Asianet Suvarna News Asianet Suvarna News

ಬದಲಾದ ಭಾರತ: ಕಾಶ್ಮೀರದಲ್ಲಿ ತಿರಂಗಾ ಹಾರಿಸಿದ ಉಗ್ರನ ಕುಟುಂಬ: ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಸಾಥ್

ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಮುದಾಸಿರ್‌ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಓಗೊಟ್ಟು ಭಾನುವಾರ ಮನೆ ಮೇಲೆ ತ್ರಿವರ್ಣಧ್ವಜ ಹಾರಿಸಿದೆ. 

Jammu Kashmir Hizbul Mujahideen militant Mudasirs family accepted the Har Ghar Tiranga campaign called by Prime Minister Narendra Modi unfurls tricolour in their house akb
Author
First Published Aug 14, 2023, 6:16 AM IST

ಜಮ್ಮು: ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಮುದಾಸಿರ್‌ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಓಗೊಟ್ಟು ಭಾನುವಾರ ಮನೆ ಮೇಲೆ ತ್ರಿವರ್ಣಧ್ವಜ ಹಾರಿಸಿದೆ. ಇದೇ ವೇಳೆ, ದಾರಿ ತಪ್ಪಿರುವ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಕೋರಿದೆ.  ರಾಷ್ಟ್ರದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹರ್‌ ಘರ್‌ ತಿರಂಗಾದ ಭಾಗವಾಗಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ವಾಂಟೆಡ್ ಉಗ್ರರ ಕುಟುಂಬಗಳು  ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿರುವ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.

ಉತ್ತರ ಕಾಶ್ಮೀರದ ಭಯೋತ್ಪಾದನೆ ಪೀಡಿತ ಸೋಪೋರ್ ಪಟ್ಟಣದಲ್ಲಿ (Sopore town), ವಾಂಟೆಡ್ ಹಿಜ್ಬ್ ಕಮಾಂಡರ್ ( Hizb commander) ಜಾವೇದ್ ಮಟ್ಟೂ ಅವರ ಸಹೋದರ ರಯೀಸ್ ಮಟ್ಟೂ (Rayees Mattoo) ಅವರು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಭಾನುವಾರ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಹಿಂದೂಸ್ತಾನ್ ಹಮಾರಾ ಹೈ ಈ ವೇಳೆ ಮಾತನಾಡಿದ ಅವರು 'ಹಿಂದೂಸ್ತಾನ್ ಹಮಾರಾ ಹೈ' ನಾವೆಲ್ಲರೂ ಭಾರತೀಯರು, ಹಿಂದೂಸ್ತಾನ್ ಹಮಾರಾ ಹೈ ಔರ್ ಹಮ್ ಸಬ್ ಹಿಂದೂಸ್ತಾನಿ ಹೈ (ಭಾರತ ನಮ್ಮದು ಮತ್ತು ನಾವೆಲ್ಲರೂ ಭಾರತೀಯರು. ನನ್ನ ಸಹೋದರ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾನೆ ಎಂದ ಮಾತ್ರಕ್ಕೆ ನಾನು ನನ್ನ ದೇಶವನ್ನು ದ್ವೇಷಿಸುತ್ತೇನೆ ಎಂದರ್ಥವಲ್ಲ. ನಾನು ನನ್ನ ಹೃದಯದಲ್ಲಿರುವ ದೇಶಭಕ್ತಿ ಮತ್ತು ಪ್ರೀತಿಯಿಂದ ಮಾತ್ರ ತಿರಂಗಾವನ್ನು ಎತ್ತಿದ್ದೇನೆ.  ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ರಯೀಸ್ ಈ ವೇಳಿ ಹೇಳಿದ್ದಾಗಿ ರಿಪಬ್ಲಿಕ್ ಟಿವಿ ಉಲ್ಲೇಖಿಸಿದೆ.

ಹರ್ ಘರ್ ತಿರಂಗಾ ನಂತರ ದೇಶದ ಜನರಿಗೆ ಮತ್ತೊಂದು ಕರೆ ಕೊಟ್ಟ ಪ್ರಧಾನಿ

 

