Asianet Suvarna News Asianet Suvarna News

ದೆಹಲಿ ಜೆಎನ್‌ಯುನಲ್ಲಿ ಶೃಂಗೇರಿ ಪೀಠಾಧೀಶ್ವರ ವಿದ್ಯಾರಣ್ಯರ ಪ್ರತಿಮೆ ಅನಾವರಣ!

ಶೃಂಗೇರಿ ಶ್ರೀ ಶಾರದಾ ಪೀಠದ 12ನೇ ಪೀಠಾಧೀಶ್ವರರಾದ ವಿಜಯನಗರ ಸಾಮ್ರಾಜ್ಯ ಸ್ಥಾಪಕ ಜಗದ್ಗುರು ಶ್ರೀ ವಿದ್ಯಾರಣ್ಯರ ಪ್ರತಿಮೆಯನ್ನು ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅನಾವರಣ ಮಾಡಲಾಗಿದೆ. ಇಷ್ಟೇ ಅಲ್ಲ ಅಡ್ವಾನ್ಸ್ಡ್ ಸ್ಟಡೀಸ್‌ಗೆ ವಿದ್ಯಾರಣ್ಯರ ಹೆಸರನ್ನಿಡಲಾಗಿದೆ.
 

Jagadguru Sri Sringeri Vidyaranya Mahaswami statue unveiled in Jawaharlal Nehru university Delhi ckm
Author
First Published Feb 29, 2024, 2:10 PM IST

ದೆಹಲಿ(ಫೆ.29) ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಪ್ರತಿಷ್ಠಿತ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇಂದು ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜನೆಗೊಂಡಿದೆ. ದೆಹಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ 12ನೇ ಪೀಠಾಧೀಶ್ವರರಾದ ವಿಜಯನಗರ ಸಾಮ್ರಾಜ್ಯ ಸ್ಥಾಪಕ ಜಗದ್ಗುರು ಶ್ರೀ ವಿದ್ಯಾರಣ್ಯರ ಪ್ರತಿಮೆ ಅನಾವರಣ ಮಾಡಲಾಗಿದೆ. ಇದೇ ವೇಳೆ ವಿದ್ಯಾರಣ್ಯ ಸಂಶೋಧನಾ ಕೇಂದ್ರವನ್ನೂ ಉದ್ಘಾಟನೆ ಮಾಡಲಾಗಿದೆ. 

ಶೃಂಗೇರಿ ಪೀಠದ ಮುಖ್ಯ ಸಲಹೆಗಾರ ಡಾ.ವಿ.ಆರ್.ಗೌರಿಶಂಕರ್ ರಿಂದ ಪ್ರತಿಮೆ ಅನಾವರಣಗೊಳಿಸಿ ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ. ಜೆಎನ್‌ಯು ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಕ್ಕೆ ವಿದ್ಯಾರಣ್ಯ ಇನ್ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ ಗೆ (VIKAS) ಎಂದು  ಮರುನಾಮಕರಣ ಮಾಡಲಾಗಿದೆ.  ಬಳಿಕ ಮಾತನಾಡಿದ ಗೌರಿಶಂಕರ್, ಈ ಹಿಂದೆ  JNU ವಿಶ್ವವಿದ್ಯಾಲಯದ ಒಳಗಡೆ ಬರುವುದಕ್ಕೂ ಭಯದ ವಾತಾವರಣ ಇತ್ತು. ಇದೀಗ ಅಂತಹ ವಾತಾವರಣ ಇಲ್ಲ ಎಂದಿದ್ದಾರೆ. 

JNUನಲ್ಲಿ ಹೊಸ ನೀತಿ ; ಪ್ರತಿಭಟಿಸಿದರೆ 20,000, ಭಾರತ ವಿರೋಧಿ ಘೋಷಣೆಗೆ 10,000 ರೂ ದಂಡ!

