ಸನಾತನ ಧರ್ಮವನ್ನು ವಿರೋಧಿಸುವ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಮೊದಲಾದವರು ಕುಂಭಮೇಳದಲ್ಲಿ ಇನ್ನಷ್ಟು ದೊಡ್ಡ ದುರಂತ ಬಯಸಿದ್ದರು. ಸಾವಿನ ವಿಷಯದಲ್ಲಿ ವಿಪಕ್ಷ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 

ನವದೆಹಲಿ(ಫೆ.05): ಜ.29ರಂದು ಮೌನಿ ಅಮಾವಾಸ್ಯೆ ದಿನ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಭಕ್ತರು ಸಾವನ್ನಪ್ಪಿದ ಪ್ರಕರಣ ಇದೀಗ ಬಿಜೆಪಿ -ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕಾಲ್ತುಳಿತಕ್ಕೆ ಬಲಿಯಾದವರ ವಿಷಯದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ಸರ್ಕಾರ ಹೇಳಿದಂತೆ ಘಟನೆಯಲ್ಲಿ 30 ಜನರು ಸತ್ತಿಲ್ಲ. 300-2000 ಜನರು ಸಾವನ್ನಪ್ಪಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಆ

ದರೆ ಇದಕ್ಕೆ ತಿರುಗೇಟು ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಸನಾತನ ಧರ್ಮವನ್ನು ವಿರೋಧಿಸುವ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಮೊದಲಾದವರು ಕುಂಭಮೇಳದಲ್ಲಿ ಇನ್ನಷ್ಟು ದೊಡ್ಡ ದುರಂತ ಬಯಸಿದ್ದರು. ಸಾವಿನ ವಿಷಯದಲ್ಲಿ ವಿಪಕ್ಷ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್ ರಾಜ: ಯುಪಿ ಸಿಎಂ ಯೋಗಿ ಸಾಥ್

ಜೆಸಿಬಿಯಲ್ಲಿ ಶವ ತೆರವು: 

ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, 'ಸರ್ಕಾರ ಡಿಜಿಟಲ್ ಕುಂಭ ಮೇಳ ನಡೆ ಸುವುದಾಗಿ ಹೇಳಿತ್ತು. ಆದರೆ ಸತ್ತವರ ಡಿಜಿಟ್ಸ್ (ಸಂಖ್ಯೆ) ಕೂಡ ಮುಚ್ಚಿಡುತ್ತಿದೆ. ಕಾಲ್ತುಳಿತಕ್ಕೆ ಬಲಿಯಾದವರ ಶವಗಳನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಸರ್ಕಾರ ತೆರವು ಮಾಡಿದೆ. ದೇವರ ಆಶೀರ್ವಾದ ಪಡೆಯಲು ಬಂದವರು ತಮ್ಮ ಬಂಧುಮಿತ್ರರು ಜೀವಕಳೆದುಕೊಂಡಿದ್ದನ್ನು ನೋಡಿಕೊಂಡು ತೆರಳುವಂತಾಯಿತು' ಎಂದು ಕಿಡಿಕಾರಿದರು. 

ಜೊತೆಗೆ, 'ಶವಾಗಾರದಲ್ಲಿ ಸಾಲು ಸಾಲು ಭಕ್ತರ ಶವ ಮಲಗಿಸಿದ್ದಾಗ ಸರ್ಕಾರ ಆಗಸದಿಂದ ಗುಲಾಬಿ ಹೂವಿನ ಮಳೆಗರೆಯುತ್ತಿತ್ತು. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದಾಗ ಸರ್ಕಾರ ಎಲ್ಲವನ್ನೂ ಮುಚ್ಚಿಹಾಕುವ ಯತ್ನ ಮಾಡಿತು. ಇಡೀ ಘಟನೆ ಕುರಿತು ಚರ್ಚಿಸಲು ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು. ಕುಂಭಮೇಳ ನಿರ್ವಹಣೆ ಹೊಣೆಯನ್ನು ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪಡೆಗೆ ವಹಿಸಬೇಕು' ಎಂದು ಆಗ್ರಹಿಸಿದರು.

