Asianet Suvarna News Asianet Suvarna News

ಇದು ಗಾಳಿ ಅಲ್ಲ ಬಿರುಗಾಳಿ: ಪವನ್ ಕಲ್ಯಾಣ್ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಇಂದು ನವದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಸಭೆ ನಡೆದಿದ್ದು ಎಲ್ಲರಿಗೂ ಗೊತ್ತೆ ಇದೆ ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಸಾಧನೆ ಮಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. 

It is not a pawan its storm PM Modi celebrates and prises JSP chief Tollywood actor Pawan Kalyan s achievement in Andhra Pradesh Election akb
Author
First Published Jun 7, 2024, 8:46 PM IST | Last Updated Jun 7, 2024, 8:46 PM IST

ನವದೆಹಲಿ: ಇಂದು ನವದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಸಭೆ ನಡೆದಿದ್ದು ಎಲ್ಲರಿಗೂ ಗೊತ್ತೆ ಇದೆ ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಸಾಧನೆ ಮಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಆಂಧ್ರದ ಲೋಕಸಭಾ ಚುನಾವಣೆಯಲ್ಲಿ 2 ಸ್ಥಾನ ಗೆದ್ದಿದೆ. ಇದರ ಜೊತೆಗೆ ಆಂಧ್ರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಎಲ್ಲಾ 21 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿ ಆಂಧ್ರ ಪ್ರದೇಶ ಚುನಾವಣೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಪವನ್ ಕಲ್ಯಾಣ ಅವರ ಈ ಪವರ್‌ಫುಲ್ ಕಮ್ ಬ್ಯಾಕ್‌ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಎ ಪವನ್ ನಹೀ ಹೈ ಆಂಧಿ ಹೈ ಎಂದು ಹೇಳಿದ್ದಾರೆ. ಅಂದರೆ ಪವನ ಎಂದರೆ ಗಾಳಿ, ಇದು ಗಾಳಿ ಅಲ್ಲ ಬಿರುಗಾಳಿ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣ ಸಖತ್ ವೈರಲ್ ಆಗ್ತಿದೆ. 

ಇಂದು ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಸದೀಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಿಜೆಪಿಯ ಬಹುತೇಕ ಚುನಾಯಿತ ನಾಯಕರು ಸೇರಿದಂತೆ,  ಎನ್‌ಡಿಎ ಸರ್ಕಾರದ ಕಿಂಗ್ ಮೇಕರ್‌ಗಳೆಂದೇ ಬಣ್ಣಿಸಲಾಗುತ್ತಿರುವ ಆಂಧ್ರ ಪ್ರದೇಶದ ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ , ಕಂಗನಾ ರಣಾವತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.  

ಅಬ್ಬಬ್ಬಾ..ಜನಸೇನಾ ಸಂಸ್ಥಾಪಕ, ಪವರ್ ಸ್ಟಾರ್ ಪವನ್ ಕಲ್ಯಾಣ್ ನೆಟ್‌ವರ್ತ್‌ ಇಷ್ಟೊಂದಾ?

ಆಂಧ್ರದಲ್ಲಿ ಕೇವಲ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸ್ಪರ್ಧಿಸಿದ್ದು ಈ ಎರಡೂ ಕ್ಷೇತ್ರಗಳಲ್ಲೂ ಜಯ ಸಾಧಿಸಿದೆ. ಇದರ ಜೊತೆಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ 2ನೇ ಅತೀದೊಡ್ಡ ಪಕ್ಷವೆನಿಸಿದೆ. ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ ಸ್ಪರ್ಧೆ ಮಾಡಿತ್ತು. 

ಇದೇ ವೇಳೆ ಪ್ರಧಾನಿ ದೇವರ ನಾಡು ಕೇರಳದ ತ್ರಿಶೂರ್‌ನಲ್ಲಿ ಮೊದಲ ಬಾರಿ ಕಮಲ ಅರಳಿಸಿದ ಕೀರ್ತಿಗೆ ಭಾಜನರಾಗಿರುವ ಮಲೆಯಾಳಂ ನಟ ಸುರೇಶ್ ಗೋಪಿಯವರಿಗೆ ಕೂಡ ಅಭಿನಂದನೆ ಸಲ್ಲಿಸಿ ಅವರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಎನ್‌ಡಿಎ ನಾಯಕನಾಗಿ ಅವಿರೋಧವಾಗಿ ನಾನು ಆಯ್ಕೆಯಾಗಿರುವುದು ನನ್ನ ಅದೃಷ್ಟ ಮತ್ತು ಸರ್ಕಾರದ ಎಲ್ಲಾ ನಿರ್ಧಾರಗಳಲ್ಲಿ ಒಮ್ಮತವನ್ನು ತಲುಪುವುದು ಅವರ ಸಾಮೂಹಿಕ ಗುರಿಯಾಗಬೇಕು ಎಂದು ಮೋದಿ ಹೇಳಿದರು.

ಪವನ್‌ ಕಲ್ಯಾಣ್‌ ಜನಸೇನಾ ಯಶಸ್ಸಿನಿಂದ ಉಪೇಂದ್ರ ಪ್ರಜಾಕೀಯ ಕಲಿಯಬೇಕಾಗಿರೋದೇನು?

ನೀವೆಲ್ಲರೂ ನನಗೆ ಹೊಸ ಜವಾಬ್ದಾರಿ ನೀಡಿದ್ದೀರಾ? ನಾನು ನಿಮಗೆ ಅಭಾರಿಯಾಗಿದ್ದೇನೆ. 2019ರಲ್ಲಿ ನಾನು ಈ ಸದನದಲ್ಲಿ ಮಾನಾಡಿದಾಗ ನೀವೆಲ್ಲರೂ ನನ್ನನ್ನು ನಾಯಕನೆಂದು ಆಯ್ಕೆ ಮಾಡಿದಿರಿ, ಇದಾದ ನಂತರ ನಾನು ಒತ್ತಿ ಹೇಳಿದ ಒಂದು ವಿಚಾರ ಎಂದರೆ ಅದು ನಂಬಿಕೆ. ಇವತ್ತು ನೀವು ನನಗೆ ನೀವು ಈ ಪಾತ್ರವನ್ನು ನೀಡುತ್ತಿದ್ದೀರಿ? ನಮ್ಮ ನಡುವಿನ ನಂಬಿಕೆಯ ಸೇತುವೆ ಮತ್ತಷ್ಟು ಗಟ್ಟಿಯಾಗಿದೆ ಎಂಬುದು ಇದರರ್ಥವಾಗಿದೆ. ನಂಬಿಕೆಯ ಬಲವಾದ ತಳಹದಿಯ ಮೇಲೆ ಇರುತ್ತದೆ ಹಾಗೂ ಇದು ದೊಡ್ಡ ಆಸ್ತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಈ ಸಭೆಯಲ್ಲಿ ನಿತೀಶ್ ನಾಯ್ಡು ಮಾತ್ರವಲ್ಲದೇ ಕಾಂಗ್ರೆಸ್ ನ್ಯಾಷನಲಿಷ್ಟ್ ಪಾರ್ಟಿಯ(NCP) ಅಜಿತ್ ಪವಾರ್, ಲೋಕಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಜನಸೇನಾ ಪಕ್ಷದ ಪವನ್ ಕಲ್ಯಾಣ್ ಸೇರಿದಂತೆ ಅನೇಕರಿದ್ದರು. ಕೆಲ ವರದಿಗಳ ಪ್ರಕಾರ ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ನರೇಂದ್ರ ಮೋದಿಯವರು ಜೂನ್ 9 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 

Latest Videos
Follow Us:
Download App:
  • android
  • ios