Asianet Suvarna News Asianet Suvarna News

ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾರು ಅಪಘಾತ!

ಪಿಡಿಪಿ ಮುಖ್ಯಸ್ಥೆ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಾಗಿದೆ. ಕಾರಿನ ಮುಂಭಾಗ ನಜ್ಜು ನುಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಈ ಘಟನೆ ನಡೆದಿದೆ.

Jammu Kashmir former CM Mehbooba Mufti car met with Accident in Anantnag ckm
Author
First Published Jan 11, 2024, 3:58 PM IST

ಅನಂತ್‌ನಾಗ್(ಜ.11) ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಂಚರಿಸುತ್ತಿದ್ದ ಕಾರು ಅಫಘಾತವಾಗಿದೆ. ಅನಂತನಾಗ್ ಜಿಲ್ಲೆಯ ಸಂಗಮ್ ಬಳಿ ಭೀಕರ ಅಫಾತ ಸಂಭವಿಸಿದೆ. ಮುಫ್ತಿ ತಮ್ಮ ಕಪ್ಪು ಬಣ್ಣದ ಮಹೇಂದ್ರ ಸ್ಕಾರ್ಪಿಯೋ ಕಾರಿನ ಮೂಲಕ  ಕಾಶ್ಮೀರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ. ಅದೃಷ್ಛವಶಾತ್ ಮೆಹಬೂಬಾ ಮುಫ್ತಿ ಹಾಗೂ ಅವರ ಭದ್ರತಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಶ್ಮೀರ ಖನಬಾಳದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಮುಫ್ತಿ ತೆರಳುತ್ತಿದ್ದರು. ವಿರುದ್ಧ ದಿಕ್ಕಿನಲ್ಲಿ ಬಂದ ಸಾರ್ವಜನಿಕರೊಬ್ಬರ ಕಾರಿಗೆ ಡಿಕ್ಕಿ ಹೊಡೆದಿದೆ. ಮೆಹಬೂಬಾ ಮುಫ್ತಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಚಾಲಕ ಹಾಗೂ ಕಾರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ದೇಶ ತನ್ನ ಸ್ವಂತ ಆಸ್ತಿ ಎಂಬಂತೆ ಬಿಜೆಪಿ ವರ್ತಿಸ್ತಿದೆ: ಹೆಸರು ಬದಲಾವಣೆಗೆ ಮೆಹಬೂಬಾ ಆಕ್ರೋಶ

ಗಾಯಗೊಂಡ ಪೊಲೀಸ್ ಅಧಿಕಾರಿ ಹಾಗೂ ಭದ್ರತಾ ಪಡೆ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮುಫ್ತಿ ಪುತ್ರಿ ಇಲ್ತಿಜಾ,  ಅನಂತನಾಗ್ ಕಡೆ ತೆರಳುತ್ತಿದ್ದ ಮುಫ್ತಿ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಆದರೆ ದೇವರ ದಯೆಯಿಂದ ಮುಫ್ತಿ ಹಾಗೂ ಆಕೆಯ ಭದ್ರತಾ ಸಿಬ್ಬಂದಿಗಳಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಫ್ತಿ ಕಾರಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಂಡಿಯಾ ಒಕ್ಕೂಟದ ಭಾಗವಾಗಿರುವ ಮೆಹಬೂಬಾ ಮುಫ್ತಿ, ಕಾಶ್ಮೀರದಲ್ಲಿ ಮತ್ತೆ 370 ವಿಶೇಷ ಸ್ಥಾನಮಾನಕ್ಕೆ ಹೋರಾಟ ನಡಸುತ್ತಲೇ ಇದ್ದಾರೆ. ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ವಿರೋಧಿಸುತ್ತಿರುವ ಮುಫ್ತಿ ಭಾರಿ  ಸಂಚಲನ ಸೃಷ್ಟಿಸಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಪ್ರತಿದಾಳಿಯನ್ನು ಮುಫ್ತಿ ವಿರೋಧಿಸಿದ್ದರು. ಈ ವೇಳೆ ಪ್ಯಾಲೆಸ್ತಿನ್ ಪರ ಬೆಂಬಲ ಘೋಷಿಸಿದ್ದರು. ಇನ್ನು ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಸೋಲನ್ನು ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದರು. ಹೀಗೆ ಸಂಭ್ರಮಿಸಿದ ವಿದ್ಯಾರ್ಥಿಗಳನ್ನು ಪೊಲೀರು ವಶಕ್ಕೆ ಪಡೆದಿದ್ದರು. ಈ ನಿರ್ಧಾರನ್ನು ಮುಫ್ತಿ ಟೀಕಿಸಿದ್ದರು. 

 

ಬಿಜೆಪಿಯ ದ್ವೇಷದ ರಾಜಕಾರಣ, ಕೋಮುವಾದದಿಂದ ಜನತೆ ಬೇಸತ್ತಿದ್ದಾರೆ: ಮೆಹಬೂಬಾ ಮುಫ್ತಿ

Follow Us:
Download App:
  • android
  • ios