Asianet Suvarna News Asianet Suvarna News

ಆಂಧ್ರ ಔಷಧ ಕಂಪನಿಯಲ್ಲಿ 400 ಕೋಟಿ ಕಪ್ಪು ಹಣ ಪತ್ತೆ!

ಆಂಧ್ರ ಔಷಧ ಕಂಪನಿಯಲ್ಲಿ 400 ಕೋಟಿ ಕಪ್ಪು ಹಣ ಪತ್ತೆ| 1.66 ಕೋಟಿ ರು. ನಗದು ವಶ| ಔಷ​ಧೀಯ ಪದಾ​ರ್ಥ​ಗಳು ಮತ್ತು ಸೂತ್ರ​ಗಳ ರಚ​ನೆ​ಯಲ್ಲಿ ಮಧ್ಯ​ವ​ರ್ತಿ​ಯಾಗಿ ಈ ಸಂಸ್ಥೆ ಕಾರ್ಯ​ನಿ​ರ್ವ​ಹಿ​ಸು​ತ್ತಿತ್ತು

IT dept detects Rs 400 cr black income after raids on Hyderaba based pharma group pod
Author
Bangalore, First Published Mar 2, 2021, 8:04 AM IST

ನವ​ದೆ​ಹ​ಲಿ(ಮಾ.02): ತಮಿ​ಳು​ನಾಡಿನ ಉದ್ಯ​ಮಿ​ಯೊ​ಬ್ಬ​ರಿಂದ 220 ಕೋಟಿ ರು. ಮೊತ್ತದ ಕಪ್ಪು​ಹಣ ವಶ​ಪ​ಡಿ​ಸಿ​ಕೊಂಡ ಬೆನ್ನಲ್ಲೇ, ತೆರಿ​ಗೆ ಇಲಾಖೆ ಅಧಿ​ಕಾ​ರಿ​ಗ​ಳು ಹೈದ​ರಾ​ಬಾದ್‌ ಮೂಲದ ಪ್ರಮುಖ ಔಷಧ ತಯಾ​ರಿಕಾ ಸಮೂ​ಹ​ವೊಂದರ ಮೇಲೆ ದಾಳಿ ನಡೆ​ಸಿ 400 ಕೋಟಿ ರು. ಕಾಳ​ಧ​ನ​ ಪತ್ತೆಹಚ್ಚಿದ್ದಾರೆ. ಫೆ.24ರಂದು 5 ರಾಜ್ಯ​ಗಳ 24 ಸ್ಥಳ​ಗಳ ಮೇಲೆ ದಾಳಿಗಳನ್ನು ಕೈಗೊ​ಳ್ಳ​ಲಾ​ಗಿತ್ತು ಎಂದು ಕೇಂದ್ರೀಯ ನೇರ ತೆರಿ​ಗೆ ಮಂಡಳಿ (ಸಿ​ಬಿ​ಡಿ​ಟಿ) ಸೋಮ​ವಾರ ತಿಳಿ​ಸಿ​ದೆ.

ಔಷ​ಧೀಯ ಪದಾ​ರ್ಥ​ಗಳು ಮತ್ತು ಸೂತ್ರ​ಗಳ ರಚ​ನೆ​ಯಲ್ಲಿ ಮಧ್ಯ​ವ​ರ್ತಿ​ಯಾಗಿ ಈ ಸಂಸ್ಥೆ ಕಾರ್ಯ​ನಿ​ರ್ವ​ಹಿ​ಸು​ತ್ತಿತ್ತು. ದಾಳಿಯ ವೇಳೆ ದಾಖ​ಲೆ​ಗಳು ಇಲ್ಲ​ದೇ ಇಟ್ಟಿದ್ದ 400 ಕೋಟಿ ರು.ಗಿಂತ ಹೆಚ್ಚು ಆದಾಯ ಪತ್ತೆ ಆಗಿ​ದೆ. ತೆರಿಗೆ ಪಾವ​ತಿ​ಸಿದ ಹಣ​ಕ್ಕಿಂತ 350 ಕೋಟಿ ಹೆಚ್ಚು​ವರಿ ಆದಾ​ಯ​ವನ್ನು ಹೊಂದಿ​ರು​ವುದು ಸಾಬೀ​ತಾ​ಗಿದೆ. ದಾಳಿಯ ವೇಳೆ 1.66 ಕೋಟಿ ರು. ನಗ​ದನ್ನು ವಶ​ಪ​ಡಿ​ಸಿ​ಕೊ​ಳ್ಳ​ಲಾ​ಗಿದೆ. ಅಕ್ರಮ ಹಣ​ದಲ್ಲಿ ಭೂಮಿ ಖರೀದಿ ಮಾಡಿ​ರು​ವು​ದಕ್ಕೆ ಸಾಕ್ಷ್ಯಾ​ಧಾ​ರ​ಗಳು ಲಭ್ಯ​ವಾ​ಗಿವೆ ಎಂದು ಅಧಿ​ಕಾ​ರಿ​ಗಳು ತಿಳಿಸಿದ್ದಾ​ರೆ. ಈ ಕಂಪನಿಯ ಬಹುತೇಕ ಉತ್ಪನ್ನಗಳು ಅಮೆರಿಕ ಮತ್ತು ಯುರೋಪಿಯನ್‌ ದೇಶಗಳಿಗೆ ರಫ್ತಾಗುತ್ತವೆ ಎಂದು ಸಿಬಿಡಿಟಿ ತಿಳಿಸಿದೆ.

ದಾಳಿ ಬಳಿಕ 350 ಕೋಟಿ ರು. ಕಪ್ಪುಹಣ ಇರುವುದನ್ನು ಕಂಪನಿ ಒಪ್ಪಿಕೊಂಡಿದೆ. ದಾಳಿ ವೇಳೆ ಪೆನ್‌ಡ್ರೈವ್‌, ಸಾಕಷ್ಟುರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸಿಬಿಡಿಟಿ ತಿಳಿಸಿದೆ.

Follow Us:
Download App:
  • android
  • ios