ನವದೆಹಲಿ(ಏ.27): ಕೊರೋನಾ ವೈರಸ್ ಎನ್ನುವ ಹೆಮ್ಮಾರಿ ಇಡೀ ಆರ್ಥಿಕ ವ್ಯವಸ್ಥೆಯನ್ನೇ ಹಳಿತಪ್ಪಿಸಿದೆ. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಶ್ರೀಮಂತರಿಗೆ ಶೇ.40% ಸೂಪರ್ ರಿಚ್ ಕೊರೋನಾ ಸೆಸ್ ವಿಧಿಸಬೇಕು ಎಂದು ಉನ್ನತ ತೆರಿಗೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. 

50 ಜನರಿರುವ ರೆವಿನ್ಯೂ ಸೇವೆಗಳ ಅಧಿಕಾರಿಗಳನ್ನೊಳಗೊಂಡ ತಂಡ ಜಂಟಿಯಾಗಿ ಈ ವರದಿಯನ್ನು ಸಿದ್ಧಪಡಿಸಿದೆ. ವಿತ್ತೀಯ ಆಯ್ಕೆಗಳು ಮತ್ತು ಕೋವಿಡ್ ವ್ಯಾಧಿಗೆ ಪ್ರತಿಕ್ರಿಯೆ ಎಂಬ ವರದಿ ಇದಾಗಿದ್ದು ಶ್ರೀಮಂತರಿಂದ ಹಣ ವಸೂಲು ಮಾಡಲು ಕೇಂದ್ರಕ್ಕೆ ಸಲಹೆ ನೀಡಿದೆ.

ಇನ್ನು ಸಲಹೆಯನ್ನು ನೋಡಿ ಕೇಂದ್ರ ಸರ್ಕಾರ ಕಿಡಿ ಕಾರಿದೆ. ಅಧಿಕಾರಿಗಳ ಈ ವರ್ತನೆ ತಪ್ಪುಗ್ರಹಿಕೆಯಿಂದ ಕೂಡಿದೆ. ಇದು ಅಧಿಕಾರಿಗಳ ಅಶಿಸ್ತಿನ ವರ್ತನೆಯಾಗಿದ್ದು, ಸೇವಾ ನಿಯಮದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಆಕ್ರೋಶ ವ್ಯಕ್ತಪಡಿಸಿದೆ. 

ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಈಗಾಗಲೇ ದೇಶಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಮೊದಲ ಹಂತದಲ್ಲಿ ಮಾರ್ಚ್ 25ರಿಂದ 21 ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿತ್ತು. ಇದೀಗ ಏಪ್ರಿಲ್ 14ರಿಂದ ಮೇ 03ರವರೆಗೆ ಎರಡನೇ ಹಂತದ ಲಾಕ್‌ಡೌನ್ ಹೇರಲಾಗಿದೆ. ಕೊರೋನಾದಿಂದ ಪಾತಾಳಕ್ಕೆ ತಲುಪಿರುವ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಅಧಿಕಾರಿಗಳ ತಂಡ ಶಿಫಾರಸು ಮಾಡಿತ್ತು.