Asianet Suvarna News Asianet Suvarna News

ಚುನಾವಣೆಗೆ ಮುನ್ನ ಮೋದಿ ರಣೋತ್ಸಾಹ, 73ರ ವಯಸ್ಸಿನಲ್ಲೂ ಸಾಲು ಸಾಲು ಸಭೆಗಳಲ್ಲಿ ಭಾಗಿ!


ರಾಜಕಾರಣಿಗಳುಗೆ ಚುನಾವಣೆ ಹೊರತಾಗಿ ಮತ್ತೆ ಯಾವ ವಿಚಾರಗಳು ಉತ್ಸಾಹ ಕೊಡೋದಿಲ್ಲ. ಆದರೆ, ಪ್ರಧಾನಿ ಮೋದಿ ಮಾತ್ರ ಭಿನ್ನ ಅನ್ನೋದಕ್ಕೆ ಕಾರಣಗಳಿವೆ. ಸಾಲು ಸಾಲು ಚಟುವಟಿಕೆಗಳಿಲ್ಲದೆ ಅವರ ದಿನ ಮುಗಿಯುವುದೇ ಇಲ್ಲ.
 

Just a day in the life of PM Modi NaMo Navmatdata Sammelan Solar Policy Meeting and Jaipur Vist san
Author
First Published Jan 25, 2024, 4:07 PM IST

ಬೆಂಗಳೂರು (ಜ.25): ಈ ವರ್ಷ ಲೋಕಸಭೆ ಚುನಾವಣೆ ವರ್ಷ. ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ತನ್ನ ಮೊದಲ ಅಭಿಯಾನ ಆರಂಭಿಸಿದೆ. 2024ರ ಬಿಜೆಪಿ ಪ್ರಣಾಳಿಕೆ ಹೇಗಿರಬೇಕು ಎನ್ನುವುದರ ಬಗ್ಗೆ ದೇಶದ ಯುವಕರ ಸಲಹೆ ಕೇಳಿದ್ದಾರೆ. ನಿಸ್ಸಂಶಯವಾಗಿ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೈಮ್‌ ಫೇಸ್‌. ತನ್ನ ಎಲ್ಲಾ ಪ್ರಚಾರ ಕಾರ್ಯಕ್ರಮಗಳಲ್ಲಿ ಮೋದಿ ಇರಲೇಬೇಕು ಎಂದು ಬಯಸುತ್ತದೆ. ಆದರೆ, ಅವರ ವಯಸ್ಸೀಗ 73 ಮೊದಲಿನಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲ ಎನ್ನುವ ಮಾತುಗಳು ಇರುವ ನಡುವೆಯೇ ಅವರು ಪ್ರತಿದಿನ ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ವಿಶ್ರಾಂತಿ ಯಾವಾಗ ಪಡೆದುಕೊಳ್ಳುತ್ತಾರೆ ಎನ್ನುವ ಕುತೂಹಲಗಳ ಜನರಿಗೆ ಮಾತ್ರವಲ್ಲ ಬಿಜೆಪಿಯ ನಾಯಕರಿಗೆ ಬರುತ್ತದೆ. ಒಂದು ಕ್ಷಣವನ್ನೂ ಮಿಸ್‌ ಮಾಡಿಕೊಳ್ಲಲು ಬಯಸದ ಪ್ರಧಾನಿ ಮೋದಿ ಗುರುವಾರ ಕೂಡ ದೇಶದೆಲ್ಲಡೆ ಮಿಂಚಿನ ಸಂಚಾರ ಮಾಡಿದರು. ಅದಕ್ಕೆ ಕಾರಣ ಗಣರಾಜ್ಯೋತ್ಸವ. ಜನವರಿ 26ರ ಕಾರ್ಯಕ್ರಮಕ್ಕೆ ಈಗಾಗಲೇ ಕೆಲವೊಂದು ಕಾರ್ಯಕ್ರಮಗಳು ನಿಗದಿಯಾಗಿದೆ. ಅದನ್ನು ಮಿಸ್‌ ಮಾಡಿಕೊಳ್ಳುವಂತಿಲ್ಲ. ಅದರೊಂದಿಗೆ ಪಕ್ಷದ ಕೆಲವು ಕಾರ್ಯಕ್ರಮಗಳು ಬಳಿಕ ಸರ್ಕಾರದ ಕೆಲವು ಕಾರ್ಯಕ್ರಮಗಳೊಂದಿಗೆ ಅವರು ಸಖತ್‌ ಬ್ಯುಸಿಯಾಗಿದ್ದರು.

ಗುರುವಾರ ಬೆಳಗ್ಗೆ ದೆಹಲಿಯಿಂದಲೇ ವರ್ಚುವಲ್‌ ಆಗಿ ನಮೋ ನವಮತದಾತ ಕಾರ್ಯಕ್ರಮ ಉದ್ಘಾಟಿಸಿದ ಅವರು, "18 ರಿಂದ 25 ರ ನಡುವಿನ ವಯಸ್ಸು ಯುವಕರ ಜೀವನವನ್ನು ರೂಪಿಸುತ್ತದೆ ಮತ್ತು ಅವರು ತಮ್ಮ ಜೀವನದಲ್ಲಿ ಕ್ರಿಯಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾರೆ. ಈ ಬದಲಾವಣೆಗಳ ಜೊತೆಗೆ ಅವರು ವಿವಿಧ ಜವಾಬ್ದಾರಿಗಳ ಭಾಗವಾಗುತ್ತಾರೆ ಮತ್ತು ಈ ಅಮೃತ ಕಾಲದ ಸಮಯದಲ್ಲಿ, ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದು ಭಾರತದ ಯುವಜನರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಮುಂದಿನ 25 ವರ್ಷಗಳು ಭಾರತ ಮತ್ತು ಅದರ ಯುವಜನತೆ ಎರಡಕ್ಕೂ ನಿರ್ಣಾಯಕ. 2047 ರ ವೇಳೆಗೆ ಭಾರತವನ್ನು ವಿಕ್ಷಿತ ಭಾರತವನ್ನಾಗಿ ಪರಿವರ್ತಿಸುವುದು ಯುವಜನರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಲಾಯಿತು ಮತ್ತು 2024 ರ ಚುನಾವಣೆಗಾಗಿ ಬಿಜೆಪಿಯ ಪ್ರಣಾಳಿಕೆಗೆ ತಮ್ಮ ಸಲಹೆಗಳನ್ನು ನೀಡುವಂತೆ ಯುವಕರನ್ನು ಪ್ರಧಾನಿ ವಿನಂತಿಸಿದರು.

