Asianet Suvarna News Asianet Suvarna News

ಇಸ್ರೋ ಉಪಗ್ರಹ ಮೇಲೆ ಚೀನಾ ಧ್ವಜ, ಡಿಎಂಕೆ ಜಾಹೀರಾತು ಬಂಡವಾಳ ಬಯಲು ಮಾಡಿದ ಅಣ್ಣಾಮಲೈ!

ತಮಿಳುನಾಡಿನಲ್ಲಿ ಇಸ್ರೋ  ಉಪಗ್ರಹ ಉಡಾವಣೆ ಕೇಂದ್ರದ ಶಿಲನ್ಯಾಸ ಕುರಿತು ಡಿಎಂಕೆ ಜಾಹೀರಾತು ಪ್ರಕಟಿಸಿ ಪೇಚಿಗೆ ಸಿಲುಕಿದೆ. ಇಸ್ರೋ ಉಪಗ್ರಹದ ಮೇಲೆ ಚೀನಾ ಧ್ವಜ ಜಾಹೀರಾತನ್ನು ಡಿಎಂ ಪ್ರಕಟಿಸಿದೆ. ಡಿಎಂಕೆ ಬದ್ಧತೆ ಹಾಗೂ ಇಸ್ರೋ ವಿಚಾರದಲ್ಲಿ ಪಕ್ಷ ನಡೆದುಕೊಂಡ ರೀತಿಯನ್ನು ಬಿಜೆಪಿ ನಾಯಕ ಅಣ್ಣಾಮಲೈ ಬಟಾ ಬಯಲು ಮಾಡಿದ್ದಾರೆ.
 

K Annamalai slams DMK over ISRO launch pad advertisement Question Stalin commitment towards china ckm
Author
First Published Feb 28, 2024, 12:38 PM IST

ಚೆನ್ನೈ(ಫೆ.28) ತಮಿಳುನಾಡಿನ ಡಿಎಂ ಸರ್ಕಾರ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡಿನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಈ ಕುರಿತು ಡಿಎಂಕೆ ಎಲ್ಲಾ ಪತ್ರಿಕೆಗಳಿಗೆ ನೀಡಿದ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಇಸ್ರೋ ಉಪಗ್ರಹದ ಮೇಲೆ ಚೀನಾ ಧ್ವಜವಿರುವ ಫೋಟೋವನ್ನು ಡಿಎಂಕೆ ಬಳಸಿದೆ. ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಈ ಜಾಹೀರಾತು ಡಿಎಂಕೆ ಪಕ್ಷದ ಚೀನಾ ಬದ್ಧತೆ ಹಾಗೂ ದೇಶದ ಸೌರ್ವಭಮತ್ವದ ನಿರ್ಲಕ್ಷ್ಯದ ದ್ಯೋತಕವಾಗಿದೆ ಎಂದಿದ್ದಾರೆ.

ಡಿಎಂಕೆ ನೀಡಿರುವ ಜಾಹೀರಾತು ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಡಿಎಂಕೆ ಸರ್ಕಾರ ಅತ್ತ ಸಮರ್ಥನೆ ಮಾಡಿಕೊಳ್ಳಲು ಆಗದೆ, ಇತ್ತ  ಉತ್ತರ ನೀಡಲೂ ಆಗದೆ ಪೇಚಿಗೆ ಸಿಲುಕಿದೆ. ಡಿಎಂಕೆ ಸಚಿವೆ ಅನಿತಾ ರಾಧಾಕೃಷ್ಣನ್ ಈ ಜಾಹೀರಾತನ್ನು ನೀಡಿದ್ದಾರೆ. ಪ್ರಮುಖವಾಗಿ ಇಲ್ಲಿ ಬಳಸಿರುವ ಚಿತ್ರಗಳೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರದ ಹಿಂಭಾಗದಲ್ಲಿ ಉಪಗ್ರಹ ನೌಕೆ ಫೋಟೋವನ್ನು ಬಳಸಲಾಗಿದೆ. ದೊಡ್ಡದಾಗಿ ಚಿತ್ರಿಸಿರುವ ಉಪಗ್ರಹದ ಫೋಟೋ ಮೇಲೆ ಚೀನಾ ಧ್ವಜ ಬಳಸಲಾಗಿದೆ. 

ಅಣ್ಣಾಮಲೈಗೆ ಬಿಗ್ ರಿಲೀಫ್: ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್‌

ಡಿಎಂಕೆ ಚೀನಾ ಪ್ರೀತಿ ಹಾಗೂ ಇಸ್ರೋ ಮೇಲೆ ಮಾಡಿರುವ ಅನ್ಯಾಯವನ್ನು ಅಣ್ಣಾಮಲೈ ಬಿಚ್ಚಿಟ್ಟಿದ್ದಾರೆ. ಇಸ್ರೋ ಎರಡನೇ ಉಡಾವಣೆ ಕೇಂದ್ರವನ್ನು ತಮಿಳುನಾಡಿನ ಕುಲಶೇಖರಪಟ್ಟಣದಲ್ಲಿ ನಿರ್ಮಿಸುವುದಾಗಿ ಘೋಷಣೆಯಾದ ಬೆನ್ನಲ್ಲೇ ಡಿಎಂಕೆ ತನ್ನ ಭ್ರಷ್ಟಾಚಾರ, ದುರಾಡಳಿತ ಮುಚ್ಚಿಕೊಳ್ಳಲು ಈ ರೀತಿಯ ಸ್ಟಿಕ್ಕರ್ ಅಂಟಿಸುತ್ತಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.  

