* ಗ್ಯಾಂಗ್‌ರೇಪ್‌ ಮಾಡಿದ 5 ಆರೋಪಿಗಳೂ ಪೊಲೀಸ್‌ ತೆಕ್ಕೆಗೆ* ಹೈದ್ರಾಬಾದ್‌ ರೇಪ್‌: ಬೀದರ್‌ನಲ್ಲಿ 5ನೇ ಆರೋಪಿ ವಶಕ್ಕೆ?

ಹೈದರಾಬಾದ್‌(ಜೂ.08): ಹೈದರಾಬಾದಿನ ಜ್ಯುಬಿಲಿ ಹಿಲ್ಸ್‌ನಲ್ಲಿ ನಡೆದ ಅತ್ಯಾಚಾರದ ಪ್ರಕರಣದ 5ನೇ ಆರೋಪಿಯನ್ನೂ ಪೊಲೀಸರು ಕರ್ನಾಟಕದ ಬೀದರ್‌ನಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪ್ರಕರಣದ ಎಲ್ಲ 5 ಆರೋಪಿಗಳು ಪೊಲೀಸರ ಬಲೆಗೆ ಬಿದ್ದಂತಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಸಾದುದ್ದೀನ್‌ ಮಲಿಕ್‌ (18) ಮತ್ತು ಇತರೆ 3 ಬಾಲಾರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಪಕ್ಷದ ನಾಯಕನ ಪುತ್ರನೂ ಸೇರಿದ್ದಾನೆ ಎನ್ನಲಾಗಿದೆ.

ಈ ನಡುವೆ ಸಾಮೂಹಿಕ ಅತ್ಯಾಚಾರಕ್ಕೂ ಮೊದಲು ಈ ಆರೋಪಿಗಳು ಪಬ್‌ನಲ್ಲಿ ಇನ್ನೋರ್ವ ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಆದರೆ ಆಕೆ ಘಟನೆ ನಡೆದ ಕೆಲ ಸಮಯದಲ್ಲೇ ಪಬ್‌ನಿಂದ ಹೊರನಡೆದಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಆಕೆಯ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

‘ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆ ಸೋಮವಾರ ಮ್ಯಾಜಿಸ್ಪ್ರೇಟ್‌ ಮುಂದೆ ಹಾಜರಾಗಿದ್ದು, ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾಳೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಇನ್ನೋವಾ ಕಾರಿನ ಸೀಟಿನಲ್ಲಿ ವೀರ್ಯದಂತಹ ವಸ್ತು ಲಭ್ಯವಾಗಿದ್ದು, ಫಾರೆನ್ಸಿಕ್‌ ವರದಿಗಾಗಿ ಕಾಯಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ರೇಪ್ ಕೇಸ್: ಸಂತ್ರಸ್ತೆ ವೀಡಿಯೋ ವೈರಲ್

ಏಮಿದು ಪ್ರಕರಣ?

ಕಳೆದ ಶನಿವಾರ ಅಪ್ತಾಪ್ತೆ ತನ್ನ ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದರು. ಆದರೆ ಸ್ನೇಹಿತ ಬೇಗನೆ ತೆರಳಿದ ಬಳಿಕ ಪಬ್‌ನಲ್ಲಿ ಯುವತಿಗೆ ಕೆಲ ಯುವಕರ ಪರಿಚಯವಾಗಿದೆ. ಅವರು ಆಕೆಗೆ ಮನೆಗೆ ಡ್ರಾಪ್‌ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯಿದ್ದಾರೆ. ಹೀಗೆ ಪಬ್‌ನಿಂದ ಹೊರಟ ನಾಲ್ವರು, ನಗರದ ಐಷಾರಾಮಿ ಪ್ರದೇಶವಾದ ಜ್ಯುಬಿಲಿ ಹಿಲ್ಸ್‌ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಿ ಅಲ್ಲೇ, ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿ, ಬಳಿಕ ಆಕೆಯನ್ನು ಪಬ್‌ ಬಳಿ ಇಳಿಸಿ ಪರಾರಿಯಾಗಿದ್ದಾರೆ.

ಬಳಿಕ ಬಾಲಕಿ ತನ್ನ ತಂದೆಗೆ ಕರೆ ಮಾಡಿ ಅವರ ವಾಹನದಲ್ಲಿ ಮನೆಗೆ ತೆರಳಿದ್ದಾಳೆ. ಈ ವೇಳೆ ಪುತ್ರಿಯ ಮೈ ಮೇಲಿನ ಗಾಯದ ಬಗ್ಗೆ ತಂದೆ ಪ್ರಶ್ನಿಸಿದಾಗ, ಆಕೆ ಕೆಲ ಯುವಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಮಹಿಳಾ ಅಧಿಕಾರಿ ಬಳಿ, ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂಪೂರ್ಣ ಮಾಹಿತಿ ನೀಡಿದ್ದಾಳೆ. ಅನಂತರ ಸರಣಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2 ತಿಂಗಳ ಮಗು ಕೊಂದ ಅತ್ಯಾಚಾರ ಸಂತ್ರಸ್ತೆ