ಶಿಮ್ಲಾದಲ್ಲಿ ರಸ್ತೆ ತೆರವು ಕಾರ್ಯಾಚರಣೆ ವೇಳೆ ಬುಲ್ಡೋಜರ್ 300 ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಭಯಾನಕ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಜೆಸಿಬಿ ಚಾಲಕ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಟ್ಟದಿಂದ ಉರುಳಿಬಿದ್ದ ಬಂಡೆಯಿಂದ ಈ ದುರಂತ ಸಂಭವಿಸಿದೆ.

ಶಿಮ್ಲಾ: ಅತ್ಯಂತ ಅಪಾಯಕಾರಿ ಹಾಗೂ ಕಡಿದಾದ ರಸ್ತೆಗಳನ್ನು ಹೊಂದಿರುವ ರಾಜ್ಯ ಶಿಮ್ಲಾ, ಇಲ್ಲಿನ ರಸ್ತೆಗಳಲ್ಲಿ ವಾಹನ ಚಲಾಯಿಸಿ ಅಭ್ಯಾಸ ಇರುವವರು ಜಗತ್ತಿನ ಯಾವುದೇ ರಸ್ತೆಗಳಲ್ಲಿ ವಾಹನ ಚಲಾಯಿಸಬಹುದು. ರಸ್ತೆಯ ಒಂದು ಕಡೆ ಕಡಿದಾದ ಕಂದಕಗಳಿದ್ದರೆ ಮತ್ತೊಂದು ಕಡೆ ಧರೆ(ಭರೆ) ಬೆಟ್ಟ ಸ್ವಲ್ಪ ಆಯತಪ್ಪಿದರು. ಸಾವು ಕಟ್ಟಿಟ್ಟ ಬುತ್ತಿ ಇಂತಹ ಕಡಿದಾದ ರಸ್ತೆಯಲ್ಲಿ ರಸ್ತೆ ತೆರವು ಕಾರ್ಯಾಚರಣೆ ಮಾಡುತ್ತಿದ್ದ ಬುಲ್ಡೋಜರ್‌ ಒಂದು ಆಯಾತಪ್ಪಿ 300 ಮೀಟರ್ ಆಳದ ಪ್ರಪಾತಕ್ಕೆ ಬಿದ್ದಿದೆ. ಬುಲ್ಡೋಜರ್ ಕೆಳಗೆ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಭಯಾನಕ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಥಳೀಯರು ತಮ್ಮ ಮೊಬೈಲ್‌ ಕ್ಯಾಮರಾಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಶಿಮ್ಲಾದ ಜಬ್ಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 5ರಲ್ಲಿನ ಕಡಿದಾದ ರಸ್ತೆಯಿಂದ ಕೆಳಗೆ ಬುಲ್ಡೋಜರ್‌ ಬಿದ್ದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಗಿತಗೊಂಡಿದ್ದ ರಸ್ತೆಯ ತೆರವು ಕಾರ್ಯಾಚರಣೆ ವೇಳೆ ಈ ದುರಂತ ನಡೆದಿದ್ದು, ಘಟನೆಯಲ್ಲಿ ಜೆಸಿಬಿ ಚಾಲಕ ದಾರುಣ ಸಾವು ಕಂಡಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಬೆಟ್ಟದಿಂದ ಬಂಡೆಯೊಂದು ಉರುಳಿ ಬಂದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಘಟನೆ ನಡೆದ ಕೆಲವೇ ಕ್ಷಣಗಳ ನಂತರ, ಭೂಕುಸಿತ ಉಂಟಾದ ಪರ್ವತದ ಕಡೆಯಿಂದ ಬುಲ್ಡೋಜರ್ ಬಿದ್ದ ಕಡೆಗೆ ಆಗಮಿಸಿ ಅವಶೇಷಗಳೊಳಗೆ ಸಿಲುಕಿಕೊಂಡು ಚಾಲಕನ ರಕ್ಷಣೆಗೆ ಬಂದಿದ್ದಾರೆ. ಬುಲ್ಡೋಜರ್‌ನಿಂದ ಹೊರತೆಗೆದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಗಂಭೀರ ಗಾಯಗಳಿಂದಾಗಿ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಂತಹ ಗುಡ್ಡಗಾಡು ರಾಜ್ಯಗಳಲ್ಲಿ ಕೆಲದಿನಗಳಿಂದ ಸುರಿಯುತ್ತಿದ್ದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿ ಹಲವು ಕಡೆಗಳಲ್ಲಿ ರಸ್ತೆ ಸ್ಥಗಿತಗೊಂಡಿದ್ದವು. ಅದೇ ರೀತಿ ಇಲ್ಲಿ ಸ್ಥಗಿತಗೊಂಡಿದ್ದ ರಸ್ತೆಯನ್ನು ತೆರವು ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಹಿಮಾಚಲ ಪ್ರದೇಶದ ಹಲವೆಡೆ ಮಳೆ ದೊಡ್ಡ ಅವಾಂತರ ಸೃಷ್ಟಿಸಿದ್ದು, ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಲಾನಾ-I ಜಲವಿದ್ಯುತ್ ಯೋಜನೆಯ ಭಾಗವಾಗಿರುವ ಕಾಫರ್ ಅಣೆಕಟ್ಟು, ಹಠಾತ್ ಪ್ರವಾಹದ ನಡುವೆ ಕುಸಿದ ಕ್ಷಣವನ್ನು ತೋರಿಸುವ ಭಯಾನಕ ವೀಡಿಯೊವೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಸುರಿದ ನಿರಂತರ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ. ಈ ಘಟನೆಯು ಅಣೆಕಟ್ಟಿನ ಕೆಳಭಾಗದ ಪ್ರದೇಶಗಳಲ್ಲಿ ಭೀತಿಯನ್ನುಂಟುಮಾಡಿತ್ತು. ಆದರೆ ಅದೃಷ್ಟವಶಾತ್, ಈ ಘಟನೆಯಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಮಳೆಯಿಂದ ಸಂಭವಿಸಿದ ನಷ್ಟದ ವರದಿಯ ಪ್ರಕಾರ, ಪ್ರಸ್ತುತ ಈ ಮಳೆಗಾಲದಲ್ಲಿ ರಾಜ್ಯದಲ್ಲಿ ಮಳೆ ಸಂಬಂಧಿ ವಿಪತ್ತುಗಳಿಂದ 179 ಜನ ಮೃತಪಟ್ಟಿದ್ದಾರೆ. ರಸ್ತೆ ಅಪಘಾತಗಳಿಂದಾಗಿ 78 ಸಾವುಗಳು ಸಂಭವಿಸಿವೆ.

Scroll to load tweet…