ಮೂವರು ಗೆಳಯರ ಸಾಹಸದಿಂದ ಇದೀಗ ಜಿಲ್ಲೆಯ 800 ಮನೆಗೆ ಉಚಿತ ವಿದ್ಯುತ್ ಲಭ್ಯವಾಗಿದೆ. ದಿನದ 24 ಗಂಟೆಯೂ 800 ಮನೆಗಳಿಗೆ ಯಾವುದೇ ಅಡೆ ತಡೆ ಇಲ್ಲದೆ ವಿದ್ಯುತ್ ಲಭ್ಯವಾಗಿದೆ. ಈ ಮೂವರು ಗೆಳೆಯರು ಮಾಡಿದ ಕ್ರಾಂತಿಯೇನು?
ರಾಂಚಿ (ಜು.18) ಮೂವರು ಗೆಳೆಯರು ಮಾಡಿದ ಕ್ರಾಂತಿ ಒಂದು ಇಡೀ ದಿಲ್ಲೆಯ ಹಲವು ಗ್ರಾಮಗಳನ್ನು ಬೆಳಗಿದೆ. ಈ ಗೆಳೆಯರು ವರ್ಷಗಳ ಕಾಲ ನಡೆಸಿದ ಸತತ ಪ್ರಯತ್ನ ಫಲಕೊಟ್ಟಿದೆ. ಪರಿಣಾಮ ಒಂದು ಜಿಲ್ಲೆಯ 800 ಮನೆಗಳಿಗೆ ದಿನದ 24 ಗಂಟೆ ಉಚಿತ ವಿದ್ಯುತ್ ಲಭ್ಯವಾಗುತ್ತಿದೆ. ವಿದ್ಯುತ್ ಇಲ್ಲ ಅನ್ನೋ ಮಾತೆ ಇಲ್ಲ. ಇದು ಜಾರ್ಖಂಡ್‌ನ ಅಂಶುಮಾನ್ ಲಾಥ್, ಪ್ರಸಾದ್ ಕುಲಕರ್ಣಿ ಹಾಗೂ ಸಮೀರ್ ನಾಯರ್ ಮಾಡಿದ ಕ್ರಾಂತಿಯ ಕತೆ. ಇವರ ಸಾಹಸ, ಪ್ರಯತ್ನ ಕಳೆದ 10 ವರ್ಷಗಳ ಅವರತ ಶ್ರಮಕ್ಕೆ ಸಿಕ್ಕಿದ ಪ್ರತಿಫಲವಾಗಿದೆ.
ಮೂವರು ಗೆಳೆಯರು ಗ್ರಾಮದ ಕತ್ತಲು ನೀಗಿಸಿದ ಕತೆ
ಮೂವರು ಗೆಳೆಯರಾದ ಅಂಶುಮಾನ್ ಲಾಥ್, ಪ್ರಸಾದ್ ಕುಲಕರ್ಣಿ ಹಾಗೂ ಸಮೀರ್ ನಾಯರ್ ಗುಲ್ಮಾ ಜಿಲ್ಲೆಯ ಗ್ರಾಮದಲ್ಲ ಕ್ರಾಂತಿ ಆರಭಿಸಿದ್ದರು. 2015ರಲ್ಲಿ ಗ್ರಾಮ ಊರ್ಜಾ ಯೋಜನೆಯಡಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದರು. ಸೋಲಾರ್ ವಿದ್ಯುತ್ ಬಳಕೆ ಮಾಡುವುದು ಹಾಗೂ ಅದರ ಉಪಯೋಗದ ಕುರಿತು ಗ್ರಾಮಸ್ಥರಿಗೆ ಮನವರಿಕೆ ಮಾಡಲು ಮುಂದಾಗಿದ್ದರು. ವಿದ್ಯುತ್ ಇಲ್ಲದ ಊರಿನಲ್ಲಿ ಈ ಮೂವರು ಅದೇನು ಮಾಡುತ್ತಾರೆ ಎಂದು ಹಲವರು ಇವರ ಮಾತನ್ನು ಕೇಳಲು ಸಿದ್ದರಿರಲಿಲ್ಲ.
