Asianet Suvarna News Asianet Suvarna News

ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

ದೇಶದ ಗಗನಯಾನಿಗಳಿಗೆ ಚಳ್ಳಕೆರೆಯಲ್ಲಿ ತರಬೇತಿ| ಚಿತ್ರದುರ್ಗ ಬಳಿಯ ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ| 2600 ಕೋಟಿ ರು. ಹೂಡಿಕೆ| 3 ವರ್ಷದಲ್ಲಿ ಕಾರ್ಯಾರಂಭ

ISRO astronaut training hub to be established in Challakere at Chitradurga
Author
Bangalore, First Published Jan 8, 2020, 10:07 AM IST
  • Facebook
  • Twitter
  • Whatsapp

ನವದೆಹಲಿ[ಜ.08]: ಇನ್ನೆರಡು ವರ್ಷಗಳಲ್ಲಿ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವ ನಿಟ್ಟಿನಲ್ಲಿ ಭರದ ಸಿದ್ಧತೆಯಲ್ಲಿ ತೊಡಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗಾಗಿ ಗಗನಯಾತ್ರಿಗಳನ್ನು ಸಜ್ಜುಗೊಳಿಸಲು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಗಗನಯಾತ್ರಿಗಳ ತರಬೇತಿ ಕೇಂದ್ರವನ್ನು ತೆರೆಯಲು ಮುಂದಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್), ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಇಸ್ರೋ ಕೇಂದ್ರಗಳನ್ನು ಈಗಾಗಲೇ ಹೊಂದಿರುವ ಚಳ್ಳಕೆರೆಯ ‘ವಿಜ್ಞಾನ ನಗರಿ’ಯಲ್ಲೇ ಉದ್ದೇಶಿತ ಕೇಂದ್ರ ನಿರ್ಮಾಣವಾಗಲಿದೆ. ಇದಕ್ಕಾಗಿ ಬರೋಬ್ಬರಿ 2600 ಕೋಟಿ ರು.ಗಳನ್ನು ವಿನಿಯೋಗಿಸಲು ಇಸ್ರೋ ನಿರ್ಧರಿಸಿದೆ.

ಚಂದ್ರಯಾನ-3ಗೆ ಅಧಿಕೃತ ಒಪ್ಪಿಗೆ: 2021ರಲ್ಲಿ ಮತ್ತೆ ಚಂದ್ರನ ಅಪ್ಪುಗೆ!

ಇಸ್ರೋದ ಮೊದಲ ಮಾನವಸಹಿತ ಬಾಹ್ಯಾಕಾಶಯಾನ ಮೂಲಸೌಕರ್ಯ ಕೇಂದ್ರ ಇದಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಣೆ ಆರಂಭಿಸುವ ನಿರೀಕ್ಷೆ ಇದೆ. ಮಾನವಸಹಿತ ಯಾನಗಳನ್ನು ಕೈಗೊಂಡಾಗ ಗಗನಯಾತ್ರಿಗಳಿಗೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ಇಲ್ಲೇ ನೀಡುವುದು ಇಸ್ರೋ ಉದ್ದೇಶವಾಗಿದೆ. ಸದ್ಯ ಬೆಂಗಳೂರಿನ ಯು.ಆರ್‌. ರಾವ್‌ ಉಪಗ್ರಹ ಕೇಂದ್ರ ಹಾಗೂ ತಿರುವನಂತಪುರದಲ್ಲಿರುವ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದಂತಹ ಸ್ಥಳಗಳಲ್ಲಿ ಮಾನವಸಹಿತ ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದ ತರಬೇತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

ಚಳ್ಳಕೆರೆಯ ಕೇಂದ್ರ ಆರಂಭಗೊಂಡರೆ ಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭಗೊಂಡರೆ ಬಾಹ್ಯಾಕಾಶಯಾನಿಗಳ ತರಬೇತಿಗಾಗಿ ಬೇರೆ ಕಡೆಗೆ ಇಸ್ರೋ ಹೋಗುವ ಪ್ರಮೇಯವೇ ಇರುವುದಿಲ್ಲ ಎಂದು ಹೇಳಲಾಗಿದೆ.

2022ಕ್ಕೆ ಇಸ್ರೋ ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಇದಕ್ಕಾಗಿ ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಿ, ತರಬೇತಿಗೆಂದು ರಷ್ಯಾಕ್ಕೆ ಕಳುಹಿಸಿದೆ.

ಗಗನಯಾತ್ರಿಗಳ ತರಬೇತಿಗೆಂದು ಅಮೆರಿಕದ ರಾಷ್ಟ್ರೀಯ ವೈಮಾನಿಕ ಹಾಗೂ ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆ ಬೃಹತ್‌ ಪ್ರಮಾಣದ ಗಗನಯಾತ್ರಿಗಳ ತರಬೇತಿ ಕೇಂದ್ರವನ್ನು ಹೊಂದಿದೆ. ಇದೀಗ ಇಸ್ರೋ ಕೂಡ ಅಂತಹ ದೇಶಗಳ ಸಾಲಿಗೆ ಸೇರುತ್ತಿದೆ.

ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ!

- 2022ಕ್ಕೆ ಮೊದಲ ಮಾನವಸಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿರುವ ಇಸ್ರೋ

- ಇದಕ್ಕಾಗಿ ಈಗಾಗಲೇ 4 ಗಗನಯಾತ್ರಿಗಳ ಆಯ್ಕೆ, ಇವರಿಗೆ ರಷ್ಯಾದಲ್ಲಿ ತರಬೇತಿ

- ಮುಂದಿನ ಯೋಜನೆಗಳಿಗಾಗಿ ಸ್ವದೇಶದಲ್ಲಿಯೇ ತರಬೇತಿ ಕೇಂದ್ರ ಸ್ಥಾಪನೆ

- ಚಳ್ಳಕೆರೆಯಲ್ಲಿ ಸ್ಥಾಪನೆಯಾಗುತ್ತಿರುವುದು ಇಸ್ರೋದ ಮೊದಲ ತರಬೇತಿ ಕೇಂದ್ರ

- ಈಗಾಗಲೇ ಡಿಆರ್‌ಡಿಒ, ಬಾರ್ಕ್, ಐಐಎಸ್ಸಿ, ಇಸ್ರೋ ಇರುವ ಚಳ್ಳಕೆರೆಯ ವಿಜ್ಞಾನನಗರಿ

Follow Us:
Download App:
  • android
  • ios