Asianet Suvarna News Asianet Suvarna News

Kerala Nun Rape case: ಜಲಂಧರ್‌ ಬಿಷಪ್‌ ಸ್ಥಾನಕ್ಕೆ ಫ್ರಾಂಕೋ ಮುಳಕ್ಕಲ್‌ ರಾಜೀನಾಮೆ!

ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೋ ಮುಳಕ್ಕಲ್ ಜಲಂಧರ್ ಬಿಷಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಳಕ್ಕಲ್‌ ಅನ್ನು ನಿರ್ದೋಷಿ ಎಂದು ಕೆಳ ಹಂತದ ನ್ಯಾಯಾಲಯ ಘೋಷಣೆ ಮಾಡಿದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ಮಾಡೋದಾಗಿ ಹೈಕೋರ್ಟ್‌ ಒಪ್ಪಿದ ಬೆನ್ನಲ್ಲಿಯೇ ಈ ತೀರ್ಮಾನ ಬಂದಿದೆ.
 

Jalandhar Bishop Franco Mulakkal who accused in Kerala nun rape case resigns Vatican san
Author
First Published Jun 1, 2023, 7:21 PM IST

ನವದೆಹಲಿ (ಜೂ.1):  ಸಂನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ತಮ್ಮ ಬಿಷಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವ್ಯಾಟಿಕನ್‌ ಸಿಟಿಯ ಪೋಪ್ ಅವರು ಜಲಂಧರ್ ಬಿಷಪ್ ಹುದ್ದೆಗೆ ಮುಳಕ್ಕಲ್‌ ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಇನ್ನು ಮುಂದೆ ಫ್ರಾಂಕೋ ಮುಳಕ್ಕಲ್ ಅವರನ್ನು ಬಿಷಪ್ ಎಮೆರಿಟಸ್ ಎಂದು ಕರೆಯಲಾಗುತ್ತದೆ. ಸಂನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮ ಇದಲ್ಲ, ಸ್ವತಃ ಫ್ರಾಂಕೋ ಮುಳಕ್ಕಲ್‌ ಅವರೇ ತಾವಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದು ಭಾರತದಲ್ಲಿನ ವ್ಯಾಟಿಕನ್ ರಾಯಭಾರಿ ಹೇಳಿದ್ದಾರೆ.  ತಮ್ಮ ರಾಜೀನಾಮೆಯನ್ನು ಘೋಷಿಸುವ ವೀಡಿಯೊ ಸಂದೇಶದಲ್ಲಿ, ಫ್ರಾಂಕೋ ಮುಳಕ್ಕಲ್‌ ಅವರು ಜಲಂಧರ್ ಡಯಾಸಿಸ್‌ನ ಒಳಿತಿಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ಸಂನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಫ್ರಾಂಕೋ ಮುಳಕ್ಕಲ್‌ ಅವರನ್ನು ಖುಲಾಸೆಗೊಳಿಸಿತ್ತು. ಬಿಷಪ್ ಖುಲಾಸೆ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುತ್ತಿರುವಾಗಲೇ ಬಿಷಪ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೆ ಒಳಗಾದ ದೇಶದ ಮೊದಲ ಕ್ಯಾಥೋಲಿಕ್ ಬಿಷಪ್ ಎನ್ನುವ ಕುಖ್ಯಾತಿಯನ್ನು ಫ್ರಾಂಕೋ ಮುಳಕ್ಕಲ್‌ ಎದುರಿಸಿದ್ದಾರೆ. ಸಂನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಮಾಡಿರುವ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ಆರಂಭದಲ್ಲಿ ಅತ್ಯಾಚಾರದ ಆರೋಪವನ್ನು ನಯವಾಗಿಯೇ ತಿರಸ್ಕರಿಸಿದ್ದ ಬಿಷಪ್ ಫ್ರಾಂಕೋ ನಂತರ ಸನ್ಯಾಸಿನಿಯ ವಿರುದ್ಧವೇ ಕಟುವಾದ ಆರೋಪಗಳನ್ನು ಮಾಡಿದ್ದರು. ಆದರೆ ತನಿಖಾಧಿಕಾರಿಗಳು ಬಿಷಪ್ ಹಾಗೂ ಸಂನ್ಯಾಸಿನಿಯ ಭೇಟಿ ಮತ್ತು ಮೊಬೈಲ್ ಸಂದೇಶಗಳನ್ನು ಕಲೆ ಹಾಕಿದಾಗ ಅಗತ್ಯ ಉತ್ತರವನ್ನು ಪಡೆದಿದ್ದರು.