ಇದು ಮುಗಿಯುತ್ತಿದ್ದಂತೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಭಾಗವಾಗಿ ದೇಶದ ಸೋಲಾರ್‌ ಪಾಲಿಸಿಯ ಸಭೆಯಲ್ಲಿ ಮೋದಿ ಭಾಗಿಯಾಗಿದ್ದರು. ದೇಶದ 1 ಕೋಟಿ ಮನೆಗಳಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಮೂಲಕ ಅವರನ್ನು ವಿದ್ಯುತ್‌ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬೆನ್ನಲ್ಲಿಯೇ ಅವರು ಈ ಯೋಜನೆಯನ್ನು ಘೋಷಣೆ ಮಾಡಿದರು. ಇದರ ಕುರಿತಾದ ಸಭೆಯಲ್ಲಿ ಗುರುವಾರ ಭಾಗಿಯಾಗಿದ್ದರು.

ಆ ಬಳಿಕ ಉತ್ತರ ಪ್ರದೇಶದ ಬುಲಂದ್‌ಶೇರ್‌ಗೆ ಅವರು ತೆರಳುವುದು ನಿಶ್ಚಯವಾಗಿತ್ತು. ಹೆಲಿಕಾಪ್ಟರ್‌ ಮೂಲಕ ಬುಲಂದ್‌ಶೇರ್‌ಗೆ ತೆರಳಬೇಕಿತ್ತಾದರೂ, ಹವಾಮಾನದ ಸಮಸ್ಯೆಯಿಂದ ಹೆಲಿಕಾಪ್ಟರ್‌ ಮೂಲಕ ತೆರಳುವುದು ಸಾಧ್ಯವಾಗಿರಲಿಲ್ಲ. ಅಂದಾಜು 2 ಗಂಟೆಯ ರಸ್ತೆ ಮಾರ್ಗವನ್ನು ಪ್ರಧಾನಿ ಆಯ್ದುಕೊಂಡಿದ್ದು ಮಾತ್ರವಲ್ಲದೆ, ಅಲ್ಲಿ ಸಾರ್ವಜನಿಕ ಸಭೆಯಲ್ಲೂ ಭಾಗಿಯಾದರು. ಲೋಕಸಭೆ ಚುನಾವಣೆ ಮುಂಚಿತವಾಗಿ 19 ಸಾವಿರ ಕೋಟಿ ರೂಪಾಯಿಯ ಪ್ರಾಜೆಕ್ಟ್‌ಅನ್ನು ಇಲ್ಲಿ ಆರಂಭ ಮಾಡಿದರು. ಇದು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ನಡೆಸಿದ ಮೊದಲ ಸಾರ್ವಜನಿಕ ಸಭೆಯಾಗಿತ್ತು.

23 ಸೀಟುಗಳಲ್ಲಿ ಸ್ಪರ್ಧೆಗೆ ಉದ್ಧವ್ ಶಿವಸೇನೆ ಪಟ್ಟು: ಬಂಗಾಳ, ಪಂಜಾಬ್‌ ಬಳಿಕ ಮಹಾರಾಷ್ಟ್ರದಲ್ಲೂ ಬಿಕ್ಕಟ್ಟು!

ಬುಲಂದ್‌ಶೇರ್‌ನಲ್ಲಿ ಸಾರ್ವಜನಿಕ ಸಮಾವೇಶ ಮುಗಿಸಿದ ಪ್ರಧಾನಿ ಮೋದಿ ಅಲ್ಲಿಂದಲೇ ದೆಹಲಿಗೆ ವಾಪಸಾಗಿದ್ದರು. ದೆಹಲಿಗೆ ಬಂದವರೇ ರಾಜಸ್ಥಾನದ ಜೈಪುರಕ್ಕೆ ತೆರಳಲು ಸಜ್ಜಾಗಿದ್ದರು. ಜೈಪುರದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಸಭೆ ನಿಗದಿಯಾಗಿತ್ತು. ಅದರೊಂದಿಗೆ ಮ್ಯಾಕ್ರನ್‌ ಅವರೊಂದಿಗೆ ಜಂತರ್‌ ಮಂತರ್‌ ಹಾಗೂ ಹವಾ ಮಹಲ್‌ಗೆ ಭೇಟಿ ನೀಡಲಿರುವ ಮೋದಿ, ರಾತ್ರಿಯ ವೇಳೆಗೆ ಮತ್ತೆ ದೆಹಲಿಗೆ ವಾಪಸಾಗಲಿದ್ದಾರೆ.

ಲೋಕಸಭೆಗೆ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ‘ಇಂಡಿಯಾ’ ಒಕ್ಕೂಟಕ್ಕೆ ಮಾಯಾವತಿ ಶಾಕ್

Follow Us:
Download App:
  • android
  • ios