Asianet Suvarna News Asianet Suvarna News

Malicious campaign ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಯತ್ನ,ಮುಸ್ಲಿಮರ ನರಮೇಧ ಎಚ್ಚರಿಕೆ ಅಭಿಯಾನ ಆರಂಭ!

  • ಯುಗಾದಿ, ರಾಮನವಮಿ ಯಾತ್ರೆಗಳ ಮೇಲೆ ಕಲ್ಲು ತೂರಾಟ, ಹಿಂಸಾಚಾರ
  • ಬಲಿಪಶುಗಳ ಮೇಲೆ ಆರೋಪ ಹೊರಿಸಲು ಹೊಸ ಅಭಿಯಾನ ಆರಂಭ
  • ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಲ್ಲ ಎಂದು ಚಿತ್ರಿಸುವ ಯತ್ನ
     
Islamists launch Twitter malicious campaign on Indian Muslim Genocide Alert to deliberately distorting truth ckm
Author
Bengaluru, First Published Apr 12, 2022, 6:03 PM IST | Last Updated Apr 12, 2022, 6:05 PM IST

ನವದೆಹಲಿ(ಏ.12): ಯುಗಾದಿ, ರಾಮ ನವಮಿ ಯಾತ್ರೆಗಳಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ, ಹಿಂಸಾಚಾರ, ಗಲಭೆಗಳು ನಡೆದಿದೆ. ಹಿಂಸಾಚಾರದಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಆದರೆ ಬಲಿಪಶುಗಳ ಮೇಲೆ ಆರೋಪ ಹೊರಿಸುವ ಅಭಿಯಾನವೊಂದು ಆರಂಭಗೊಂಡಿದೆ.  ಭಾರತೀಯ ಮುಸ್ಲಿಮರ ಹತ್ಯಾಕಾಂಡದ ಎಚ್ಚರಿಕೆ ಅನ್ನೋ ಅಭಿಯಾನ ಆರಂಭಿಸಿದ್ದಾರೆ. 

ಇಸ್ಲಾಮಿಕ್ ಸಂಘಟನೆಗಳು ಇದೀಗ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಲ್ಲ ಅನ್ನೋ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ. ಇಂದು(ಏ.12) ಸಂಜೆ 5 ಗಂಟೆಯಿಂದ 6.30ರ ವರೆಗೆ ಭಾರತೀಯಮುಸ್ಲಿಮರ ಹತ್ಯಾಕಾಂಡ ಎಚ್ಚರಿಕೆ ಹ್ಯಾಶ್‌ಟ್ಯಾಗ್ ಅಭಿಯಾನ ಆರಂಭಗೊಂಡಿದೆ. 

ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಆರೋಪಿಗಳಿಗೆ ಬುಲ್ಡೋಜರ್ ಡ್ರಿಲ್!

ದುರುದ್ದೇಶಪೂರಿತ ಅಭಿಯಾನಕ್ಕೆ ದೇಶ ವಿದೇಶಗಳಿಂದ ಬೆಂಬಲವೂ ವ್ಯಕ್ತವಾಗಿದೆ. ಭಾರತದಲ್ಲಿನ ಬಹುಸಂಖ್ಯಾರ ದಬ್ಬಾಳಿಕೆ, ಮುಸ್ಲಿಮರ ಗುರಿಯಾಗಿಸಿ ದಾಳಿಗಳು ನಡೆಯುತ್ತಿದೆ ಎಂದು ಈ ಅಭಿಯಾನದಲ್ಲಿ ಹೇಳಲಾಗಿದೆ. ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಹಾಗೂ ಬಹುಸಂಖ್ಯಾತರನ್ನು ರಾಕ್ಷಸರಾಗಿ ಚಿತ್ರಿಸುವ ಯತ್ನ ಈ ಅಭಿಯಾನದಲ್ಲಿದೆ. 

