ಶ್ರೀನಗರ(ಆ.02): ಕಳೆದ 73 ವರ್ಷದಿಂದ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿದ್ದ ಕಾಶ್ಮೀರದ ಮೂರು ಹಳ್ಳಿಗಳು ಸಹ ಇದೀಗ ವಿದ್ಯುತ್‌ ಸಂಪರ್ಕ ಪಡೆದುಕೊಂಡಿವೆ. ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯಿರುವ ಕೇರನ್‌, ಮುಂದಿಯಾನ್‌ ಹಾಗೂ ಪತ್ರೂ ಎಂಬ ಗ್ರಾಮಗಳೇ ವಿದ್ಯುತ್‌ ಸಂಪರ್ಕ ಪಡೆದುಕೊಂಡ ಗ್ರಾಮಗಳು.

ಕಾಶ್ಮೀರ ವಿದ್ಯುತ್‌ ಸರಬರಾಜು ಕಾರ್ಪೋರೇಶನ್‌ ಲಿಮಿಟೆಡ್‌ ಅಂತೂ 2 ವರ್ಷಗಳ ಯೋಜನೆಯನ್ನು ಪೂರ್ಣಗೊಳಿಸಿ ಕಗ್ಗತ್ತಲ್ಲಲಿಯೇ ಜೀವಿಸುತ್ತಿದ್ದ 14,000 ಮಂದಿ ವಾಸಿಸುತ್ತಿರುವ ಈ ಗ್ರಾಮಗಳು ಬೆಳಕು ಕಾಣುವಂತೆ ಮಾಡಿದೆ. ಕೊರೋನಾ ಲಾಕ್‌ಡೌನ್‌ ಕಾಲದಲ್ಲಿ ಉದ್ಯೋಗ ಇಲ್ಲದೇ ಮನೆಯಲ್ಲಿಯೇ ಇರುತ್ತಿದ್ದ ಜನರನ್ನು ಬಳಸಿಕೊಂಡು ಶೀರ್ಘ ಕಾಮಗಾರಿ ಮುಗಿಸಲಾಗಿದೆ. 

ಇಡೀ ಕಾಲೋನಿ ಬಿಲ್ ನೀಡಿದ್ದೀರಾ? ದುಬಾರಿ ವಿದ್ಯುತ್ ಬಿಲ್ ನೋಡಿ ಹರ್ಭಜನ್ ಶಾಕ್!

ಇದುವರೆಗೆ ಇಲ್ಲಿನ ಜನರಿಗೆ ಸಂಜೆ 6ರಿಂದ ರಾತ್ರಿ 9 ಗಂಟೆಯ ವರೆಗೆ ಸೋಲಾರ್‌ ಪವರ್‌ ಮತ್ತು ಡೀಸೇಲ್‌ ಜನರೇಟರ್‌ ಮೂಲಕ ವಿದ್ಯುತ್‌ ಕಲ್ಪಿಸಲಾಗುತ್ತಿತ್ತು. ಇದೀಗ ರಾಜ್ಯ ವಿದ್ಯುತ್‌ ಗ್ರಿಡ್‌ನಿಂದ ನೇರ ಸಂಪರ್ಕ ಕಲ್ಪಿಸಲಾಗಿದೆ. ಈ ಬಾರಿ ಗ್ರಾಮಸ್ಥರ ಇನ್ನೊಂದು ಸಂಭ್ರಮವೆಂದರೆ ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಇವರೆಲ್ಲಾ ಟೀವಿಯಲ್ಲಿ ಮೊದಲ ಬಾರಿಗೆ ವೀಕ್ಷಿಸುವ ಅವಕಾಶ ಸಿಗಲಿದೆ.