Asianet Suvarna News Asianet Suvarna News

ಸೋಂಕಿತನ 3 ದಿನ ಚಿಕಿತ್ಸೆಗೆ 1.6 ಲಕ್ಷ ರೂ ಬಿಲ್; ತನಿಖೆ ಆದೇಶದ ಬೆನ್ನಲ್ಲೇ ಹಣ ವಾಪಸ್!

ಕೊರೋನಾ ಸೋಂಕಿತನ 3 ದಿನದ ಚಿಕಿತ್ಸೆಗೆ ಬರೋಬ್ಬರಿ 1.6 ಲಕ್ಷ ರೂಪಾಯಿ ವಸೂಲಿ ಮಾಡಿದ ಆಸ್ಪತ್ರೆ ಕೈಸುಟ್ಟಕೊಂಡಿದೆ. ದುಬಾರಿ ಮೊತ್ತ ಸುಲಿಗೆ ಮಾಡಿದ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಅಷ್ಟೂ ಹಣವನ್ನೂ ವಾಪಸ್ ಮಾಡಿದ ಘಟನೆ ನಡೆದಿದೆ.

Hospital refunds Rs 1 6 lakh to cheated Covid patient after intervention of ranchi health minister ckm
Author
Bengaluru, First Published Apr 20, 2021, 6:08 PM IST

ರಾಂಚಿ(ಏ.20): ಕೊರೋನಾ ವೈರಸ್‌ಗೆ ದೇಶವೇ ತತ್ತರಿಸಿದೆ. ಆಸ್ಪತ್ರೆ ಸಿಗದೆ ಸೋಂಕಿತರು ನರಳಾಡುತ್ತಿದ್ದಾರೆ. ಬೆಡ್ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿ ಎದುರಾಗಿದೆ. ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಮ್ಲಜನಕ ಕೊರತೆ ಕಾಡುತ್ತಿದೆ. ಇದರ ನಡುವೆ ಕೆಲ ಆಸ್ಪತ್ರೆಗಳು ಇದೇ ಸಂದರ್ಭವನ್ನು ಬಳಸಿಕೊಂಡು ಸೋಂಕಿತರ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಸುಲಿಗೆ ಮಾಡುತ್ತಿರುವ ಹಲವು ಪ್ರಕರಣಗಳು ನಡೆದಿದೆ. ಇದೀಗ ಹೀಗೆ ಸೋಂಕಿತನ 3 ದಿನದ ಚಿಕಿತ್ಸೆಗೆ 1.6 ಲಕ್ಷ ರೂಪಾಯಿ ವಸೂಲಿ ಮಾಡಿ ಕೊನೆಗೆ ಕೈಸುಟ್ಟ ಗೊಂಡ ಘಟನೆ ಜಾರ್ಖಂಡನ್‌ ರಾಂಚಿಯಲ್ಲಿ ನಡೆದಿದೆ.

ಕೋವಿಡ್‌ಗೆ ಬಲಿಯಾದ 756 ವೈದ್ಯರ ಪೈಕಿ 168 ಜನರಿಗೆ ಮಾತ್ರ ವಿಮೆ ಲಭ್ಯ!.

ಸೋಂಕಿತನ 3 ದಿನದ ಚಿಕಿತ್ಸೆಗೆ 1.6 ಲಕ್ಷ ರೂಪಾಯಿ ವಸೂಲಿ ಮಾಡಿದ ದ್ವಾರಾಕ ಆಸ್ಪತ್ರೆ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬೆನ್ನಲ್ಲೇ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತ ತನಿಖೆ ಆದೇಶಿಸಿದ್ದರು. ಇತ್ತ ಜಿಲ್ಲಾಧಿಕಾರಿ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಅನ್ನೋದು ಅರಿತ ದ್ವಾರಕ ಆಸ್ಪತ್ರೆ ಬಿಲ್ ಮಾಡಿದ 1.6 ಲಕ್ಷ ರೂಪಾಯಿ ಹಣವನ್ನೂ ಹಿಂತಿರುಗಿಸಿದೆ. 

ಈ ಘಟನೆ ಬೆಳಕಿಗೆ ಬಂದಿದ್ದು, ಜೆಎಮ್ಎಮ್ MLA ಸಿತಾ ಸೊರೆನ್ ಆಸ್ಪತ್ರೆಗಳ ಸುಲಿಗೆ ದಂಧೆ ಕುರಿತು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ದ್ವಾರಕ ಆಸ್ಪತ್ರೆ 3 ದಿನದ ಚಿಕಿತ್ಸೆಗೆ 1.6 ಲಕ್ಷ ಬಿಲ್ ಮಾಡಿರುವುದನ್ನು ಪೋಸ್ಟ್ ಮಾಡಿದ್ದರು. ಬಳಿಕ ಸರ್ಕಾರ ಈ ಕುರಿತು ಗಮನಹರಿಸಬೇಕು. ಬಡವರು ಚಿಕಿತ್ಸೆ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಿಲ್ ಭಾರಿ ಸದ್ದು ಮಾಡಿತ್ತು. 

ರಾಹುಲ್ ಗಾಂಧಿಗೆ ಕೊರೋನಾ, ಸಂಪರ್ಕದಲ್ಲಿದ್ದವರು ಟೆಸ್ಟ್‌ ಮಾಡಿಸಿ ಎಂದು ಮನವಿ!.

ಪೋಸ್ಟ್ ವೈರಲ್ ಆಗತ್ತಿದ್ದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಕುರಿತು ಗಮನ ಹರಿಸುವಂತೆ ಆರೋಗ್ಯ ಸಚಿವರಿಗೆ ಸೂಚಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿತಾ ಸೊರೆನ್ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ವಸೂಲಿ ದಂಧೆ ಅಂತ್ಯಗೊಳಿಸಲು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಇದನ್ನು ಅರಿತ ಆಸ್ಪತ್ರೆ, ತಕ್ಷಣವೇ ಕಟ್ಟಿಸಿಕೊಂಡಿದ್ದ 1.6 ಲಕ್ಷ ರೂಪಾಯಿ ಸಂಪೂರ್ಣ ಹಣ ವಾಪಸ್ ನೀಡಿದೆ. 

Follow Us:
Download App:
  • android
  • ios