Asianet Suvarna News Asianet Suvarna News

UP IT Raid Updates: 250 ಕೋಟಿ ಜಪ್ತಿ, ಉದ್ಯಮಿಯ ಬಂಧನ

 

  • ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ ಪೀಯೂಷ್‌ ಜೈನ್‌ ಬಂಧನ
  • ಮನೆ ಹಾಗೂ ಕಾರ್ಖಾನೆಯಲ್ಲಿ 250 ಕೋಟಿ ಹಣ ಜಪ್ತಿ
  • ಹಣ ಲೆಕ್ಕ ಮಾಡಲು ಮೆಷಿನ್‌ ಬಳಸಿದ್ದ ಅಧಿಕಾರಿಗಳು
IT raid continued in UP 250 Crore Found in Businessman Piyush Jain house arrested akb
Author
Bangalore, First Published Dec 27, 2021, 11:11 AM IST

ಲಕ್ನೋ(ಡಿ.27): ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್(Piyush Jain) ಅವರನ್ನು ಬಂಧಿಸಲಾಗಿದೆ. ಉತ್ತರಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದ್ದು, ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ  ಪಿಯೂಷ್‌ ಜೈನ್‌ ನಿವಾಸದಲ್ಲಿ 250 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಜೈನ್ ಅವರ ನಿವಾಸದಲ್ಲಿ ಇತ್ತೀಚೆಗೆ ಐಟಿ ದಾಳಿ ನಡೆದು ಅವರ ನಿವಾಸದಲ್ಲಿ ಮೆಷಿನ್‌ ಮೂಲಕ ಅಧಿಕಾರಿಗಳು ಹಣ ಲೆಕ್ಕ ಮಾಡುತ್ತಿದ್ದ ದೃಶ್ಯಗಳ ಫೋಟೋಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡುಗಡೆಗೊಳಿಸಿದ ಬಳಿಕ  ಪಿಯೂಷ್‌ ಜೈನ್‌ ಮಾಧ್ಯಮಗಳ ಪ್ರಚಾರದ ಕೇಂದ್ರ ಬಿಂದುವಾಗಿದ್ದರು. 

ಭಾನುವಾರವಷ್ಟೇ ಉತ್ತರ ಪ್ರದೇಶದ ಕನೌಜ್(Kannauj) ಜಿಲ್ಲೆಯ ಓಡೋಚೆಮ್ ಇಂಡಸ್ಟ್ರೀಸ್‌ನ (Odochem Industries)ಪ್ರವರ್ತಕ, ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ಕಾರ್ಖಾನೆ ಮತ್ತು ನಿವಾಸದಿಂದ  ಅಹಮದಾಬಾದ್‌ (Ahmedabad)ನ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ವು 10 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ.

IT Raid: ಉತ್ತರ ಪ್ರದೇಶ ಸೆಂಟ್‌ ಉದ್ಯಮಿ ಮನೆಯಲ್ಲಿ ಸಿಕ್ಕಿದ್ದು 177 ಕೋಟಿ..!

ಅಲ್ಲದೇ ಇವರ ಕಾರ್ಖಾನೆಯಿಂದ ಲೆಕ್ಕಕ್ಕೆ ಸಿಗದಷ್ಟು ಶ್ರೀಗಂಧದ ಎಣ್ಣೆ(sandalwood oil), ಕೋಟಿಗಟ್ಟಲೆ ಮೌಲ್ಯದ ಸುಗಂಧ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (Directorate General of GST Intelligence)(ಡಿಜಿಜಿಐ) ಮತ್ತು ಸ್ಥಳೀಯ ಕೇಂದ್ರ ಜಿಎಸ್‌ಟಿ (GST) ತಂಡವು ಶೋಧದ ಮೊದಲ ದಿನ ಜೈನ್ ಅವರ ಮನೆಯ ಆವರಣವನ್ನು ತಲುಪಿದಾಗ, ಅವರು ಓಡಿಹೋಗಿದ್ದರು ಮತ್ತು ತನಿಖಾ ಅಧಿಕಾರಿಗಳಿಂದ ಹಲವು ಕರೆಗಳು ಹೋದ ಎರಡು ಗಂಟೆಗಳ ನಂತರ ಅವರು ಮನೆಗೆ ಹಿಂತಿರುಗಿದರು ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. 

