Asianet Suvarna News Asianet Suvarna News

ಪ್ರತಿಭಟನೆ ಕಾವಿನಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ ಜಾಮಿಯಾ ವಿದ್ಯಾರ್ಥಿಗಳು!

ಪೌರತ್ವ ಕಾಯ್ದೆ ವಿರೋಧಿಸಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ| ಹಿಂಸಾಚಾರಕ್ಕೆ ಮಾರ್ಪಾಡಾದ ಪ್ರತಿಭಟನೆ| ಪ್ರತಿಭಟನೆ ಬಳಿಕ ಸ್ವಚ್ಛ ಭಾರತಕ್ಕೆ ಒರತ್ತು ಕೊಟ್ಟ ಜಾಮಿಯಾ ವಿದ್ಯಾರ್ಥಿಗಳು

Jamia Students Lead The Way For Swachh Bharat As They Clean Up Streets After Protests
Author
Bangalore, First Published Dec 17, 2019, 12:38 PM IST

ನವದೆಹಲಿ[ಡಿ.17]: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಕಳೆದೆರಡು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರದಂದು ಪೊಲೀಸರ ಎಂಟ್ರಿ ಬಳಿಕ ಜಾಮಿಯಾ ಆವರಣ ರಣರಂಗವಾಗಿ ಮಾರ್ಪಾಡಾಗಿದ್ದು, ಇಲ್ಲಿ ನಡೆದ ಲಾಠಿ ಪ್ರಹಾರ ಹಾಗೂ ಹಿಂಸಾಚಾರದ ವಿಡಿಯೋಗಳು ವೈರಲ್ ಆಗಿವೆ. ಈ ಎಲ್ಲದರ ನಡುವೆಯೂ ದಿನವಿಡೀ ನಡೆದ ಪ್ರತಿಭಟನೆ ಬಳಿಕ ಇಲ್ಲಿನ ವಿದ್ಯಾರ್ಥಿಗಳು ರಾತ್ರಿ ಹೊತ್ತು ರಸ್ತೆ ಮೇಲಿನ ಕಸವೆತ್ತಿ ಸ್ವಚ್ಛತೆಗೆ ಒತ್ತು ಕೊಟ್ಟಿರುವ ದೃಶ್ಯಗಳೂ ಸೋಶಿಯಲ್ ಮಿಡಿಯಾದಲ್ಲಿ ಸದ್ಯ ಸೌಂಡ್ ಮಾಡುತ್ತಿವೆ.

ಸದ್ಯದ ಮಾಹಿತಿ ಅನ್ವಯ ಜಾಮಿಯಾ ಹಿಂಸಾಚಾರ ಸಂಬಂಧ ಈವರೆಗೂ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಮೂವರ ಹೆಸರಿನಲ್ಲಿ ಈ ಹಿಂದೆಯೂ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಅವರು ಜಾಮಿಯಾ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ದೇಶದ ಹಲವಾರು ರಾಜ್ಯಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಲವಾರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಕಾಯ್ದೆ ವಿರುದ್ಧ ಧ್ವನಿ ಎತ್ತಿದ್ದಾರೆ. ಕೆಲವೆಡೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರೆ. ಹಲವೆಡೆ ಹಿಂಸಚಾರಕ್ಕೆ ತಿರುಗಿದೆ. ಈಗಾಗಲೇ ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಸಮಾಜದ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಶಾಂತಿಯುತವಾಗಿ ಇರಿ ಎಂಬ ಮನವಿ ಮಾಡಿದ್ದಾರೆ. 

Follow Us:
Download App:
  • android
  • ios