ವಿವಾದ, ಪ್ರತಿಭಟನೆ, ಭಾರತ ವಿರೋಧಿ ಘೋಷಣೆಗಳಿಂದಲೇ ಹೆಚ್ಚು ಸುದ್ದಿಯಾಗಿರುವ ಜವಾಹಾರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಹೊಸ ನೀತಿ ಜಾರಿಗೊಳಿಸಿದೆ. ಇನ್ಮುಂದೆ ಕ್ಯಾಂಪಸ್‌ನಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಸಿದರೆ 20,000 ರೂಪಾಯಿ ದಂಡ ಹಾಗೂ ಭಾರತ ವಿರೋಧಿ ಘೋಷಣೆ ಕೂಗಿದರೆ 10,000 ರೂಪಾಯಿ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ.

ದೆಹಲಿ(ಡಿ.11) ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಹೊಸ ನೀತಿ ಜಾರಿಗೊಳಿಸಿದೆ. ಇನ್ನು ಮುಂದೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಸಿದರೆ 20,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಭಾರತ ವಿರೋಧಿ ಘೋಷಣೆ, ಜಾತಿ, ಸಮುದಾಯ, ಧರ್ಮಗಳ ನಿಂದನೆ, ಅವಹೇಳನ, ಘೋಷಣೆ ಕೂಗಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಜೆಎನ್‌ಯು ವಿಶ್ವವಿದ್ಯಾಲಯದ ಶಿಸ್ತು ಸಮಿತಿ ಹೊಸ ನಿಯಮ ಜಾರಿಗೊಳಿಸಿದೆ.

ಭಾರತ ವಿರೋಧಿ ಘೋಷಣೆ, ಪ್ರತಿಭಟನೆ, ಧಾರ್ಮಿಕ ವಿರೋಧಿ ಘೋಷಣೆ ಸೇರಿದಂತೆ ಹಲವು ಕಾರಣಗಳಿಂದ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ದೇಶದಲ್ಲಿ ಸದ್ದು ಮಾಡಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಮಾಡುವ ಮೂಲಕ ದೇಶದಲ್ಲಿ ಜೆಎನ್‌ಯು ವಿವಾದದ ಕೇಂದ್ರಬಿಂದುವಾಗಿತ್ತು. ಆದರೆ ಹೊಸ ನೀತಿಯಿಂದ ಪ್ರತಿಭಟನೆ, ಹಿಂಸಾಚಾರ ನಡೆಸುವ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ.

ಕಾಶ್ಮೀರಕ್ಕೆ ಸ್ವಾತಂತ್ರ ನೀಡಿ, ಭಗವಾ ಧ್ವಜ ಉರಿಯಲಿದೆ : ಜೆಎನ್‌ಯುದಲ್ಲಿ ಮತ್ತೆ ದೇಶ ವಿರೋಧಿ ಬರಹ

28 ವಿವಿಧ ನಿಯಮ ಬಾಹಿರ ಚಟುವಟಿಕೆಗಳನ್ನು ವಿಶ್ವವಿದ್ಯಾಲಯ ಶಿಸ್ತು ಸಮಿತಿ ಪಟ್ಟಿ ಮಾಡಿದೆ. ವಿದ್ಯಾರ್ಥಿಗಳು ಮತ್ತೆ ಮತ್ತೆ ಈ ತಪ್ಪು ಮಾಡಿದರೆ ಅಮಾನತು ಮಾಡಲಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ 5 ಬಾರಿ ವಿಶ್ವವಿದ್ಯಾಲಯ ನಿಯಮ ಉಲ್ಲಂಘಿಸಿದ ಶಿಕ್ಷೆ ಪಡೆದ ವಿದ್ಯಾರ್ಥಿಯನ್ನು ಅಮಾನತು ಮಾಡಲಾಗುತ್ತದೆ. ಯಾವುದೇ ಸೂಚನೆ, ಲಿಖಿತ ಮನವಿ ಇಲ್ಲದೆ ಪ್ರತಿಭಟನೆ, ಆಂದೋಲನ, ಕಾರ್ಯಕ್ರಮ ಆಯೋಜಿಸಿದರೆ 6,000 ರೂಪಾಯಿ ದಂಡ ವಿಧಿಸಲಾಗುತ್ತದೆ. 

ಘೋಷಣಾ ವಾಕ್ಯ, ಪ್ಯಾಂಪ್ಲೇಟ್, ಪೋಸ್ಟರ್, ಪ್ಲಕಾರ್ಡ್ ಸೇರಿದಂತೆ ನಿಯಮ ಬಾಹಿರ ನಡೆ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಎಚ್ಚರಿಸಿದೆ.

ಶಿಕ್ಷಣದ ಕುರಿತು ದೀಪಿಕಾ ಮಾತಾಡಿದ್ರೆ ಟುಕ್ಡೆ ಟುಕ್ಡೆ ಗ್ಯಾಂಗ್​ ಸಪೋರ್ಟ್​ ಮಾಡಿದ್ದು ಇದ್ಕೇನಾ ಅನ್ನೋದಾ?

ಇತ್ತೀಚಗಷ್ಟೇ ನೆಹರೂ ವಿಶಿವಿದ್ಯಾಲಯದಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಘರ್ಷಣೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಕ್ಯಾಂಪಸ್‌ನಲ್ಲೇ ಕೈಯಲ್ಲಿ ದೊಣ್ಣೆ ಹಿಡಿದು ವಿದ್ಯಾರ್ಥಿಗಳು ಓಡುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತ. ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ‘ಇಬ್ಬರು ಹುಡುಗರ ನಡುವೆ ವೈಯಕ್ತಿಕ ಕಾರಣಕ್ಕಾಗಿ ಮೊದಲು ಜಗಳ ನಡೆದಿದ್ದು ಬಳಿಕ ಅವರವರ ಸ್ನೇಹಿತರ ಗುಂಪು ಸೇರಿಕೊಂಡು ಹೊಡೆದಾಡಿವೆ. ಆದರೆ ಈ ಕುರಿತು ನಮಗೆ ಯಾವುದೇ ದೂರು ಬಂದಿಲ್ಲ. ಇದು ವೈಯಕ್ತಿಕ ಜಗಳವಾಗಿದ್ದು ಯಾವುದೇ ರಾಜಕೀಯ ಗುಂಪು ಭಾಗಿಯಾಗಿಲ್ಲ’ ಎಂದು ಹೇಳಿದ್ದಾರೆ. ಈ ಹಿಂದೆ, ಎಡಪಂಥೀಯ ಹಾಗೂ ಬಲಪಂಥೀಯ ವಿದ್ಯಾರ್ಥಿಗಳ ನಡುವೆ ವಿವಿಯಲ್ಲಿ ಸಂಘರ್ಷಗಳು ಸಂಭವಿಸಿದ್ದವು.