UP IT raids ಉದ್ಯಮಿ ಮನೆ ಮೇಲೆ ಅಧಿಕಾರಿಗಳ ದಾಳಿ, 150 ಕೋಟಿ ರೂ ಮೀರಿದ ನಗದು ಪತ್ತೆ!

ಕಾನ್ಪುರ( Kanpur) ದಲ್ಲಿಯೂ ಗಣಪತಿ ರೋಡ್ ಕ್ಯಾರಿಯರ್ಸ್ (Ganpati Road Carriers) ಮಾಲೀಕತ್ವದ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯ ಕಚೇರಿಗಳು ಮತ್ತು ಗೋಡೌನ್‌ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ನಂತರ ಪಿಯೂಷ್ ಜೈನ್ ಅವರ ಆವರಣಕ್ಕೆ ಐಟಿ ದಾಳಿ ಸ್ಥಳಾಂತರಗೊಂಡಿತು. ಸಿಬಿಐಸಿಯ(CBIC) ಇತಿಹಾಸದಲ್ಲಿಯೇ ಇದು ಅತಿದೊಡ್ಡ ಜಪ್ತಿಯಾಗಿದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಅಧ್ಯಕ್ಷ ವಿವೇಕ್ ಜೋಹ್ರಿ( Vivek Johri) ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

(ಡಿ.26) ರಂದು ಕಾನ್ಪುರದ ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ ಪೀಯೂಷ್‌ ಜೈನ್‌ಗೆ(Piyush Jain) ಸಂಬಂಧಿಸಿದ 177.45 ಕೋಟಿ ರು. ನಗದನ್ನು ಕಾನ್ಪುರದ(Kanour) ವಿವಿಧ ಸ್ಥಳಗಳಿಂದ ಸರಕು ಮತ್ತು ಸೇವಾ ತೆರಿಗೆ ವಿಭಾಗದ ಅಧಿಕಾರಿಗಳು ಜಪ್ತಿ ಮಾಡಿದ್ದರು.. ಶುಕ್ರವಾರದವರೆಗೆ 150 ಕೋಟಿ ರೂ. ಎಣಿಸಲಾಗಿತ್ತು. ತಡರಾತ್ರಿ ಎಣಿಕೆ ಮುಂದುವರಿದಾಗ 177 ಕೋಟಿ ರೂ.ಗೆ ಏರಿತ್ತು. ಜಿಎಸ್‌ಟಿ(GST) ವಿಭಾಗದ ಇತಿಹಾಸದಲ್ಲೇ ಇಷ್ಟು ಹಣವನ್ನು(Money) ಜಪ್ತಿ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ. ಶಿಖರ್‌ ಪಾನ್‌ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನು ತಯಾರಿಸುವ ತ್ರಿಮೂರ್ತಿ ಫ್ರೇಗ್ರನ್ಸ್‌ ಸೇರಿದಂತೆ ಪಿಯೂಷ್‌ಗೆ ಸೇರಿದ ಕಾರ್ಖಾನೆ, ಕಚೇರಿ, ಪೆಟ್ರೋಲ್‌ ಪಂಪ್‌ ಸೇರಿದಂತೆ 11 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ(Raid) ನಡೆಸಿದ್ದರು. ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾದ ಕಾರಣ ಸ್ಟೇಟ್‌ ಬ್ಯಾಂಕಿನಿಂದ 19 ನೋಟು ಎಣಿಕೆ ಯಂತ್ರಗಳನ್ನು ತೆಗೆದುಕೊಳ್ಳಲಾಗಿತ್ತು. 

Follow Us:
Download App:
  • android
  • ios