ಶ್ರೀನಗರ(ಅ.16): ಭಾರತೀಯ ಸೇನೆ ಜಮ್ಮು ಕಾಶ್ಮೀರದ ನೌಗಂ ಸೆಕ್ಟರ್‌ನಲ್ಲಿ ಹಾನಿಯಾಗಿದ್ದ ಪಾಕ್ ಅಧಿಕಾರಿಯ ಸಮಾಧಿಯನ್ನು ದುರಸ್ತಿ ಮಾಡಿದೆ. ಶ್ರೀನಾಗರ ಚೀನಾರ್ ಕಾರ್ಪ್ಸ್‌ ಸಮಾಧಿಯ ಫೋಟೋ ಶೇರ್ ಮಾಡಿದೆ.

ಸಮಾಧಿಯ ಮೇಲೆ, ಮೇಜರ್ ಮೊಹಮ್ಮದ್ ಶಬೀರ್ ಖಾನ್ - ಸಿತಾರ್ ಇ ಜುರಾತ್ ಶಾಹೀದ್ 05, 1972, 1630 ಎಸ್, 9 ಸಿಖ್ ಪ್ರತಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬರೆಯಲಾಗಿದೆ.

ಚೀನಾದಿಂದ ಅಮೆರಿಕಾಗೆ ಅಪಾಯವಿರುವುದು ನಿಜ ಎಂದ ಕಾರ್ಯದರ್ಶಿ ಪೋಂಪೆ

ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 05ರಂದು ಮೃತಪಟ್ಟ ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರ ಸಮಾಧಿ ದುರಸ್ತಿ ಮಾಡಲಾಗಿದೆ ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

ಭಾರತೀಯ ಸೇನೆ ನಂಬುವಂತೆ ಮೃತನಾದ ಯೋಧ ಯಾವುದೇ ದೇಶದವನಾದರೂ ಅದನ್ನೂ ಮೀರಿ ಎಲ್ಲ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದು ಎಂದು ಬರೆಯಲಾಗಿದೆ.