ಬಹುನಿರೀಕ್ಷಿತ ಜಮ್ಮು ಕಾಶ್ಮೀರ ರಾಜ್ಯದ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಕೆಲವು ಗಂಟೆಗಳ ಹಿಂದಷ್ಟೇ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ  ಈಗ ಪಕ್ಷವೂ ತಾನು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹಿಂಪಡೆದಿದೆ. 

ನವದೆಹಲಿ: ಬಹುನಿರೀಕ್ಷಿತ ಜಮ್ಮು ಕಾಶ್ಮೀರ ರಾಜ್ಯದ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಕೆಲವು ಗಂಟೆಗಳ ಹಿಂದಷ್ಟೇ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಈಗ ಪಕ್ಷವೂ ತಾನು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹಿಂಪಡೆದಿದೆ. 

ಜಮ್ಮು ಭಾಗದ 36 ಅಭ್ಯರ್ಥಿಗಳನ್ನು ಹಾಗೂ ಕಾಶ್ಮೀರ ಕಣಿವೆಯ 8 ಅಭ್ಯರ್ಥಿಗಳನ್ನು ಬಿಜೆಪಿ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಡುಗಡೆ ಮಾಡಿದ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಕಟ ಮಾಡಿತ್ತು. ಕಾಶ್ಮೀರ ಕಣಿವೆಯಿಂದ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಇಬ್ಬರು ಕಾಶ್ಮೀರಿ ಪಂಡಿತತರಾದ ವೀರ್ ಸರಫ್ ಹಾಗೂ ಅಶೋಕ್ ಬಟ್‌ ಕೂಡ ಇದ್ದರು, ಇವರನ್ನು ಶಂಗು ಹಾಗೂ ಹಬ್ಬಕದಲ್‌ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಪಟ್ಟಿ ಬಿಡುಗೆಯಾಗಿ ಸ್ವಲ್ಪ ಹೊತ್ತಿನಲ್ಲೇ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ವಾಪಸ್ ಪಡೆದಿದೆ. 

ಪಕ್ಷವೂ ಮೊದಲ ಹಂತದ ಹೆಸರುಗಳನ್ನು ಮಾತ್ರ ಬಿಡುಗಡೆ ಮಾಡಲು ಉದ್ದೇಶಿಸಿತ್ತು, ಆದರೆ ಪಕ್ಷವು ತಪ್ಪಾಗಿ ಉಳಿದ ಎರಡು ಹಂತಗಳಿಗೂ ಅಭ್ಯರ್ಥಿಗಳನ್ನು ಸೇರಿಸಿದ್ದರಿಂದ ಈ ಪಟ್ಟಿಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಪಕ್ಷವೂ ವಾಪಸ್ ಪಡೆದ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ನಿರ್ಮಲ್ ಸಿಂಗ್, ಮಾಜಿ ಸಚಿವ ಸತ್ಪಾಲ್ ಶರ್ಮಾ ಪ್ರಿಯಾ ಸೇಥಿ ಹಾಗೂ ಶಾಮ್ ಲಾಲ್ ಚೌಧರಿ ಮುಂತಾದವರ ಹೆಸರು ಕೈ ಬಿಟ್ಟು ಹೋಗಿತ್ತು 

Scroll to load tweet…

ಅಲ್ಲದೇ ಈ ಲಿಸ್ಟ್‌ನಲ್ಲಿ ಬೇರೆ ಬೇರೆ ಪಕ್ಷಗಳನ್ನು ತೊರೆದಿದ್ದ ನಾಯಕರ ಹೆಸರಿತ್ತು ಎನ್ನಲಾಗಿದೆ. ಈ ಪಟ್ಟಿಯಲ್ಲಿರುವಂತೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ತೊರೆದಿದ್ದ ಮಾಜಿ ಸಚಿವ ಮುಶ್ತಾಕ್‌ ಬುಖರಿ ಅವರನ್ನು ಬಿಜೆಪಿ ಸುರನ್‌ಕೋಟ್‌ನಿಂದ ಕಣಕಿಳಿಸಿದೆ. ಹಾಗೆಯೇ ಈ ಹಿಂದೆ ಪಿಡಿಪಿ ಪಕ್ಷದಲ್ಲಿದ್ದ ಮುರ್ತಾಜ್ ಖಾನ್ ಅವರನ್ನು ಮೆಂಧರ್‌ನಿಂದ ಕಣಕ್ಕಿಳಿಸಲಾಗಿದೆ. ಹಾಗೆಯೇ ಕಾಂಗ್ರೆಸ್‌ನ ಮಾಜಿ ಸಚಿವ ಶಾಮ್ ಲಾಲ್ ಶರ್ಮಾ ಅವರನ್ನು ಉತ್ತರ ಜಮ್ಮು ಕಾಶ್ಮೀರಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಹಾಗೆಯೇ ಮತ್ತೊಬ್ಬ ಮಾಜಿ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದಲ್ಲಿ ಸಚಿವರಾಗಿರುವ ಜಿತೇಂದ್ರ ಸಿಂಗ್ ಅವರ ಸೋದರ ದೇವೇಂದೆರ್ ಸಿಂಗ್ ರಾಣವನ್ನು ನಗ್ರೋತಾದಿಂದ ಅಭ್ಯರ್ಥಿಯಾಗಿ ಮಾಡಲಾಗಿದೆ.