ಸಾವಿರಾರು ಸಾವು: 

ಇನ್ನೊಂದೆಡೆ ರಾಜ್ಯಸಭೆಯಲ್ಲಿ ಮಾತನಾಡಿದ ಶಿವಸೇನೆ (ಉದ್ದವ್ ಬಣ) ಸದಸ್ಯ ಸಂಜಯ್ ರಾವುತ್, '4-5 ದಿನಗಳ ಹಿಂದೆ ಕಾಲ್ತುಳಿತ ಸಂಭವಿಸಿದಾಗ ಅದು ವದಂತಿ ಎನ್ನಲಾಗಿತ್ತು. ಇದರಲ್ಲಿ 30 ಜನರು ಸತ್ತರು. ಈ ಅಂಕಿ ಅಂಶ ನಿಜವೇ? ಅದನ್ನು ಮರೆಮಾಡಬೇಡಿ. ಒಬ್ಬ ವ್ಯಕ್ತಿ ಸತ್ತರೂ ನಾವು ಜವಾಬ್ದಾರರು. ನಾವು ನಮ್ಮ ಕಣ್ಣಾರೆ ನೋಡಿದ ಅಂಕಿ ಅಂಶಗಳ ಪ್ರಕಾರ 2 ಸಾವಿರ ಜನರು ಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಮಹಾಕುಂಭದ ನೀರು ಅತಿ ಕಲುಷಿತ, ಕಾಲ್ತುಳಿತದಲ್ಲಿ ಸತ್ತವರ ಮೃತದೇಹವನ್ನ ನದಿಯಲ್ಲೇ ಎಸೆಯಲಾಗಿದೆ: ಜಯಾ ಬಚ್ಛನ್‌

ಮತ್ತೊಂದೆಡೆ ಲೋಕಸಭೆಯಲ್ಲಿ ಮಾತನಾಡಿದ ಪಕ್ಷೇತರ ಸದಸ್ಯ ಪಪ್ಪು ಯಾದವ್, 'ಇತ್ತೀಚಿನ ಕುಂಭಮೇಳ ಕಾಲ್ತುಳಿತದಲ್ಲಿ 300-600 ಶವಗಳನ್ನು ಹೊರತೆಗೆಯಲಾಗಿತ್ತು. ಹೀಗೆ ಸತ್ತವರಿಗೆ ಹಿಂದೂ ಸಂಸ್ಕೃತಿಯ ಅನ್ವಯ ಅಂತ್ಯ ಸಂಸ್ಕಾರ ಕೂಡಾ ನಡೆಸಿಲ್ಲ. ಕುಂಭಮೇಳದಲ್ಲಿ ಮೃತಪಟ್ಟರೆ ಮೋಕ್ಷ ದೊರೆಯುತ್ತದೆ ಎಂದು ಬಾಬಾ ಒಬ್ಬರು ಹೇಳಿದ್ದರು. ಹೀಗಾಗಿ ಅಂಥ ಸಲಹೆ ನೀಡುವ ಬಾಬಾಗಳು ಮತ್ತು ದುಡ್ಡು ಮಾಡಿ ರುವ ರಾಜಕಾರಣಿಗಳು, ಹಣವಂತರು ಕುಂಭದಲ್ಲಿ ಸತ್ತು ಮೋಕ್ಷ ಪಡೆಯಬೇಕು ಎಂಬುದು ನನ್ನದು ಬಯಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2000 ಜನರ ಸಾವು

ನಮ್ಮ ಕಣ್ಣಾರೆ ನೋಡಿದ ಅಂಕಿ-ಅಂಶ ಪ್ರಕಾರ ಕಾಲ್ತುಳಿತದಲ್ಲಿ 2 ಸಾವಿರ ಜನ ಸಾವಿಗೀಡಾಗಿದ್ದಾರೆ.
• ಸಂಜಯ್ ರಾವುತ್ ಶಿವಸೇನೆ ನಾಯಕ

600 ಶವ ಹೊರಕ್ಕೆ

ಕುಂಭಮೇಳ ಕಾಲ್ತುಳಿತ ವೇಳೆ ಸುಮಾರು 300 ರಿಂದ 600 ಶವಗಳನ್ನು ಹೊರತೆಗೆಯಲಾಗಿತ್ತು.
• ಪಪ್ಪು ಯಾದವ್ ಪಕ್ಷೇತರ ಸಂಸದ

ಟ್ರ್ಯಾಕ್ಟರಲ್ಲಿ ಶವ ಸಾಗಣೆ

ಕಾಲ್ತುಳಿತಕ್ಕೆ ಬಲಿಯಾದ ವರ ಶವಗಳನ್ನು ಜೆಸಿಬಿ ಮತ್ತು ಟ್ರ್ಯಾಕ್ಟ‌ರ್ ಬಳಸಿ ಸಾಗಣೆ ಮಾಡಲಾಗಿದೆ.
• ಅಖಿಲೇಶ್ ಯಾದವ್ ಎಸ್ಪಿ ನಾಯಕ