ಭೋಪಾಲ್(ಅ.25)‌: ತಮ್ಮನ್ನು ‘ಐಟಂ’ ಎಂದು ಕೀಳು ಭಾಷೆಯಲ್ಲಿ ಟೀಕಿಸಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಮೇಲೆ ಬಿಜೆಪಿ ನಾಯಕಿ ಹಾಗೂ ಸಚಿವೆ ಇಮರತಿ ದೇವಿ ಗರಂ ಆಗಿದ್ದಾರೆ. ಕಮಲ್‌ನಾಥ್‌ ಅವರನ್ನು ‘ಲುಚ್ಚಾ, ಲಫಂಗ ಹಾಗೂ ಕುಡುಕ’ ಎಂದು ಟೀಕಿಸಿದ್ದಾರೆ.

ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಇಮರತಿ ದೇವಿ ಅವರು ಪ್ರಚಾರ ರಾರ‍ಯಲಿಯೊಂದರಲ್ಲಿ ಮಾತನಾಡಿ, ‘ಒಬ್ಬ ಮಾಜಿ ಮುಖ್ಯಮಂತ್ರಿ ಇಂಥ ಭಾಷೆ ಬಳಸುತ್ತಾರೆ ಎಂದರೆ ನನಗೂ ಕೂಡ ಬಳಸಲು ಬರುತ್ತದೆ. ಇಂಥ ಭಾಷೆ ಬಳಸುವ ಕಮಲ್‌ನಾಥ್‌ ಒಬ್ಬ ‘ಲುಚ್ಚಾ’ ಹಾಗೂ ‘ಲಫಂಗ’. ಕುಡುಕನ ರೀತಿ ಅವರು ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಕಮಲ್‌ನಾಥ್‌ ಅವರು ಇಮರತಿ ದೇವಿಯನ್ನು ಐಟಂ ಎಂದು ಕರೆದಿದ್ದರು ಹಾಗೂ ಅವರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೀದಾ ಸಾದಾ ಮನುಷ್ಯ ಎಂದು ಹೊಗಳಿದ್ದರು. ಬಳಿಕ ಐಟಂ ಹೇಳಿಕೆಗೆ ಕಮಲ್‌ ಕ್ಷಮೆ ಕೇಳಿದ್ದರು.