Jnanpith Award for 2023 ಸಂಸ್ಕೃತಿ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಹಾಗೂ ಉರ್ದು ಸಾಹಿತಿ ಹಾಗೂ ಗೀತರಚನಕಾರ ಗುಲ್ಜಾರ್‌ ಅವರಿಗೆ 2023ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಸಮಿತಿ ಘೋಷಣೆ ಮಾಡಲಿದೆ. 

ನವದೆಹಲಿ (ಫೆ.17): ಪ್ರಖ್ಯಾತ ಉರ್ದು ಗೀತರಚನೆಕಾರ ಮತ್ತು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ 2023ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಆಯ್ಕೆ ಸಮಿತಿಯು ಘೋಷಿಸಿದೆ. ಇಬ್ಬರೂ ವ್ಯಕ್ತಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ. ಪ್ರಸ್ತುತ ದಿನಮಾನದ ಅತ್ಯಂತ ಶ್ರೇಷ್ಠ ಉರ್ದು ಸಾಹಿತಿಗಳಲ್ಲಿ ಗುಲ್ಜಾರ್‌ ಕೂಡ ಒಬ್ಬರು. ಉರ್ದು ಸಾಹಿತ್ಯ ಮಾತ್ರವಲ್ಲದೆ, ಹಿಂದಿ ಸಿನಿಮಾಗೂ ಗುಲ್ಜಾರ್‌ ಅವರ ಕಾಣಿಕೆ ಮಹತ್ವದ್ದಾಗಿದೆ. 2002ರಲ್ಲಿ ಗುಲ್ಜಾರ್‌ ಅವರಿಗೆ ಕೇಂದ್ರ ಸರ್ಕಾರ ಉರ್ದು ವಿಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿತ್ತು. 2013ರಲ್ಲಿ ಇವರಿಗೆ ಕೇಂದ್ರ ಸರ್ಕಾರ ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ಅನ್ನು ನೀಡಿದ್ದರೆ, 2004ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅದರೊಂದಿಗೆ ಹಿಂದಿ ಸಿನಿಮಾದ ವಿವಿಧ ವಿಭಾಗಗಳಲ್ಲಿ ನೀಡಿದ ಸೇವೆಗಾಗಿ ಐದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನೂ ಅವರು ಸ್ವೀಕರಿಸಿದ್ದಾರೆ.

ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ಚಿತ್ರಕೂಟದಲ್ಲಿ ನೆಲೆಸಿರುವ ರಾಮಭದ್ರಾಚಾರ್ಯರು ಪ್ರಮುಖ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು 100 ಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾಗಿದ್ದಾರೆ. ಹುಟ್ಟಿನಿಂದಲೇ ಕುರುಡರಾಗಿದ್ದರೂ, ಜಗದ್ಗುರು ರಾಮಭದ್ರಾಚಾರ್ಯರು ಸಂಸ್ಕೃತ ಭಾಷೆ ಮತ್ತು ವೇದ-ಪುರಾಣಗಳ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸರಾಗಿದ್ದಾರೆ.

ಜ್ಞಾನಪೀಠಕ್ಕೆ ಭೈರಪ್ಪ, ಮೊಯ್ಲಿ, ಕಣವಿ ಹೆಸರು ಶಿಫಾರಸು!

ಸಂಸ್ಕೃತ ಸಾಹಿತ್ಯ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಖ್ಯಾತ ಉರ್ದು ಸಾಹಿತಿ ಗುಲ್ಜಾರ್ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿಯನ್ನು ಎರಡು ಭಾಷೆಯ ಖ್ಯಾತ ಲೇಖಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಜ್ಞಾನಪೀಠ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. 2022 ರಲ್ಲಿ, ಗೋವಾದ ಲೇಖಕ ದಾಮೋದರ್ ಮೌಜೊ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಇಂಗ್ಲೀಷ್ ಕಾದಂಬರಿಕಾರನಿಗೆ ಒಲಿದ 2018ರ ಜ್ಞಾನಪೀಠ ಪ್ರಶಸ್ತಿ

ಸಂಪೂರಣ್‌ ಸಿಂಗ್‌ ಕಾಲ್ರಾ ಎನ್ನುವುದು ಗುಲ್ಜಾರ್‌ ಅವರ ಮೂಲ ಹೆಸರು. ಹಿಂದು, ಉರ್ದು ಅಲ್ಲದೆ ಪಂಜಾಬಿ ಭಾಷೆಗಳಲ್ಲೂ ಇವರು ಬರೆಯುತ್ತಾರೆ. 2009ರಲ್ಲಿ ಸ್ಲಮ್‌ ಡಾಗ್‌ ಮಿಲಿಯನೇರ್‌ ಚಿತ್ರಕ್ಕೆ ಬರೆದ ಜೈ ಹೋ ಗೀತೆಗಾಗಿ ಅತ್ಯುತ್ತಮ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಜಯಿಸಿದ್ದರು. ಅದಲ್ಲದೆ, ಇದೇ ಹಾಡಿಗೆ ಗ್ರ್ಯಾಮಿ ಪ್ರಶಸ್ತಿಯನ್ನೂ ಅವರು ಪಡೆದುಕೊಂಡಿದ್ದರು. ಸಿನಿಮಾ ಜರ್ನಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲನ್ನು ಅವರು ನೆಟ್ಟಿದ್ದಾರೆ. ಮೂರು ಸಾಲಿನ ಕವಿತೆಯಾದ ತ್ರಿವೇಣಿಯನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗುಲ್ಜಾರ್‌ ಮಕ್ಕಳ ಕವಿತೆಗಳತ್ತ ಹೆಚ್ಚಿನ ಗಮನ ನೀಡಿದ್ದಾರೆ.

Scroll to load tweet…