ಭಗವದ್ಗೀತೆಯಲ್ಲಿ ಭಗವಾನ್‌ ಶ್ರೀಕೃಷ್ಣ, ಅರ್ಜುನನಿಗೆ ಮಾಡಿದ ಗೀತೋಪದೇಶವನ್ನು ಜಿಹಾದ್‌ಗೆ ಹೋಲಿಕೆ ಮಾಡಿದ್ದ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಶಿವರಾಜ್‌ ಪಾಟೀಲ್‌ ತಮ್ಮ ಹೇಳಿಕೆಗೆ ಕ್ಷಮೆ ಕೇಳುವ ಬದಲು, ಸ್ಪಷ್ಟನೆಗೆ ಮುಂದಾಗಿದ್ದಾರೆ. ನಾನೆಲ್ಲೂ ಕೃಷ್ಣ, ಅರ್ಜುನನಿಗೆ ಜಿಹಾದ್‌ ಪಾಠ ಮಾಡಿದ್ದ ಎಂದು ಹೇಳಿಲ್ಲ ಎಂದಿದ್ದಾರೆ. 

ನವದೆಹಲಿ (ಅ.21): ಮಾಜಿ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷಕ್ಕೆ ಇರಿಸು ಮುರಿಸು ತಂದಿದ್ದಾರೆ. ಶುಕ್ರವಾರ ತಮ್ಮ 'ಭಗವದ್ಗೀತೆಯಲ್ಲಿ ಜಿಹಾದ್' ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಗೀತೆಯಲ್ಲಿ ಶ್ರೀ ಕೃಷ್ಣ, ಅರ್ಜುನನಿಗೆ ಜಿಹಾದ್‌ ಪಾಠಗಳನ್ನು ಕಲಿಸಿದ ಎಂದು ಹೇಳಿದ್ದರ ಹಿಂದಿನ ಅರ್ಥವೇನು ಎನ್ನುವುದನ್ನೂ ಅವರು ಹೇಳಿದ್ದಾರೆ. 'ಕೃಷ್ಣನ ಪಾಠಗಳನ್ನು ಜೀವು ಜಿಹಾದ್‌ ಎಂದು ಕರೆಯುತ್ತೀರಾ? ಎನ್ನುವ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ ಅವರು, ನಾನು ಹೇಳಿದ ಅರ್ಥ ಅದಲ್ಲ ಎಂದಿದ್ದಾರೆ. ಅವರು ಸ್ಪಷ್ಟನೆ ನೀಡುತ್ತಿರುವ ವಿಡಿಯೋವನ್ನು ಎಎನ್‌ಐ ಸುದ್ಧಿಸಂಸ್ಥೆ ಬಿಡುಗಡೆ ಮಾಡಿದ್ದು, ಇದರಲ್ಲಿ ಅವರಿಗೆ ಈ ವಿಚಾರದಲ್ಲಿ ಪ್ರಶ್ನೆ ಮಾಡಿದ ಸುದ್ದಿಗಾರರಿಗೆ ಆಕ್ರೋಶ ವ್ಯಕ್ತಪಡಿಸಿದ್ದು ಕಾಣಿಸಿದೆ. ನೀವು ಹೇಳುತ್ತಿರುವುದು ಈ ಜಿಹಾದ್‌ನ ಸಂದೇಶ ಎಂದು ಪ್ರಶ್ನಿಸಿದ ಪತ್ರಕರ್ತನನ್ನು ಶಿವರಾಜ್‌ ಪಾಟೀಲ್‌ ತಡೆಯುತ್ತಿರುವುದು ಕಾಣಿಸಿದೆ. ಜಿಹಾದ್ ಹಿಂದೂ ಧರ್ಮಕ್ಕೆ ಹೊಂದಿಕೆಯಾಗುತ್ತಿದೆ ಎಂಬುದನ್ನು ವಿವರಿಸಿದ ಅವರು ಮಹಾತ್ಮ ಗಾಂಧಿಯನ್ನು ಕೊಲ್ಲುವುದನ್ನು ಜಿಹಾದ್ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

