ನೀರಿನ ಟ್ಯಾಂಕ್ ಒಳಗೆ ರಾಶಿ ರಾಶಿ ಹಣ ನೋಟು ಒಣಗಿಸಲು ಹೇರ್ ಡ್ರಾಯರ್ ಬಳಸಿದ ಐಟಿ ಅಧಿಕಾರಿಗಳು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಘಟನೆ
ಭೋಫಾಲ್(ಜ.11): ಆದಾಯ ತೆರಿಗೆ ಇಲಾಖೆಯು ಶುಕ್ರವಾರ (ಜ.7) ಮಧ್ಯಪ್ರದೇಶದ ಭೋಪಾಲ್‌ನ ದಾಮೋಹ್‌ನಲ್ಲಿರುವ ಮದ್ಯದ ಉದ್ಯಮಿ ಶಂಕರ್ ರೈ (Shankar Rai) ಮತ್ತು ಅವರ ಕುಟುಂಬದ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಕುತೂಹಲಕಾರಿ ಸಂಗತಿ ಎಂದರೆ ನೋಟುಗಳನ್ನು ನೆಲದಡಿ ನಿರ್ಮಿಸಿದ್ದ ನೀರಿನ ತೊಟ್ಟಿಯಲ್ಲಿ ಬ್ಯಾಗ್‌ನಲ್ಲಿ ತುಂಬಿಸಿ ಹಣವನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿತ್ತು. ಅಲ್ಲಿಂದ ಹಣ ಹೊರ ತೆಗೆದ ಅಧಿಕಾರಿಗಳು ಹೇರ್ ಡ್ರಾಯರ್ ಹಾಗೂ ಇಸ್ತ್ರಿ ಪೆಟ್ಟಿಗೆ ಸಹಾಯದಿಂದ ಒದ್ದೆಯಾದ ನೋಟುಗಳನ್ನು ಒಣಗಿಸುತ್ತಿದ್ದಾರೆ. ಅಧಿಕಾರಿಗಳು ಹೇರ್ ಡ್ರಾಯರ್‌ನಿಂದ ನೋಟುಗಳನ್ನು ಒಣಗಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 8 ಕೋಟಿ ರೂಪಾಯಿ ನಗದು ಮತ್ತು 3 ಕಿಲೋ ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಅದರಲ್ಲಿ ನೀರಿನ ಟ್ಯಾಂಕ್‌ನಲ್ಲಿ ಅಡಗಿಸಿಟ್ಟಿದ್ದ 1 ಕೋಟಿ ರೂಪಾಯಿ ನಗದನ್ನು ಒಳಗೊಂಡ ಬ್ಯಾಗ್ ಕೂಡ ಸೇರಿದೆ. ಅಲ್ಲದೆ, ಮೂರು ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ದಾಳಿಯ ನೇತೃತ್ವ ವಹಿಸಿದ್ದ ಜಬಲ್ಪುರದ (Jabalpur) ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮುನ್ಮುನ್ ಶರ್ಮಾ (Munmun Sharma) ಹೇಳಿದ್ದಾರೆ.
ಕಾರ್ಯಾಚರಣೆ ಮುಗಿದ ನಂತರ, ಜಂಟಿ ಆಯುಕ್ತರು, ದಾಳಿ ಮುಗಿದಿದೆ ಮತ್ತು ತನಿಖೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಭೋಪಾಲ್‌ನಲ್ಲಿ ದಾಳಿ ವೇಳೆ ರೈ ಕುಟುಂಬದಿಂದ ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸುತ್ತೇವೆ. ಇಲಾಖೆಯು ಈಗ ವಶಪಡಿಸಿಕೊಂಡ ದಾಖಲೆಗಳು ಮತ್ತು ಬೇನಾಮಿ ಆಸ್ತಿಗಳನ್ನು ತನಿಖೆ ಮಾಡುತ್ತದೆ. ಆದ್ದರಿಂದ, ನಾವು ಅಂತಿಮ ಅಂಕಿ ಅಂಶಕ್ಕಾಗಿ ಕಾಯಬೇಕಾಗಿದೆ ಎಂದು ಜಂಟಿ ಆಯುಕ್ತರು ಹೇಳಿದರು.
IT Raid: ಮಾಡೋದು ಪರ್ಫ್ಯೂಮ್ ಬ್ಯುಸಿನೆಸ್, ಕೋಟಿ ಕುಬೇರ, ಓಡಾಡೋದು ಹಳೇ ಸ್ಕೂಟರ್‌ನಲ್ಲಿ!
ಗುರುವಾರ ಬೆಳಗ್ಗೆ 6 ಗಂಟೆಗೆ ಆರಂಭವಾದ ದಾಳಿ 39 ಗಂಟೆಗಳ ಕಾಲ ಮುಂದುವರಿಯಿತು. ಶಂಕರ್ ರೈ ಕುಟುಂಬಕ್ಕೆ ಸೇರಿದ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಉದ್ಯಮಿ ಶಂಕರ್ ರೈ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪುರಸಭೆ ಅಧ್ಯಕ್ಷರಾಗಿದ್ದಾರೆ. ಅವರ ಸಹೋದರ ಕಮಲ್ ರೈ ಬಿಜೆಪಿ ಮುಖಂಡರಾಗಿದ್ದು, ಪುರಸಭೆಯ ಉಪಾಧ್ಯಕ್ಷರಾಗಿದ್ದರು.
IT Raid: ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಮೇಲೆ ಐಟಿ ದಾಳಿ: 70 ಕೋಟಿ ರು.ಗೂ ಹೆಚ್ಚು ಮೊತ್ತದ ವಂಚನೆ ಹಣ ಜಪ್ತಿ
ಮದ್ಯದ ವ್ಯಾಪಾರದ ಜೊತೆಗೆ, ರೈ ಕುಟುಂಬವು ಸಾರಿಗೆ, ಹೋಟೆಲ್, ಬಾರ್ ಮತ್ತು ಪೆಟ್ರೋಲ್ ಪಂಪ್ ಜೊತೆಗೆ ಬಡ್ಡಿಗೆ ಹಣ ಸಾಲ ನೀಡುವ ವ್ಯವಹಾರವನ್ನು ಸಹ ಹೊಂದಿದೆ ಎಂದು ಮುನ್ಮುಮ್ ಶರ್ಮಾ ಹೇಳಿದರು.
