Asianet Suvarna News Asianet Suvarna News

ಇಸ್ರೇಲ್ ದಾಳಿಗೆ ಕಂಗೆಟ್ಟ ಗಾಜಾ, ಸಂಧಾನಕ್ಕೆ ಮೋದಿ ಜೊತೆ ಪ್ಯಾಲೆಸ್ತಿನ್ ಮಾತುಕತೆ ಸಾಧ್ಯತೆ!

ಇಸ್ರೇಲ್ ಪ್ರತಿದಾಳಿಯಿಂದ ಗಾಜಾ ನಲುಗಿ ಹೋಗಿದೆ. ಹಮಾಸ್ ಉಗ್ರರ ಉದ್ಧಟತನಕ್ಕೆ ಗಾಜಾ ಅಮಾಯಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆದರೆ ಇಸ್ರೇಲ್ ದಾಳಿ ನಿಲ್ಲಿಸುವ ಲಕ್ಷಣಗಳಿಲ್ಲ. ಇದೀಗ ಪ್ಯಾಲೆಸ್ತಿನ್ ಸಂಧಾನ ಬಯಸುತ್ತಿದೆ. ಇದೇ ವಾರದಲ್ಲಿ ಪ್ಯಾಲೆಸ್ತಿನ್ ಅಧ್ಯಕ್ಷ ಅಬ್ಬಾಸ್, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

Israel attack Hamas terrorist Palestine president may call PM Modi for peace talks says report ckm
Author
First Published Oct 15, 2023, 10:32 PM IST

ನವದೆಹಲಿ(ಅ.15) ಹಮಾಸ್ ಉಗ್ರರು ಏಕಾಏಕಿ ನಡೆಸಿದ ಭೀಕರ ದಾಳಿಗೆ ಇಸ್ರೇಲ್ ಕೊತ ಕೊತ ಕುದಿಯುತ್ತಿದೆ. ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಬಾಂಬ್ ಮಳೆ ಸುರಿಸಿದೆ. ಇದೀಗ ಭೂಸೇನೆ ಮೂಲಕ ದಾಳಿ ಆರಂಭಿಸಿದೆ. ಅರಬ್ ರಾಷ್ಟ್ರ, ಇರಾನ್ ಸೇರಿದಂತೆ ಕೆಲ ರಾಷ್ಟ್ರಗಳ ಎಚ್ಚರಿಕೆಯನ್ನು ಲೆಕ್ಕಿಸದೆ ಇಸ್ರೇಲ್ ದಾಳಿ ಮುಂದುವರಿಸಿದೆ. ಇಷ್ಟು ದಿನ ಪ್ರತ್ಯುತ್ತರ ಮಾತನಾಡುತ್ತಿದ್ದ ಪ್ಯಾಲೆಸ್ತಿನ್ ಇದೀಗ ಸಂಧಾನ ಬಯಸುತ್ತಿದೆ. ಸದ್ಯ ಇಸ್ರೇಲ್ ಜೊತೆ ಸಂಧಾನ ನಡೆಸಿ ಯುದ್ಧ ನಿಲ್ಲಿಸುವ ತಾಖತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಗಿದೆ ಅನ್ನೋದು ಮನಗಂಡಿರುವ ಪ್ಯಾಲೆಸ್ತಿನ್, ಮಾತುಕತೆ ಸಜ್ಜಾಗಿದೆ.

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿ ಇಸ್ರೇಲ್‌ಗೆಂ ಬೆಂಬಲ ಸೂಚಿಸಿದ್ದರು. ಇದೇ ವೇಳೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಸರ್ಕಾರ ಸಲಹೆ ನೀಡಿತ್ತು. ಇದೀಗ ಮೋದಿ ಜೊತೆ ಮಾತುಕತೆ ನಡೆಸಲು ಪ್ಯಾಲೆಸ್ತಿನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!

ಅಮೆರಿಕ ಕಾರ್ಯದರ್ಶಿ ಆ್ಯಂಟಿನ ಬ್ಲಿಂಕೆನ್ ಜೊತೆ ಮಾತುಕತೆ ನಡೆಸಿರುವ ಪ್ಯಾಲೆಸ್ತಿನ್ ಅಧ್ಯಕ್ಷ ಅಬ್ಬಾಸ್ ಶೀಘ್ರದಲ್ಲೇ ದೂರವಾಣಿ ಮೂಲಕ ಪ್ರಧಾನಿ ಮೋದಿ ಜೊತೆ ಮಧ್ಯಸ್ಥಿತಿ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇಸ್ರೇಲ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಮಧ್ಯಸ್ಥಿತಿಕೆ ವಹಿಸುವುದು ಸೂಕ್ತ ಅನ್ನೋ ಮಾತುಗಳು ಪ್ಯಾಲೆಸ್ತಿನ್ ಸರ್ಕಾರದಲ್ಲಿ ಕೇಳಿಬಂದಿದೆ.

ಅಕ್ಟೋಬರ್ 10 ರಂದು ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ಇಸ್ರೇಲ್‌ಗೆ ಮೋದಿ ಬೆಂಬಲ ಸೂಚಿಸಿದ್ದರು. ಇದೀಗ ಪ್ಯಾಲೆಸ್ತಿನ್ ಮೇಲಿನ ಯುದ್ಧಕ್ಕೆ ಅಂತ್ಯ ಹಾಡಲು ಅಬ್ಬಾಸ್ ಭಾರತ ಮಧ್ಯಪ್ರವೇಶ ಬಯಸುತ್ತಿದ್ದಾರೆ.

ಗಾಜಾ ನಾಗರೀಕರಿಗೆ ನೀಡಿದ್ದ ಗಡುವು ಅಂತ್ಯ, ಗಡಿಯತ್ತ ನುಗ್ಗಿದ ಇಸ್ರೇಲ್ ಟ್ಯಾಂಕರ್!

ಇತ್ತ ಇಸ್ರೇಲ್ ಗಾಜಾ ಮೇಲೆ ದಾಳಿಯಿಂದ ಲೆಬೆನಾನ್ ಹಾಗೂ ಸಿರಿಯಾ ಆಕ್ರೋಶಗೊಂಡಿದೆ. ಅರಬ್ ರಾಷ್ಟ್ರದ ಮೇಲಿನ ದಾಳಿಗೆ ಇದೀಗ ಸಿರಿಯಾ ಹಾಗೂ ಲೆಬೆನಾನ್ ಉಗ್ರರು ತಮ್ಮ ತಮ್ಮ ಗಡಿಯಿಂದ ಇಸ್ರೇಲ್‌ನತ್ತ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಇತ್ತ ಇಸ್ರೇಲ್ ವಾಯುದಾಳಿ ಜೊತೆಗೆ ಭೂಸೇನೆಯನ್ನೂ ಗಾಜಾಗೆ ನುಗ್ಗರಿಸಿ ದಾಳಿಗೆ ಸಜ್ಜಾಗಿದೆ. ಈಗಾಗಲೇ ನಾಗರೀಕರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿತ್ತು. 

Follow Us:
Download App:
  • android
  • ios