Scroll to load tweet…


ಕುರಾನ್ ಷರೀಫನ್ನು ಹಿಡಿದುಕೊಂಡೇ ಮಾತನಾಡಿದ ಶಿವರಾಜ್‌ಪಾಟೀಲ್, "ಇದು ಕುರಾನ್ ಷರೀಫ್, ನೀವು ಮೊದಲು ನಾನು ಹೇಳೋದನ್ನ ಕೇಳಿ. ದೇವರು ಒಬ್ಬನೇ ಮತ್ತು ಅದಕ್ಕೆ ರೂಪವಿಲ್ಲ ಎಂದು ಹೇಳುತ್ತದೆ. ಕ್ರಿಶ್ಚಿಯನ್ ಧರ್ಮ ಮತ್ತು ಜುದಾಯಿಸಂ ಕೂಡ ದೇವರಿದ್ದಾನೆ ಆದರೆ ಯಾವುದೇ ವಿಗ್ರಹ ಇರಬಾರದು ಎಂದು ಹೇಳುತ್ತದೆ. ಗೀತಾ (bhagavad gita ) ದೇವರಿಗೆ ಬಣ್ಣವಿಲ್ಲ ಮತ್ತು ರೂಪವಿಲ್ಲ ಎಂದು ಹೇಳುತ್ತದೆ" ಎಂದು ವಿವರಣೆ ನೀಡಿದ್ದಾರೆ.

ಭಗವಾನ್‌ ಶ್ರೀ ಕೃಷ್ಣ ಹಾಗೂ ಅರ್ಜುನನ ನಡುವಿನ ಗೀತಸಾರವನ್ನು ಜಿಹಾದ್‌ಗೆ ಹೋಲಿಕೆ ಮಾಡಿದ ಶಿವರಾಜ್‌ ಪಾಟೀಲ್‌ ಅವರ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಈ ಮಾತಗಳನ್ನು ಸ್ಟಷ್ಟವಾಗಿ ಟೀಕಿಸಿಸಿದೆ. ಕಾಂಗ್ರೆಸ್‌ ಪಕ್ಷವು ತನ್ನ ಹಿಂದು ದ್ವೇಷವನ್ನು ತೋರಿಸಿಕೊಳ್ಳುತ್ತಿದೆ ಎಂದು ಹೇಳಿರುವ ಬಿಜೆಪಿ, ಮೊದಲಿಗೆ ಇದೇ ಕಾಂಗ್ರೆಸ್‌ ಪಕ್ಷದ ಶಿವರಾಜ್‌ ಪಾಟೀಲ್‌ ಅವರೇ ಹಿಂದೂ ಭಯೋತ್ಪಾದನೆ ಎನ್ನುವ ಶಬ್ದವನ್ನು ಬಿತ್ತಿದ್ದರು. ಆದಿಯಿಂದಲೂ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. ಅದಲ್ಲದೆ, ಹಿಂದುತ್ವವನ್ನು ಐಸಿಸಿಗೆ ಹೋಲಿಕೆ ಮಾಡಿತ್ತು ಎಂದು ಹೇಳಿದೆ.

ಶಿವರಾಜ್‌ ಪಾಟೀಲ್‌ ನೀಡಿರುವ ಸ್ಪಷ್ಟೀಕರಣ ಅವರು ಆಡುವ ಮಾತನ್ನು ಸಮರ್ಥನೆ ಮಾಡಿಕೊಳ್ಳುವ ಸಾಲುಗಳು ಮಾತ್ರ ಎಂದ ಬಿಜೆಪಿ ಹೇಳಿದೆ. 'ಶ್ರೀಕೃಷ್ಣನು (Sri Krishna) ಅರ್ಜುನನಿಗೆ (Arjuna) ನೀಡಿದ ಸಂದೇಶದ ಭಗವದ್ಗೀತೆಯ ಸಾರವನ್ನು ಶಿವರಾಜ್‌ ಪಾಟೀಲ್‌ ಜಿಹಾದ್‌ಗೆ ಹೋಲಿಸಿದ್ದರು. ಈಗ ಸಂಪೂರ್ಣವಾಗಿ ಕ್ಷಮೆ ಕೇಳುವ ಮಾತನಾಡುವ ಬದಲು ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡುತ್ತಿದ್ದಾರೆ. ಇದು ಅವರು ಸುಖಾಸುಮ್ಮನೆ ಹೇಳಿರುವ ಹೇಳಿಕೆಯಲ್ಲ, ಇದು ವೋಟ್‌ ಬ್ಯಾಂಕ್‌ಗಾಗಿ (VoteBank) ಮಾಡಿರುವ ಪ್ರಯೋಗ. ಇದಕ್ಕೆ ಸೂತ್ರಧಾರಿ ಕಾಂಗ್ರೆಸ್‌ (Congress). ಹಾಗಾಗಿ ಆ ಪಕ್ಷ ಯಾವುದೇ ಕ್ರಮ ಕೈಗೊಳ್ಳೋದಿಲ್ಲ ಎಂದು ಶೆಹಜಾದ್‌ ಪೂನಾವಾಲಾ ಟ್ವೀಟ್‌ ಮಾಡಿದ್ದಾರೆ.