ಕಾಶ್ಮೀರ ಪಾಕಿಸ್ತಾನವನ್ನು ಬಹಿಷ್ಕರಿಸಿದೆ
ತನ್ನ ಸಹೋದರ ಜಾವೇದ್ ವಿನಾಶದ ಹಾದಿಯನ್ನು ಆರಿಸಿಕೊಂಡಿದ್ದಾನೆ ಎಂಬುದನ್ನು ಒಪ್ಪಿದ ರಾಯೀಸ್, ತನ್ನ ಸಹೋದರ ಮಾಡಿದ ಅದೇ ಪ್ರಮಾದವನ್ನು ಮಾಡದಂತೆ ಕಣಿವೆಯ ಯುವಕರಿಗೆ ಮನವಿ ಮಾಡಿದರು. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದಿಂದ (Pakistan) ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ವದಂತಿಗಳ ಮಧ್ಯೆ ಉಗ್ರ ಜಾವೇದ್ ಮಟ್ಟೂ (Javed Mattoo) 2016 ರಲ್ಲಿ ಕಾಶ್ಮೀರಕ್ಕೆ ಮರಳಿದ್ದ, ಆತ ಭಯೋತ್ಪಾದಕ ಚಟುವಟಿಕೆಗಳನ್ನು ತೊರೆದು ಸಾಮಾನ್ಯ ಜೀವನವನ್ನು ನಡೆಸಲು ಅವರ ಸಹೋದರ ನಡೆಸಿದ ಹಲವು ಹತಾಶ ಪ್ರಯತ್ನಗಳ ಹೊರತಾಗಿಯೂ ಆತ ಮತ್ತೆ ಅದೇ ಕೃತ್ಯದಲ್ಲಿ ಭಾಗಿಯಾಗಲು ಮುಂದಾದ.  ಇಲ್ಲಿನ (ಕಾಶ್ಮೀರ) ಜನರು ಪಾಕಿಸ್ತಾನದ ಕುತಂತ್ರಗಳನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವರು ಕಣಿವೆಯನ್ನು ಪ್ರವೇಶಿಸದಂತೆ ಸಕ್ರಿಯವಾಗಿ ತಡೆಯುತ್ತಿದ್ದಾರೆ. ಭಾರತವು ನಮ್ಮ ದೇಶವಾಗಿದೆ. ದೇಶದ ರಕ್ಷಕರ ಮೇಲಿನ ನಮ್ಮ ಪ್ರೀತಿಯು ಅತ್ಯುನ್ನತವಾಗಿದೆ ಎಂದು ರಯೀಸ್ ಹೇಳಿದ್ದಾರೆ.

ಕಾಶ್ಮೀರಕ್ಕೆ ವಾಪಸಾಗುತ್ತಾ 370ನೇ ವಿಧಿ? ಜುಲೈ 11ರಿಂದ ಸುಪ್ರೀಂ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ

ಕಾಶ್ಮೀರ ಉಪರಾಜ್ಯಪಾಲರ ತಿರಂಗಾ ರಾಲಿಗೆ ಮೆಹಬೂಬಾ ಆಕ್ಷೇಪ

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾನುವಾರ 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಉಪರಾಜ್ಯಪಾಲ ಮನೋಜ್‌ ಸಿನ್ಹಾ (Jammu kashmir) ನೇತೃತ್ವದಲ್ಲಿ ನಡೆದ ತಿರಂಗಾ ರಾಲಿ (Tiranga Rally) ಬಗ್ಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ (PDP chief Mehbooba Mufti) ವ್ಯಂಗ್ಯವಾಡಿದ್ದು, ವಿವಾದಿತ ಹೇಳಿಕೆ ನೀಡಿದ್ದಾರೆ. ಟ್ವೀಟ್‌ ಮಾಡಿರುವ ಮೆಹಬೂಬಾ, ಅಂದು ಜನರ ಮಧ್ಯೆ ನೆಹರು ತಿರಂಗಾ ಹಾರಿಸಿದ್ದರು. ಇಂದು ಭದ್ರತಾ ಪಡೆಗಳ ಮಧ್ಯೆ ರಾಜ್ಯಪಾಲ ಸಿನ್ಹಾ ತ್ರಿವರ್ಣ ಧ್ವಜ (tricolour) ರಾರ‍ಯಲಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ತ್ರಿವರ್ಣ ಧ್ವಜಾರೋಹಣಕ್ಕೆ ಮೆಹಬೂಬಾ ಒಮ್ಮೆ ವಿರೋಧ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಅದನ್ನು ಉಲ್ಲೇಖಿಸಿ ಮುಫ್ತಿ ಚಾಟಿ ಬೀಸಿದ್ದಾರೆ. ಈ ನಡುವೆ, ಭಾನುವಾರ ನಡೆದ ತಿರಂಗಾ ರಾರ‍ಯಲಿಯಲ್ಲಿ ಮಾತನಾಡಿದ ಸಿನ್ಹಾ, ಇಷ್ಟೊಂದು ಜನರು ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದು, ರಾಜ್ಯದಲ್ಲಿನ ಬದಲಾವಣೆ ಸಂಕೇತ ಎಂದಿದ್ದಾರೆ. 

Follow Us:
Download App:
  • android
  • ios