Asianet Suvarna News Asianet Suvarna News

ಒಂದು ವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಜಾರ್ಖಂಡ್ ಸರ್ಕಾರ!

ಕೊರೋನಾಗೆ ಭಾರತದ ಬಹುತೇಕ ರಾಜ್ಯಗಳು ತತ್ತರಿಸಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಲಾಕ್‌ಡೌನ್ ಕೊನೆಯ ಅಸ್ತ್ರವನ್ನಾಗಿಟ್ಟಿದೆ. ಇದೀಗ ಒಂದೊಂದೆ ರಾಜ್ಯಗಳು ಪರಿಸ್ಥಿತಿ ನಿಯಂತ್ರಣಕ್ಕೆ ಕೊನೆಯ ಅಸ್ತ್ರವನ್ನೇ ಬಳಸುತ್ತಿದೆ. ಇದೀಗ ಜಾರ್ಖಂಡ್ ಲಾಕ್‌ಡೌನ್ ಘೋಷಿಸಿದೆ.

Jharkhand CM announces lockdown from April 22 29 to break chain of Covid 19 spread ckm
Author
Bengaluru, First Published Apr 20, 2021, 7:10 PM IST

ರಾಂಚಿ(ಏ.20): ಕೊರೋನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಆಸ್ಪ್ರತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿದೆ. ಹೊಸ ಪ್ರಕರಣಗಳಗಳ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದೀಗ ಬೇರೆ ದಾರಿ ಕಾಣದ ಜಾರ್ಖಂಡ್ ಸರ್ಕಾರ ಒಂದು ವಾರ ಲಾಕ್‌ಡೌನ್ ಘೋಷಿಸಿದೆ.

ಸೋಂಕಿತನ 3 ದಿನ ಚಿಕಿತ್ಸೆಗೆ 1.6 ಲಕ್ಷ ರೂ ಬಿಲ್; ತನಿಖೆ ಆದೇಶದ ಬೆನ್ನಲ್ಲೇ ಹಣ ವಾಪಸ್!

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರನ್ 7 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೋನಾ ಪರಿಸ್ಥಿತಿ ಹಾಗೂ ನಿಯಂತ್ರಣ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಹೇಮಂತ್ ಸೊರನೆ ತಜ್ಞರ ಸಲಹೆಯಂತೆ ಲಾಕ್‌ಡೌನ್ ಘೋಷಿಸಿದ್ದಾರೆ. ಏಪ್ರಿಲ್ 22 ರಿಂದ ಏಪ್ರಿಲ್ 29ರ ವರೆಗೆ ಒಂದು ವಾರಗಳ ಲಾಕ್‌ಡೌನ್ ಹೇರಲಾಗಿದೆ.

ಜಾರ್ಖಂಡ್‌ ಲಾಕ್‌ಡೌನ್‌ನಲ್ಲಿ ಅಗತ್ಯ ವಸ್ತು ಹಾಗೂ ತುರ್ತು ಸೇವೆ ಹೊರತು ಪಡಿಸಿ ಇತರ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟು ಹೊರತು ಪಡಿಸಿ ಇತರ ಅಂಗಡಿಗಳು ಬಂದ್ ಆಗಲಿದೆ. ಇತ್ತ ಸರ್ಕಾರ ಹಾಗೂ ಖಾಸಗಿ ಕಚೇರಿ, ಕಂಪನಿಗಳು ಬಂದ್ ಆಗಲಿವೆ. 

4,000ಕ್ಕಿಂತ ಹೆಚ್ಚಿನ ಪ್ರಕರಣಗಳು ಜಾರ್ಖಂಡ್‌ನಲ್ಲಿ ವರದಿಯಾಗುತ್ತಿದೆ. ಜಾರ್ಖಂಡ್‌ನಲ್ಲಿರುವ ಆಸ್ಪತ್ರೆಗಳು, ಕೋವಿಡ್ ಕೇಂದ್ರಗಳನ್ನು ಗಮನದಲ್ಲಿರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Follow Us:
Download App:
  • android
  • ios