ಕಿರುಕುಳ ನೀಡಿದ ದೂರಿನ ಮೇರೆಗೆ ಕುರಿಲಂಗಾಡ್ ಪೊಲೀಸರು ಬಿಷಪ್ ಫ್ರಾಂಕೋ ಮುಳಕ್ಕಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರೂ ಎರಡು ತಿಂಗಳ ತನಕ ಯಾವುದೇ ಪ್ರಗತಿ ಸಾಧಿಸಿರಲಿಲ್ಲ. ಇದರ ಬೆನ್ನಲ್ಲಿಯೇ ಮಠದ ಹೊರಗೆ ಸಂನ್ಯಾಸಿನಿಯರ ಧ್ವನಿ ಏರಲು ಆರಂಭವಾಗಿತ್ತಲ್ಲದೆ, ಸಿಸ್ಟರ್ ಅನುಪಮಾ ನೇತೃತ್ವದಲ್ಲಿ ಐವರು ಧರಣಿ ಆರಂಭಿಸಿದರು.  ತನ್ನ ಸಹೋದ್ಯೋಗಿ ಅನುಭವಿಸಿದ ಕ್ರೂರ ಚಿತ್ರಹಿಂಸೆಗೆ ಕಾರಣವಾದ ಬಿಷಪ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಯಿತು. ಅಂತಿಮವಾಗಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಬಿಷಪ್ ಅನ್ನು ಬಂಧಿಸಿದರು. 2019ರ ಏಪ್ರಿಲ್ 9ರಂದು ಪಾಲಾ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಸಲಾಯಿತು. ಅದರ ನಂತರವೂ ವಿಚಾರಣೆಯನ್ನು ವಿಳಂಬಗೊಳಿಸಲು ಹಲವಾರು ಪ್ರಯತ್ನಗಳು ನಡೆದವು. ಒಂದರ ನಂತರ ಒಂದರಂತೆ ಬಂದಿರುವ ಸಮನ್ಸ್‌ಗಳು ಸ್ಪಷ್ಟವಾಗಿಲ್ಲ ಎಂದು ಬಿಷಪ್ ಬೆಂಬಲಿಗರು ನ್ಯಾಯಾಲಯದ ಮೊರೆ ಹೋಗಿದ್ದರು. 

 

Kerala Nun Rape case: ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ 'ನಿರ್ದೋಷಿ' ಎಂದ ಕೋರ್ಟ್‌!

ಆದರೆ ಅಂತಿಮವಾಗಿ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಗೋಪಕುಮಾರ್ ಅವರು ಬಿಷಪ್ ಫ್ರಾಂಕೋ ಮುಳಕ್ಕಲ್‌ ಅವರನ್ನು ಸನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದರು. ಬಿಷಪ್ ಅಪರಾಧ ಎಸಗಿದ್ದಾರೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಮತ್ತು ಸಂನ್ಯಾಸಿನಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಬೇಕು ಎಂದು ಮೇಲ್ಮನವಿಗಳು ಒತ್ತಾಯಿಸಿವೆ. ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಬಿಷಪ್ ಫ್ರಾಂಕೊ ಬಂಧನಕ್ಕೆ ಕಾರಣರಾದ ಐವರು ಸನ್ಯಾಸಿನಿಯರು

Follow Us:
Download App:
  • android
  • ios