Chandrayaan-3: ಜುಲೈ 13ಕ್ಕೆ ಭಾರತದ ಚಂದ್ರಯಾನ!

ಭಾರತದ ಬಹುನಿರೀಕ್ಷಿತ ಚಂದ್ರಯಾನ್‌-3 ಯೋಜನೆಗೆ ಇಸ್ರೋ ದಿನಾಂಕ ಪ್ರಕಟಿಸಿದೆ. ಜುಲೈ 13 ರಂದು ಭಾರತದ ಚಂದ್ರಯಾನ-3 ನಭಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.

Isro set date dor Launch Of India Moon Mission Chandrayaan 3 On July 13 san

ಬೆಂಗಳೂರು (ಜೂ.28): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಬಹು ನಿರೀಕ್ಷಿತ ಚಂದ್ರಯಾನ-3 ರ ಉಡಾವಣೆ ದಿನಾಂಕವನ್ನು ದೃಢಪಡಿಸಿದೆ. ರಾಕೆಟ್ ಅನ್ನು ಜುಲೈ 13 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಉಡಾವಣೆ ಮಾಡಲಾಗುವುದು ಎಂದು ಅಧಿಕಾರಿಗಳು ಇಂದು ಘೋಷಿಸಿದರು. 2019 ರಲ್ಲಿ ಭಾರತದ ಚಂದ್ರಯಾನ-2 ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲವಾದರೂ, ನಿರೀಕ್ಷೆಯಂತೂ ಹುಸು ಮಾಡಿರಲಿಲ್ಲ. ಆದರೆ, ಚಂದ್ರಯಾನ-3 ಬಾಹ್ಯಾಕಾಶ ಪರಿಶೋಧನೆಯಲ್ಲಿ ರಾಷ್ಟ್ರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಚಂದ್ರಯಾನ-2 ಮಿಷನ್‌ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶ ಪಡೆದಿತ್ತಾದರೂ, ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡಿಂಗ್‌ ಮಾಡುವ ಸಮಯದಲ್ಲಿ ಸಮಸ್ಯೆ ಎದುರಿಸಿರು. ಇದು ಇಸ್ರೋದ ನಿರೀಕ್ಷೆಯಂತೆ ರೋವರ್‌ ಚಂದ್ರನ ನೆಲದಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ. ಮುಂಬರುವ ಮಿಷನ್‌ನ ಯಶಸ್ಸಿನ ಸಾಮರ್ಥ್ಯದ ಬಗ್ಗೆ ಇಸ್ರೋ ಅಧಿಕಾರಿಗಳು ಆಶಾವಾದಿಯಾಗಿದ್ದಾರೆ. ಚಂದ್ರಯಾನ-3 ಮಿಷನ್ ಚಂದ್ರನ ಬಗ್ಗೆ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಆಳವಾಗಿಸಲು ನಿರೀಕ್ಷಿಸಲಾಗಿದೆ, ಅದರ ಮುಖ್ಯ ಉದ್ದೇಶವು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಮತ್ತು ರೋಬೋಟಿಕ್ ರೋವರ್ ಅನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದಾಗಿದೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (Satish Dhawan Space Center in Sriharikota) ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ-ಲಿಫ್ಟ್ ಲಾಂಚ್ ವೆಹಿಕಲ್ (GSLV Mark 3 heavy-lift launch vehicle) ಬಳಸಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಈ ಮಿಷನ್‌ಗೆ ₹ 615 ಕೋಟಿ ಬಜೆಟ್‌ ನಿಗದಿಪಡಿಸಲಾಗಿದೆ. ಅಪಾಯಗಳನ್ನು ತಗ್ಗಿಸಲು ಮತ್ತು ಯಶಸ್ವಿ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಚಂದ್ರಯಾನ-3 ಕಠಿಣ ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಗಳಿಗೆ ಒಳಗಾಗಿದೆ. ಹಿಂದಿನ ಮಿಷನ್‌ನಿಂದ ಕಲಿತ ಪಾಠಗಳ ಆಧಾರದ ಮೇಲೆ ಚಂದ್ರನ ಪೇಲೋಡ್ ಕಾನ್ಫಿಗರೇಶನ್ ಸೇರಿದಂತೆ ಮಿಷನ್ ವಿನ್ಯಾಸವನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ, ಮಿಷನ್‌ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಚಂದ್ರಯಾನ-3 ಮಿಷನ್ ಚಂದ್ರಯಾನ-2 ರಂತೆಯೇ ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿರುತ್ತದೆ ಆದರೆ ಆರ್ಬಿಟರ್ ಅನ್ನು ಒಯ್ಯುವುದಿಲ್ಲ. ಸಂವಹನ ರಿಲೇ ಉಪಗ್ರಹದಂತೆ ವರ್ತಿಸಲು ವಿನ್ಯಾಸಗೊಳಿಸಲಾದ ಪ್ರೊಪಲ್ಷನ್ ಮಾಡ್ಯೂಲ್, ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯಲ್ಲಿರುವವರೆಗೆ ಲ್ಯಾಂಡರ್ ಮತ್ತು ರೋವರ್ ಅನ್ನು ಒಯ್ಯುತ್ತದೆ.