ಜಿಹಾದ್‌ ಪರಿಕಲ್ಪನೆ ಭಗವದ್ಗೀತೆಯಲ್ಲೂ ಇದೆ: ಕಾಂಗ್ರೆಸ್ ನಾಯಕನ ವಿವಾದಿತ ಹೇಳಿಕೆ

ಶಿವರಾಜ್ ಪಾಟೀಲ್ (Shivraj Patil ) ತಮ್ಮ ಹೇಳಿಕೆಯ ಅರ್ಥವನ್ನು ವಿವರಿಸುತ್ತಾ, ಹಿಂದೂ ಧರ್ಮದಲ್ಲಿ ಜಿಹಾದ್ ಒಳ್ಳೆಯ ವ್ಯಕ್ತಿಯನ್ನು ಕೊಲ್ಲುತ್ತಿದೆ ಎಂದು ಹೇಳಿದರು. ಮಹಾತ್ಮಾ ಗಾಂಧಿಯನ್ನು ಕೊಂದಿರುವ ವಿಚಾರ ಜಿಹಾದ್ ಎಂದು ಅವರು ಹೇಳಿದರು.

ಬೆಂಗಳೂರು: ಹಿಂದೂ ಯುವತಿಯೊಂದಿಗೆ ಲವ್ವಿ ಡವ್ವಿ, ಮುಸ್ಲಿಂ ಯುವಕನಿಂದ ಲವ್‌ ಜಿಹಾದ್‌?

ಏನಿದು ವಿವಾದ: ಪುಸ್ತಕ ಬಿಡುಗಡೆ ಸಮಾರಂಭವೊದರಲ್ಲಿ ಭಾಗವಹಿಸಿದ್ದ ಶಿವರಾಜ್‌ ಪಾಟೀಲ್‌, ಜಿಹಾದ್‌ ಹಾಗೂ ಇಸ್ಲಾಂ ಬಗ್ಗೆ ಮಾತನಾಡುತ್ತಿದ್ದಾರೆ. 'ನಾವು ಜಿಹಾದ್‌ನ ಬಗ್ಗೆ ಕೆಲಸ ಮಾಡುತ್ತಿಲ್ಲವೇ, ಸಂಸತ್ತಿನಲ್ಲಿ ಕುಳಿತು ನಾವೇನು ಮಾಡುತ್ತಿದ್ದೇವೆ ಹಾಗಿದ್ದರೆ? ಜಿಹಾದ್‌ ಅನ್ನೋದು ಬಂದಿದ್ದು ಯಾವಾಗ?ಎಲ್ಲಾ ಪ್ರಯತ್ನಗಳ ನಂತರ, ಯಾರಾದರೂ ಶುದ್ಧ ವಿಚಾರಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಒಬ್ಬರು ಬಲವನ್ನು ಬಳಸಬಹುದು ಎಂದು ಹೇಳಲಾಗುತ್ತದೆ. ಮತ್ತು ಇದು ಮಾತ್ರವಲ್ಲ. ಕುರಾನ್‌ನಲ್ಲಿ, ಮಹಾಭಾರತದಲ್ಲಿ ಗೀತೆಯ ಅಡಿಯಲ್ಲಿ ಕೃಷ್ಣನು ಅರ್ಜುನನಿಗೆ ಜಿಹಾದ್ ಪಾಠಗಳನ್ನು ನೀಡುತ್ತಾನೆ," ಎಂದು ಅವರು ಹೇಳಿದ್ದರು.