ಸರ್ಕಾರಕ್ಕೆ ಇಷ್ಟುವರ್ಷವಾದರೂ ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ. ಹೀಗಿರುವಾಗಿ ಮೂವರು ಅದೇನು ವಿದ್ಯುತ್ ಕೊಡುತ್ತಾರೆ ಎಂದು ಹಲವರು ಮಾತನಾಡಿಕೊಂಡಿದ್ದರು. ಈ ಮೂವರು ಸೇರಿ ಸೋಲಾರ್ ಮೈಕ್ರೋಗ್ರಿಡ್ ಕಂಪನಿ ಆರಂಭಿಸಿಯೇ ಬಿಟ್ಟಿದ್ದರು. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ತೆರಳಿ ಮಾಹಿತಿ ನೀಡಿದ್ದರು. ಬಳಿಕ ಸೋಲಾರ್ ಗ್ರಿಡ್ ಅಳವಡಿಸಿ ವಿದ್ಯುತ್ ನೀಡುವ ಕೆಲಸ ಆರಂಭಿಸಿದ್ದರು. ಒಂದೊಂದ ಮನೆಯಿಂದ ಆರಂಭಗೊಂಡ ಈ ಪಣಯ ಇದೀಗ 10 ವರ್ಷಗಳಲ್ಲಿ 21 ಗ್ರಾಮಗಳ 800 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ನೀಡಲಾಗಿದೆ. ದಿನದ 24 ಗಂಟೆ ವಿದ್ಯುತ್ ಲಭ್ಯವಿದೆ. ಒಮ್ಮೆ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ವಿದ್ಯುತ್ ಬಿಲ್ ತಲೆನೋವು ಇಲ್ಲ.
ಏಷ್ಟೇ ವಿದ್ಯುತ್ ಬಳಸಿ ಕೇವಲ 100 ರೂಪಾಯಿ
ಸಣ್ಣ ಸಣ್ಣ ಉದ್ಯೋಗ ಕೇಂದ್ರಗಳು ಸೇರಿದಂತೆ ಎಲ್ಲೆಡೆ ಸೋಲಾರ್ ವಿದ್ಯುತ್ ಬಳಕೆ ಹೆಚ್ಚಾಯಿತು. ಮೂವರು ಗೆಳೆಯರು ಹೆಚ್ಚು ವಿದ್ಯುತ್ ಶೇಖರಣೆ ಗ್ರಿಡ್ ಬಳಸಿ ಸೋಲಾರ್ ವಿದ್ಯುತ್ ಶೇಕರಿಸಿ ಮನೆ ಮನೆಗಳಗೆ ನೀಡುತ್ತಿದ್ದಾರೆ. ಮನೆ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಹಾಕಲಾಗುತ್ತಿದೆ. ಮನೆಯ ವಿದ್ಯುತ್ ಬಳಕೆಗೆ ಶುಲ್ಕವಿಲ್ಲ. ಆದರೆ ಗ್ರಿಡ್ ನಿರ್ವಹಣೆಗೆ ಪ್ರತಿ ಮನೆಯಿಂದ 100 ರೂಪಾಯಿ ಸಂಗ್ರಹ ಮಾಡಲಾಗುತ್ತದೆ. ಸೌರ ವಿದ್ಯುತ್ ಸಂಪರ್ಕ ಪಡೆಯುವಾಗ ಆರಂಭದಲ್ಲಿ 2,000 ರೂಪಾಯಿ ಹೂಡಿಕೆ ಮಾಡಿದರೆ ಸಾಕು.ಹಲವು ಗ್ರಾಮಗಳು ಸೌರ ವಿದ್ಯುತ್‌ನಿಂದ ಬೆಳಗುತ್ತಿದೆ.