ಮಿಷನ್‌ಗೆ ಒಂದು ಪ್ರಮುಖ ಸೇರ್ಪಡೆಯೆಂದರೆ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಅನ್ನು ಸೇರಿಸುವುದು. ಈ ಉಪಕರಣವು ಚಂದ್ರನ ಕಕ್ಷೆಯಿಂದ ಭೂಮಿಯ ಧ್ರುವೀಯ ಅಳತೆಗಳನ್ನು ಅಧ್ಯಯನ ಮಾಡುತ್ತದೆ, ವಿಜ್ಞಾನಿಗಳಿಗೆ ಭೂಮಿಯ ಬಗ್ಗೆ ಅಮೂಲ್ಯವಾದ ಡೇಟಾವನ್ನು ನೀಡುತ್ತದೆ.

ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿಕೋಟ!

ಚಂದ್ರಯಾನ-3 ಮಿಷನ್‌ಗಾಗಿ ಇಸ್ರೋ ಮೂರು ಪ್ರಾಥಮಿಕ ಉದ್ದೇಶಗಳನ್ನು ತಿಳಿಸಿದೆ. ಚಂದ್ರನ ಮೇಲೆ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಸಾಧಿಸುವುದು,  ಚಂದ್ರನ ಮೇಲ್ಮೈಯಲ್ಲಿ ರೋವರ್‌ನ ಅಡ್ಡಾದಿಡ್ಡಿ ಸಾಮರ್ಥ್ಯಗಳನ್ನು ಪ್ರದರ್ಶನ ಮಾಡುವುದು ಮತ್ತು ಚಂದ್ರನ ನೆಲದಲ್ಲಿ ವೈಜ್ಞಾನಿಕ ವೀಕ್ಷಣೆಗಳನ್ನು ನಡೆಸುವುದು. ಚಂದ್ರನ ಸಂಯೋಜನೆಯ ತಿಳುವಳಿಕೆಯನ್ನು ಸುಧಾರಿಸಲು ಚಂದ್ರನ ಮೇಲ್ಮೈಯಲ್ಲಿ ಲಭ್ಯವಿರುವ ರಾಸಾಯನಿಕ ಮತ್ತು ನೈಸರ್ಗಿಕ ಅಂಶಗಳು, ಮಣ್ಣು ಮತ್ತು ನೀರನ್ನು ಅನ್ವೇಷಿಸಲು ಮಿಷನ್ ಗುರಿಯನ್ನು ಹೊಂದಿದೆ. ಈ ಮಿಷನ್ ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ಮಹತ್ವದ್ದಾಗಿದೆ. ಇದು ಹಿಂದಿನ ಕಾರ್ಯಾಚರಣೆಗಳಿಂದ ಪಡೆದ ಜ್ಞಾನವನ್ನು ಇದು ಒಳಗೊಂಡಿರುತ್ತದೆ ಮತ್ತು ಭವಿಷ್ಯದ ಚಂದ್ರ ಮತ್ತು ಅಂತರಗ್ರಹ ಪರಿಶೋಧನೆಗಳಿಗೆ ಅಗತ್ಯವಿರುವ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ.

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

Latest Videos
Follow Us:
Download App:
  • android
  • ios