Asianet Suvarna News Asianet Suvarna News

ಬಿಷಪ್ ಫ್ರಾಂಕೊ ಬಂಧನಕ್ಕೆ ಕಾರಣರಾದ ಐವರು ಸನ್ಯಾಸಿನಿಯರು

ಬಿಷಪ್ ಫ್ರಾಂಕೊ ಮುಲಕ್ಕಲ್ ರನ್ನು ಬಂಧಿಸಬೇಕೆಂದು ಕೇರಳದ ವಿವಿಧ ಭಾಗದಿಂದ ಆಗಮಿಸಿ ರಾಜ್ಯ ಹೈಕೋರ್ಟಿನ ಸನಿಹದಲ್ಲಿ ಐವರು ಸನ್ಯಾಸಿನಿಯರು ಕಳೆದ 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

Kerala nun rape: These sisters joined forces to bring Bishop Franco Mulakkal to justice
Author
Bengaluru, First Published Sep 23, 2018, 10:26 PM IST

ಕೊಚ್ಚಿ[ಸೆ.23]: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಬಂಧನಕ್ಕೆ ಕಾರಣರಾದವರು ಐವರು ಸನ್ಯಾಸಿನಿಯರು ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಬಿಷಪ್ ಫ್ರಾಂಕೊ ಮುಲಕ್ಕಲ್ ರನ್ನು ಬಂಧಿಸಬೇಕೆಂದು ಕೇರಳದ ವಿವಿಧ ಭಾಗದಿಂದ ಆಗಮಿಸಿ ರಾಜ್ಯ ಹೈಕೋರ್ಟಿನ ಸನಿಹದಲ್ಲಿ ಐವರು ಸನ್ಯಾಸಿನಿಯರು ಕಳೆದ 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇವರಿಗೆ ಬೆಂಬಲವಾಗಿ ವಿವಿಧ ಸಂಘಸಂಸ್ಥೆಗಳ ನಾಯಕರು ಸಹ ಕೈಜೋಡಿಸಿದ್ದರು. ಇವರ ಹೋರಾಟದ ಫಲವಾಗಿ ಕೇರಳ ರಾಜ್ಯ ಪೊಲೀಸರು 3 ದಿನಗಳ ಹಿಂದೆ ಬಿಷಪ್ ಫ್ರಾಂಕೊ ಮುಲಕ್ಕಲ್ ಬಂಧಿಸಿ ವಿಚಾರಣೆಗೊಳಪಡಿಸಿದೆ.

ದೇಶದಲ್ಲೇ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿ ಫ್ರಾಂಕೊ ಅವರದ್ದಾಗಿದೆ. ಬಿಷಪ್ ಪೊಲೀಸರ ವಿಚಾರಣೆ ವೇಳೆ ಅಸಮಂಜಸ ಹೇಳಿಕೆಗಳನ್ನು ನೀಡಿದ ಕಾರಣಕ್ಕಾಗಿ ಬಂಧಿಸಲಾಗಿದೆ. ವ್ಯಾಟಿಕನ್ ಪೋಪ್ ಫ್ರಾಂಕೊ ಅವರನ್ನು ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ. ಮುಲಕ್ಕಲ್ 2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾರೆ.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿKerala nun rape: These sisters joined forces to bring Bishop Franco Mulakkal to justice

 

Follow Us:
Download App:
  • android
  • ios