ವಿಂದರ್ ಸಿಂಗ್ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.

ಪಂಜಾಬ್‌ನಲ್ಲಿ ಮತ್ತೊಬ್ಬ ಕಬ್ಬಡಿ ಆಟಗಾರನ ಹತ್ಯೆ: ಒಂದೇ ವಾರದಲ್ಲಿ 2ನೇ ಘಟನೆ

ಪಂಜಾಬ್‌ನ ಲೂಧಿಯಾನದಲ್ಲಿ ಒಂದೇ ವಾರದಲ್ಲಿ ಇಬ್ಬರು ಕ್ರಿಕೆಟ್ ಆಟಗಾರರ ಹತ್ಯೆ ನಡೆದಿದೆ. ನವಂಬರ್ ಆಕ್ಟೋಬರ್ 31ರ ಶುಕ್ರವಾರ ದುಷ್ಕರ್ಮಿಗಳು ರಾಷ್ಟ್ರಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದರು. ಈ ಘಟನೆ ಮಾಸುವ ಮೊದಲೇ ಪಂಜಾಬ್‌ನ ಲೂಧಿಯಾನದಲ್ಲಿ ಮತ್ತೊಬ್ಬ ಕ್ರಿಕೆಟ್ ಆಟಗಾರನ ಹತ್ಯೆ ನಡೆದಿದೆ. ಲುಧಿಯಾನ ಜಿಲ್ಲೆಯ ಸಮ್ರಾಲಾ ಬ್ಲಾಕ್‌ನಲ್ಲಿ ಕಬಡ್ಡಿ ಆಟಗಾರ ಗುರ್ವಿಂದರ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇವರ ಹತ್ಯೆಯೊಂದಿಗೆ ಈ ಪ್ರದೇಶದಲ್ಲಿ ಕಬಡ್ಡಿ ಆಟಗಾರರ ಹತ್ಯೆ ಮಾಡಿದ ಎರಡನೇ ಘಟನೆ ಇದಾಗಿದೆ.

ಕಬ್ಬಡಿ ಆಟಗಾರ ಗುರ್ವಿಂಧರ್ ಸಾವಿನ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್

ಕಬ್ಬಡಿ ಆಟಗಾರ ಗುರ್ವಿಂಧರ್ ಸಿಂಗ್ ಅವರ ಸಾವಿನ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ, ಅನ್ಮೋಲ್ ಬಿಷ್ಣೋಯ್' ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ದಾಳಿಯನ್ನು ತಾವೇ ಮಾಡಿದ್ದಾಗಿ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ. ಅನ್ಮೋಲ್ ಬಿಷ್ಣೋಯ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಕಬ್ಬಡಿ ಆಟಗಾರ ಗುರ್ವಿಂದರ್ ಸಿಂಗ್ ಹತ್ಯೆಯನ್ನು ನಿರ್ದಿಷ್ಟವಾಗಿ ಕರಣ್ ಮಧಪುರ್ ಹಾಗೂ ತೇಜ್ ಚಕ್ ಎಂಬುವರು ಮಾಡಿದ್ದಾರೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಗ್ಯಾಂಗ್ ಸದಸ್ಯರಾದ ಹ್ಯಾರಿ ಬಾಕ್ಸರ್ ಮತ್ತು ಆರ್ಜೂ ಬಿಷ್ಣೋಯ್ ಜಂಟಿಯಾಗಿ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ. ಇದು ಎಎಪಿ ಆಡಳಿತವಿರುವ ಪಂಜಾಬ್‌ನಲ್ಲಿ ಶಾಂತಿ ಸುವ್ಯವಸ್ಥೆಯ ಬಗ್ಗೆ ಕಳವಳ ಮೂಡುವಂತೆ ಮಾಡಿದೆ.

ಪೊಲೀಸ್ ಹಾಗೂ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ

ರಾಜ್ಯದ ಪ್ರಮುಖ ಉದ್ಯಮಿಗಳನ್ನು ಕ್ರಿಕೆಟಿಗರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಗುಂಡಿನ ದಾಳಿಯ ಬಗ್ಗೆ ತನಿಖೆ ಆರಂಭಿಸಿದ್ದು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಗ್ಯಾಂಗ್ ಹೆಸರಿಸಿರುವ ಶಂಕಿತರನ್ನು ಗುರುತಿಸಲು ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ದಾಳಿಕೋರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದರಿಂದ ಸಮ್ರಾಲಾ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಆಕ್ಟೋಬರ್ 31ರಂದು ಹತ್ಯೆಯಾಗಿದ್ದ ತೇಜ್‌ಪಾಲ್

ಇದಕ್ಕೂ ಮೊದಲು ಆಕ್ಟೋಬರ್ 31ರಂದು ನಡೆದ ಕಬ್ಬಡಿ ಆಟಗಾರ ತೇಜ್‌ಪಾಲ್ ಅವರ ಕೊಲೆಯೂ ಲುಧಿಯಾನ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿಯೇ ಹಾಡಹಗಲೇ ನಡೆದಿತ್ತು. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. 26 ವರ್ಷದ ತೇಜ್‌ಪಾಲ್ ಸಿಂಗ್ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ಹರಿ ಸಿಂಗ್ ಆಸ್ಪತ್ರೆ ರಸ್ತೆಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ ಮೇಲೆತ್ತಿದ್ದ ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಇನ್ನಿಲ್ಲ

ಇದನ್ನೂ ಓದಿ: ನಿನಗಾಗಿ ಹೆಂಡ್ತಿ ಕೊಂದೇ: ಒಂದೇ ಮೆಸೇಜ್‌ 4-5 ಹೆಂಗಸರಿಗೆ ಕಳುಹಿಸಿದ್ದ ಸ್ತ್ರೀಲೋಲ ಡಾ. ಮಹೇಂದ್ರ