ಡಿಎಂಕೆ ಸರ್ಕಾರ ಹಾಗೂ ಪಕ್ಷ ಹತಾಶೆಯಲ್ಲಿದೆ. ಹಿಂದೆ ಮಾಡಿರುವ ದುಷ್ಕೃತ್ಯಗಳು, ದುರಾಡಳಿತ, ಭ್ರಷ್ಟಾಚಾರ ಆಳ್ವಿಕೆಯನ್ನು ಮುಚ್ಚಿಹಾಕುವ ಪ್ರಯತ್ನದ ಫಲವಾಗಿ ಇಂತಹ ಜಾಹೀರಾತುಗಳು ಪ್ರಕಟಗೊಳ್ಳುತ್ತಿದೆ.ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರ  ಆಂಧ್ರಪ್ರದೇಶದಲ್ಲಿ ಯಾಕಿದೆ? ತಮಿಳುನಾಡಿನಲಲಿ ಯಾಕಿಲ್ಲ ಅನ್ನೋದರ ಇತಿಹಾಸವನ್ನೂ ಡಿಎಂಕೆಗೆ ನೆನಪಿಸಬೇಕಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.  

60 ವರ್ಷಗಳ ಹಿಂದೆ ಇಸ್ರೋ ತನ್ನ ಮೊದಲ ಉಡಾವಣೆ ಕೇಂದ್ರ ಆರಂಭಿಸಲು ಹಲವು ಸುತ್ತಿನ ಮಾತಕತೆ, ಚರ್ಚೆ ನಡೆಸಿತ್ತು. ಭಾರತ ಸರ್ಕಾರ ಜೊತೆಗೆನ ಚರ್ಚೆ ಬಳಿಕ ತಮಿಳನಾಡಿನಲ್ಲಿ ಇಸ್ರೋ ಉಡಾವಣೆ ಕೇಂದ್ರ ಆರಂಭಿಸುವುದು ಇಸ್ರೋದ ಮೊದಲ ಆಯ್ಕೆಯಾಗಿತ್ತು. ಆದರೆ ಈ ಸಭೆಗೆ ಆರೋಗ್ಯ ಸಮಸ್ಯೆ ಕಾರಣದಿಂದ ಮುಖ್ಯಮಂತ್ರಿ ಅಣ್ಣಾದೊರೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರದ ಪ್ರತಿನಿದಿಯಾಗಿ ಸಚಿವ ಮುತ್ತಿಯಳಗನ್ ಅವರನ್ನು ನಿಯೋಜಿಸಲಾಗಿತ್ತು. 

 

 

ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ: ವಿನಯ್ ಗುರೂಜಿ

ಮುತ್ತಿಯಳಗನ್ ಇಸ್ರೋ ಸಭೆಗೆ ಸತತವಾಗಿ ಗೈರಾಗಿದ್ದರು. ಇಸ್ರೋದ ಹಲವು ಪ್ರಯತ್ನಗ ಫಲವಾಗಿ ಮುತ್ತಿಯಳಗನ್ ಸಭೆಗೆ ಹಾಜರಾಗಿದ್ದರು. ಪಾನಮತ್ತರಾಗಿ ಸಭೆಗೆ ಹಾಜರಾದ ಮುತ್ತಿಯಳಗನ್ ಏನು ಮಾತನಾಡಿದ್ದಾರೆ ಅನ್ನೋದು ಸಭೆಯಲ್ಲಿದ್ದ ಯಾರಿಗೂ ಅರ್ಥವಾಗಿಲ್ಲ. ಡಿಎಂಕೆ ಸರ್ಕಾರದ ಒಬ್ಬ ಪ್ರತಿನಿಧಿಯಿಂದ ಇಸ್ರೋದ ಮೊದಲ ಉಡಾವಣೆ ಕೇಂದ್ರ ತಮಿಳುನಾಡು ಕೈತಪ್ಪಿತು. ಇದು 60 ವರ್ಷಗಳ ಹಿಂದೆ ಡಿಎಂಕೆ ನಡೆದುಕೊಂಡ ರೀತಿ.  ಕಳೆದ 60 ವರ್ಷಗಳಲ್ಲಿ ಡಿಎಂಕೆ ಈ ಮನಸ್ಥಿತಿಯಿಂದ ಬದಲಾಗಿಲ್ಲ, ಬದಲಾಗಿಟ್ಟ ಮತ್ತಷ್ಟು ಕೆಟ್ಟದಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. 

Follow Us:
Download App:
  • android
  • ios