Asianet Suvarna News Asianet Suvarna News

ರಾಹುಲ್‌ ಗಾಂಧಿ ಭಾರತ ವಿರೋಧಿ ಏಜೆನ್ಸಿಯಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ದಾರಾ..? ಬಿಜೆಪಿ ಪ್ರಶ್ನೆ

ಇಡೀ ಜಗತ್ತು ಭಾರತವನ್ನು ಬಣ್ಣಿಸಲು ಒಳ್ಳೆಯ ಪದಗಳನ್ನು ಬಳಸುತ್ತಿದ್ದರೆ, ಅದರ ಪ್ರಮುಖ ಪ್ರತಿಪಕ್ಷದ ನಾಯಕ ವಿದೇಶಿ ನೆಲದಲ್ಲಿ ದೇಶ ನಾಶವಾಗಿದೆ ಮತ್ತು ಪ್ರಜಾಪ್ರಭುತ್ವವು ಇನ್ಮುಂದೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. 

just because you are not bright bjps fresh dig at rahul gandhi ash
Author
First Published Mar 5, 2023, 2:25 PM IST

ನವದೆಹಲಿ (ಮಾರ್ಚ್‌ 5, 2023):  ಇತ್ತೀಚೆಗೆ ಕೇಂಬ್ರಿಡ್ಜ್‌ ವಿವಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದು, ಈ ವೇಳೆ ಭಾರತದ ವಿರುದ್ಧವೂ ಕಿಡಿ ಕಾರಿದ್ದರು. ಅಲ್ಲದೆ, ಚೀನಾವನ್ನು ಹೊಗಳಿದ್ದರು. ಈ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಮತ್ತು ಪಾಕಿಸ್ತಾನ ಕೂಡ ಮಾಡಲು ಧೈರ್ಯ ಮಾಡದ ದೇಶದ ಪರಿಸ್ಥಿತಿಗಳ ಬಗ್ಗೆ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇಡೀ ಜಗತ್ತು (World) ಭಾರತವನ್ನು (India) ಬಣ್ಣಿಸಲು ಒಳ್ಳೆಯ ಪದಗಳನ್ನು ಬಳಸುತ್ತಿದ್ದರೆ, ಅದರ ಪ್ರಮುಖ ಪ್ರತಿಪಕ್ಷದ ನಾಯಕ ವಿದೇಶಿ ನೆಲದಲ್ಲಿ ದೇಶ ನಾಶವಾಗಿದೆ ಮತ್ತು ಪ್ರಜಾಪ್ರಭುತ್ವವು ಇನ್ಮುಂದೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗೂ, ನ್ಯಾಯಾಂಗ ಮತ್ತು ಮಾಧ್ಯಮವು ಕೆಟ್ಟ ಸ್ಥಿತಿಯಲ್ಲಿದೆ ಎಂದು ಬಿಜೆಪಿ ವಕ್ತಾರ (BJP Spokesperson) ಸಂಬಿತ್ ಪಾತ್ರ (Sambit Patra) ವರದಿಗಾರರಿಗೆ ಹೇಳಿದ್ದಾರೆ. ಅಲ್ಲದೆ, ಜಗತ್ತು ದೇಶವನ್ನು "ಪ್ರಕಾಶಮಾನವಾದ ತಾಣ" ಎಂದು ನೋಡುತ್ತಿರುವ ಮತ್ತು ವಿದೇಶಿ ಸಂಸ್ಥೆಗಳು ಇಲ್ಲಿ ವ್ಯಾಪಾರ ಮಾಡಲು ಚೀನಾವನ್ನು ತೊರೆಯುತ್ತಿರುವ ಸಮಯದಲ್ಲಿ ರಾಹುಲ್‌ ಗಾಂಧಿಯವರು (Rahul Gandhi) ಹೂಡಿಕೆದಾರರನ್ನು (Investors) ಭಾರತದಲ್ಲಿ ಹೂಡಿಕೆ ಮಾಡುವುದನ್ನು ತಡೆಯುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

