Asianet Suvarna News Asianet Suvarna News

ಬಿಜೆಪಿ ಜೊತೆ ಕೈಜೋ​ಡಿ​ಸಿ: ಶಿವ​ಸೇನೆ ಶಾಸ​ಕ​ನಿಂದ ಸಿಎಂ ಉದ್ಧವ್‌​ಗೆ ಪತ್ರ!

* ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ಜಾರಿ ನಿರ್ದೇ​ಶ​ನಾ​ಲ​ಯದಿಂದ ತನಿ​ಖೆ ಎದು​ರಿ​ಸು​ತ್ತಿ​ರುವ ಸರ್‌ ನಾಯಕ್

* ಬಿಜೆಪಿ ಜೊತೆ ಕೈಜೋ​ಡಿ​ಸಿ: ಶಿವ​ಸೇನೆ ಶಾಸ​ಕ​ನಿಂದ ಸಿಎಂ ಉದ್ಧವ್‌​ಗೆ ಪತ್ರ 

* ಬಿಜೆಪಿ ಹಾಗೂ ಶಿವ​ಸೇನೆ ಮುಖಂಡರ ನಡು​ವಿನ ವೈಯ​ಕ್ತಿಕ ಸಾಮರಸ್ಯಕ್ಕೆ ಧಕ್ಕೆ ಬಂದಿಲ್ಲ

Join Hands With BJP  Sena MLA Advises Uddhav in Viral Letter pod
Author
Bangalore, First Published Jun 21, 2021, 9:08 AM IST

ಮುಂಬೈ(ಜೂ.21): ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ಜಾರಿ ನಿರ್ದೇ​ಶ​ನಾ​ಲ​ಯದಿಂದ ತನಿ​ಖೆ ಎದು​ರಿ​ಸು​ತ್ತಿ​ರುವ ಶಿವ​ಸೇನಾ ಶಾಸಕ ಪ್ರತಾಪ್‌ ಸರ್‌ ನಾಯಕ್, ಬಿಜೆ​ಪಿಯ ಜೊತೆ ರಾಜಿ ಮಾಡಿ​ಕೊ​ಳ್ಳು​ವಂತೆ ಒತ್ತಾ​ಯಿಸಿ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ಅವ​ರಿಗೆ ಪತ್ರ ಬರೆ​ದಿ​ದ್ದಾರೆ.

ಬಿಜೆ​ಪಿಯ ಜೊತೆ ಮೈತ್ರಿ ಕಡಿ​ದು​ಕೊಂಡಿ​ದ್ದರೂ ಬಿಜೆಪಿ ಹಾಗೂ ಶಿವ​ಸೇನೆ ಮುಖಂಡರ ನಡು​ವಿನ ವೈಯ​ಕ್ತಿಕ ಸಾಮರಸ್ಯಕ್ಕೆ ಧಕ್ಕೆ ಬಂದಿಲ್ಲ. ತಡ​ವಾ​ಗುವ ಮುನ್ನ ಬಿಜೆ​ಪಿಯ ಜೊತೆ ಸಖ್ಯ ಬೆಳೆ​ಸು​ವುದು ಉತ್ತಮ ಎಂದು ಅವರು ಪತ್ರ​ದಲ್ಲಿ ತಿಳಿ​ಸಿ​ದ್ದಾರೆ. ಮಹಾ​ರಾ​ಷ್ಟ್ರ​ದಲ್ಲಿ ಮಹಾ ವಿಕಾಸ್‌ ಅಘಾಡಿ ಮೈತ್ರಿ​ಕೂ​ಟ​ ಸರ್ಕಾ​ರ​ದಲ್ಲಿ ಬಿರುಕು ಕಾಣಿ​ಸಿ​ಕೊಂಡಿದೆ ಎಂಬ ವದಂತಿ​ಗಳ ಬೆನ್ನಲ್ಲೇ ಇಂಥ​ದ್ದೊಂದು ಪ್ರಸ್ತಾ​ವನೆ ಇಟ್ಟಿ​ರು​ವುದು ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

‘ಕಳೆದ ಏಳು ತಿಂಗ​ಳಿ​ನಿಂದ ನಾನು ಏಕಾಂಗಿ​ಯಾಗಿ ಹೋರಾಟ ನಡೆ​ಸು​ತ್ತಿ​ದ್ದೇನೆ. ನಮ್ಮ ನಾಯ​ಕ​ರಿಂದಾ​ಗಲೀ ಅಥವಾ ಸರ್ಕಾ​ರ​ದಿಂದಾ​ಗಲಿ ಯಾವುದೇ ಸಹಾಯ ದೊರೆ​ತಿಲ್ಲ. ಮಹಾ​ಭಾ​ರ​ತದ ಅಭಿ​ಮನ್ಯು ಅಥವಾ ಕರ್ಣನ ರೀತಿ ಶರ​ಣಾ​ಗ​ತ​ನಾ​ಗುವ ಬದಲು ಅರ್ಜುನನ ರೀತಿ ಹೋರಾ​ಟ​ದಲ್ಲಿ ನಾನು ನಂಬಿಕೆ ಇಟ್ಟಿ​ದ್ದೇನೆ. ಸದ್ಯ​ದಲ್ಲೇ ಮುಂಬೈ ಸೇರಿ​ದಂತೆ ಹಲವು ನಗ​ರ​ಗ​ಳಲ್ಲಿ ನಗರ ಪಾಲಿ​ಕೆ ಚುನಾ​ವಣೆ ಎದು​ರಾ​ಗ​ಲಿದೆ. ಕಾಂಗ್ರೆಸ್‌ ಮತ್ತು ಎನ್‌​ಸಿಪಿ ಶಿವ​ಸೇ​ನೆ​ಯನ್ನು ಒಡೆ​ಯಲು ಯತ್ನಿ​ಸು​ತ್ತಿವೆ. ಹೀಗಾಗಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೈಜೋ​ಡಿ​ಸಿ​ದರೆ ಪಕ್ಷ​ವನ್ನು ಉಳಿ​ಸ​ಬ​ಹು​ದಾ​ಗಿದೆ ಎಂದು ನನ್ನಂತಹ ಹಲವು ಕಾರ್ಯ​ಕ​ರ್ತರ ಅಭಿ​ಪ್ರಾ​ಯ​ವಾ​ಗಿದೆ’ ಎಂದು ಸರ್‌ ನಾಯಕ್ ಹೇಳಿ​ದ್ದಾ​ರೆ.

ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಜಾರಿ ನಿರ್ದೇ​ಶ​ನ​ಲಾಯ ಕಳೆದ ನವೆಂಬ​ರ್‌​ನಲ್ಲಿ ಸರ್‌ ನಾಯಕ್ ಅವರ ಮನೆಯ ಮೇಲೆ ದಾಳಿ ನಡೆ​ಸಿತ್ತು. ಆದ​ರೆ, ಇದನ್ನು ರಾಜ​ಕೀಯ ಷಡ್ಯಂತ್ರ ಎಂದು ಶಿವ​ಸೇನೆ ಆರೋ​ಪಿ​ಸಿತ್ತು.

Follow Us:
Download App:
  • android
  • ios