ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಈದ್ ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ/ ಹುಡುಕಾಟದಲ್ಲಿ ನಿರತವಾಗಿರುವ ಸೇನೆ ಮತ್ತು ಪೊಲೀಸ್/ ಉಗ್ರರೇ ಯೋಧನನ್ನು ಕಿಡ್ನಾಪ್ ಮಾಡಿರುವ ಶಂಕೆ/ ಜಮ್ಮು ಕಾಶ್ಮೀರದ ಮನೆಗೆ ಬಂದಿದ್ದ ಸೈನಿಕ

Jammu and Kashmir Missing Jawan in Kulgam District May be Kidnapped by Terrorists Says Army

ಶ್ರೀನಗರ  (ಆ.  03) ಕುಟುಂಬದೊಂದಿಗೆ ಈದ್ ಆಚರಣೆ ಮಾಡಲು ತೆರಳಿದ್ದ ಭಾರತೀಯ ಯೋಧ ಕಣ್ಮರೆಯಾಗಿದ್ದಾರೆ. ಜಮ್ಮುಕಾಶ್ಮೀರದ ಕುಲಗಾಂವ್​ ಪ್ರದೇಶದಿಂದ ಭಾನುವಾರ ನಾಪತ್ತೆಯಾಗಿದ್ದಾರೆ.  ಉಗ್ರರೇ  ಯೋಧನ ಅಪಹರಣ ಮಾಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

ನಾಪತ್ತೆಯಾಗಿರುವ ಯೋಧನಿಗಾಗಿ ಸೇನೆ ಹುಡುಕಾಟ ಶುರುಮಾಡಿದೆ.  162 ಬೆಟಾಲಿನ್​ನ ರೈಫಲ್​ಮೆನ್​ ಶಕೀರ್​ ಮಂಜೂರ್​ ಭಾನುವಾರ ಸಂಜೆ 5ಗಂಟೆಯಿಂದಲೂ ನಾಪತ್ತೆಯಾಗಿದ್ದಾರೆ. ಕುಲಗಾಂವ್​ ಬಳಿ ಅವರ ಕಾರು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. 

ರಫೇಲ್ ಯುದ್ಧ ವಿಮಾನದ ವಿಶೇಷಗಳು ಏನು?

ಶಕೀರ್​  ಈದ್​ ಹಬ್ಬ ಆಚರಿಸಲೆಂದು ಶೋಪಿಯಾನ ಜಿಲ್ಲೆಯಲ್ಲಿರುವ ಮನೆಗೆ ಬಂದಿದ್ದರು. ಹಬ್ಬದ ನಿಮಿತ್ತ ನಿನ್ನೆ ಸಂಜೆ ಅವರು ಕುಟುಂಬದೊಂದಿಗೆ ಹೊರಗೆ ಹೊರಟವರು ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ

ಭದ್ರತಾ ಸಿಬ್ಬಂದಿ ಶೋಪಿಯಾನ್​, ಕುಲಗಾಂವ್​, ಅನಂತ್​ನಾಗ್​ ಜಿಲ್ಲೆಗಳಲ್ಲಿ ಕಳೆದು ಹೋದ ಯೋಧನಿಗಾಗಿ ಹುಡುಕಾಟ ನಡೆಸಿವೆ. ಪೊಲೀಸರು ಡ್ರೋನ್​, ಸ್ನಿಫರ್​ ಶ್ವಾನಗಳನ್ನು ಬಳಸಿ ಹುಡುಕುತ್ತಿದ್ದಾರೆ. ಯೋಧ ಸುರಕ್ಷಿತವಾಗಿ ಮನೆಗೆ ಬಂದು ಮತ್ತೆ ದೇಶ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂಬುದೇ ಎಲ್ಲರ ಹಾರೈಕೆ.

Latest Videos
Follow Us:
Download App:
  • android
  • ios