ಸನಾತನ ಧರ್ಮದ ಅರಿವು ದೇಶದ ಜನರಿಗೆ ತುಂಬಾ ಮುಖ್ಯವಾಗಿದೆ. ವಿದ್ಯಾರಣ್ಯರು ಶೃಂಗೇರಿ ಪೀಠದ ಗುರುಗಳು ಆಗಿದ್ದರು, ಜೊತೆಗೆ ಜೊತೆಗೆ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಆಗಿದ್ದರು. ಅವರ ಹೆಸರಲ್ಲಿ ಒಂದು ಸಂಶೋಧನಾ ಕೇಂದ್ರ ಆರಂಭವಾಗಿರೋದು ಸಂತೋಷದ ಸಂಗತಿಯಾಗಿದೆ. ಇದೇ ವೇಳೆ ಈಗಿನ ಯುವ ಸಮಾಜಕ್ಕೆ ಸನಾತನದ ಅರಿವು ಮೂಡಿಸುವಂತಹ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಜೆನ್‌ಯು ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಗೌರಿಶಂಕರ್ ಹೇಳಿದ್ದಾರೆ  

ದೇಶದಲ್ಲಿ ಜವಾಹರ್‌ಲಾಲ್ ನೆಹರೂ ವಶ್ವವಿದ್ಯಾಲಯ ಅತ್ಯಂತ ಹೆಸರುವಾಸಿ ಹಾಗೂ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ, ನಮ್ಮ ಸಂಸ್ಕೃತಿಯನ್ನ ತಿಳಿಸಿಕೊಡುವ ಕೆಲಸ ಆಗಲಿದೆ ಎಂದು JNU ಉಪ ಕುಲಪತಿ ಪ್ರೋ.ಶಾಂತಿಶ್ರೀ ದುಲಿಪುಡಿ ಪಂಡಿತ್ ಹೇಳಿದ್ದಾರೆ.  ಇವತ್ತು ವಿದ್ಯಾರಣ್ಯರ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ತೆನಾಲಿ ರಾಮ, ಕೃಷ್ಣದೇವರಾಯ ಆ ಆಸ್ಥಾನದಲ್ಲಿ ಇದ್ದ ವಿದ್ಯಾರಣ್ಯರು ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾಗಿದ್ದಾರೆ ಎಂದಿದ್ದಾರೆ.

ಕಾಶ್ಮೀರಕ್ಕೆ ಸ್ವಾತಂತ್ರ ನೀಡಿ, ಭಗವಾ ಧ್ವಜ ಉರಿಯಲಿದೆ : ಜೆಎನ್‌ಯುದಲ್ಲಿ ಮತ್ತೆ ದೇಶ ವಿರೋಧಿ ಬರಹ

2047ಕ್ಕೆ ವಿಕಸಿತ ಭಾರತ ಆಗಬೇಕು ಅನ್ನೋ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಆದಿಶಂಕರಾಚಾರ್ಯರ ಅದ್ವೈತ ಈ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ JNU ವಿದ್ಯಾರಣ್ಯರ ಪ್ರತಿಮೆ ಅನಾವರಣಗೊಳಿಸಿ, ಸಂಶೋಧನಾ ಕೇಂದ್ರವನ್ನೂ ಉದ್ಘಾಟಿಸಲಾಗಿದೆ.  ಇದಕ್ಕಾಗಿ ಶೃಂಗೇರಿ ಮಠ ಹಾಗೂ ಶ್ರೀಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಂತಿಶ್ರೀ ದುಲಿಪುಡಿ ಪಂಡಿತ್ ಹೇಳಿದ್ದಾರೆ. 

JNU ವಿಶ್ವಗುರು ಆಗಬೇಕು ಅಂದ್ರೆ ಅದಕ್ಕೆ ವಿದ್ಯಾರಣ್ಯರಿಗಿಂತ ಉತ್ತಮ ಆದರ್ಶ ವ್ಯಕ್ತಿ ಬೇರೆ ಯಾರೂ ಇಲ್ಲ. ವಿಕಸಿತ ಭಾರತ, ಭಾರತ ವಿಶ್ವ ಗುರು ಆಗುವುದಕ್ಕೆ ವಿದ್ಯಾರಣ್ಯರು ಉತ್ತಮ ಐಕಾನ್ ಆಗಲಿದ್ದಾರೆ ಎಂದು ಶಾಂತಿಶ್ರೀ ದುಲಿಪುಡಿ ಪಂಡಿತ್ ಹೇಳಿದ್ದಾರೆ.

Follow Us:
Download App:
  • android
  • ios