ಇದನ್ನು ಓದಿ: ‘ಸತ್ಯ’ ಬದಲು ‘ಸತ್ತಾ’ ಎಂದ ರಾಹುಲ್‌ ಗಾಂಧಿ: ಬಿಜೆಪಿ ಅಣಕ

"ದೊಡ್ಡ ವಿಶ್ವವಿದ್ಯಾನಿಲಯದಲ್ಲಿ, ಅವರು ಜನರಿಗೆ ಭಾರತದ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಿದ್ದಾರೆ. ಪಾಕಿಸ್ತಾನವು ಸಹ ಇನ್ಮುಂದೆ ಜಾಗತಿಕ ವೇದಿಕೆಯಲ್ಲಿ ಭಾರತದ ಬಗ್ಗೆ ಈ ವಿಷಯಗಳನ್ನು ಹೇಳಲು ಧೈರ್ಯ ಮಾಡದಿದ್ದರೂ, ರಾಹುಲ್‌ ಗಾಂಧಿ ಭಾರತವನ್ನು ಪ್ರಜಾಪ್ರಭುತ್ವವು ಇನ್ನು ಮುಂದೆ ಇಲ್ಲದಿರುವ ಮತ್ತು ನ್ಯಾಯಾಂಗವನ್ನು ರಾಜಿ ಮಾಡಿಕೊಂಡಿರುವ ಸ್ಥಳವೆಂದು ಪ್ರಸ್ತುತಪಡಿಸುತ್ತಿದ್ದಾರೆ’’ ಎಂದೂ ಅವರು ಕಿಡಿ ಕಾರಿದ್ದಾರೆ.

ಅಲ್ಲದೆ, ಭಾರತದ ಸ್ಥಾನವನ್ನು ಕೆಳಗಿಳಿಸಲು ರಾಹುಲ್‌ ಗಾಂಧಿ ಏಜೆನ್ಸಿಯೊಂದರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಸಂಬಿತ್‌ ಪಾತ್ರ ಪ್ರಶ್ನೆ ಮಾಡಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಉಪನ್ಯಾಸವೊಂದರಲ್ಲಿ, ರಾಹುಲ್‌ ಗಾಂಧಿ ಅವರು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಮತ್ತು ತಾವು ಸೇರಿದಂತೆ ಹಲವಾರು ರಾಜಕಾರಣಿಗಳು ಕಣ್ಗಾವಲಿನಲ್ಲಿದ್ದಾರೆ ಎಂದೂ ಆರೋಪಿಸಿದ್ದರು. 

ಇದನ್ನೂ ಓದಿ: 52 ವರ್ಷ ಆದ್ರೂ ಸಿಂಗಲ್ ಆಗಿರೋದೇಕೆ ಅನ್ನೋದನ್ನ ಬಹಿರಂಗಪಡಿಸಿದ ರಾಹುಲ್ ಗಾಂಧಿ..!
 
ಹಾಗೆ, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸುವ ಬಗ್ಗೆ ಕಾಂಗ್ರೆಸ್ ನಾಯಕ ಮಾತನಾಡಿದ್ದಾರೆ ಮತ್ತು "ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬವು ಭಾರತದ ರಚನೆಯನ್ನು ನಾಶಮಾಡಲು ಯಾವುದೇ ಕೀಳು ಮಟ್ಟಕ್ಕೆ ಇಳಿಯಬಹುದು" ಎಂದೂ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. "ನೀವು ಬ್ರೈಟಾದ ಮಗು ಅಲ್ಲ ಮತ್ತು ನಿಮ್ಮ ರಾಜವಂಶದ ಪಕ್ಷದ ಬ್ರೈಟಾದ ಮಗು ಅಲ್ಲ ಎಂದ ಮಾತ್ರಕ್ಕೆ ಭಾರತವು ಪ್ರಕಾಶಮಾನವಾದ ತಾಣವಲ್ಲ ಎಂದು ಅರ್ಥವಲ್ಲ" ಎಂದೂ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಅಲ್ಲದೆ, ಪೆಗಾಸಸ್ ಮಾಲ್ವೇರ್ ಮೂಲಕ ಕಣ್ಗಾವಲು ಮಾಡಿದ ಆರೋಪವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸ್ಥಾಪಿಸಿದ ತನಿಖಾ ಸಮಿತಿಯ ಪರಿಶೀಲನೆಗೆ ರಾಹುಲ್‌ ಗಾಂಧಿ ಅಥವಾ ಇತರ ಕಾಂಗ್ರೆಸ್ ನಾಯಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸಲ್ಲಿಸಲೇ ಇರಲಿಲ್ಲ ಎಂದು ಸಂಬಿತ್ ಪಾತ್ರ ಹೇಳಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ ಸಂಸದ

Follow Us:
Download App:
  • android
  • ios