 

 

ಭಾರತದಲ್ಲಿ ಮುಸ್ಲಿಮರ ನರಮೇಧ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. ಗುಜರಾತ್, ಕರ್ನಾಟಕ, ಬಿಹಾರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಆಯೋಜಿಸಿದ ರಾಮನವಮಿ ಯಾತ್ರೆಯಲ್ಲಿ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಹಲವು ಮಸೀದಿಗಳ ಮೇಲೆ ದಾಳಿಯಾಗಿದೆ. ಹಲವು ಮಸೀದಿಗಳು ಧ್ವಂಸಗೊಂಡಿದೆ. ಇದು ಹಿಂದುತ್ವ ಗೂಂಡಾಗಳು ಮಾಡಿದ ಕೆಲಸ. ಕತ್ತಿಗಳನ್ನು ಹಿಡಿದು ಮಸೀದಿ ಮುಂದೆ ಸಂಭ್ರಮಿಸಿದ್ದಾರೆ. ಹಿಂದೂ ಮುಖಂಡರು, ಸ್ವಾಮೀಜಿಗಳು ಮುಸ್ಲಿಮರ ಹತ್ಯೆಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಇವೆರಲ್ಲೂ ಯಾವುದೇ ಕಾನೂನಿನ ಭಯವಿಲ್ಲದೆ ಓಡಾಡುತ್ತಿದ್ದಾರೆ. ಹೀಗಾಗಿ ಮುಸ್ಲಿಮರು ಈಗಲೇ ಎಚ್ಚೆತ್ತುಕೊಳ್ಳಬೇಕು.  ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಈ ಅಭಿಯಾನದ ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಕೋಮು ಸಂಘರ್ಷಕ್ಕೆ ನಿಲ್ಲಿಸಲು ಪೊಲೀಸರಿಗೆ ಸಿಎಂ ಬೊಮ್ಮಾಯಿ ಸೂಚನೆ

ಈ ಅಭಿಯಾನದಲ್ಲಿ ಮುಸ್ಲಿಮರ ನರಮೇಧ ನಡೆಯುತ್ತಿದೆ. ಇದಕ್ಕೆ ಬಹುಸಂಖ್ಯಾರು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ರಾಮನವಿ, ಯುಗಾದಿ ಹಬ್ಬದ ಸಂದರ್ಭಗಳಲ್ಲಿನ ಹಿಂಸಾಚಾರದಲ್ಲಿ ಬಲಿಯಾದ ಬಹುತೇಕರು ಹಿಂದೂಗಳು. ಸತ್ಯವನ್ನು ಮರೆ ಮಾಚಿ ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ.

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ ಅನ್ನೋ ಆಧಾರರಹಿತ ಹೇಳಿಕೆಯನ್ನು ಹೆಚ್ಚು ಪ್ರಚಾರ ಮಾಡುವ ಕೆಲಸಗಳು ನಡೆಯುತ್ತಿದೆ. ಈ ಮೂಲಕ ಎರಡು ಸಮುದಾಯಗಳಲ್ಲಿನ ಕಂದಕ ಮತ್ತಷ್ಟು ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಯತ್ನವೂ ಅಡಗಿದೆ. ಭಾರತದಲ್ಲಿ ಮುಸ್ಲಿಮರು ಪ್ರಾಣಾಪಾಯದಿಂದ ಬದುಕಿತ್ತಿದ್ದಾರೆ ಎಂದು ಚಿತ್ರಿಸಲು ಈ ರೀತಿಯ ಅಭಿಯಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ರಾಮನವಮಿ ಗಲಭೆ’: 2 ಸಾವು
 ಗುಜರಾತ್‌, ಮಧ್ಯಪ್ರದೇಶ, ಜಾರ್ಖಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಭಾನುವಾರ ರಾಮನವಮಿಯ ಮೆರವಣಿಗೆಯ ವೇಳೆಯಲ್ಲಿ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ. ಗುಜರಾತ್ ಹಾಗೂ ಜಾರ್ಖಂಡ್‌ನಲ್ಲಿ ಒಬ್ಬೊಬ್ಬರು ಬಲಿಯಾಗಿದ್ದಾರೆ. ಶೋಭಯಾತ್ರೆ ಮಸೀದಿ, ಮುಸಲ್ಮಾನ ಪ್ರದೇಶಗಳನ್ನು ಪ್ರವೇಶಿಸುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ. ಪರಿಣಾಮ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಶೋಭಯಾತ್ರೆಯಲ್ಲಿ ಪಾಲ್ಗೊಂಡ ಹಲವರು ಗಾಯಗೊಂಡಿದ್ದಾರೆ. ಇದರಿಂದ ಕೆರಳಿದ ಶೋಭಯಾತ್ರೆಯಲ್ಲಿ ಪಾಲ್ಗೊಂಡ ಮಂದಿ ಅದೇ ಕಲ್ಲನ್ನು ವಾಪಸ್ ತೂರಿದ್ದಾರೆ. 

Latest Videos
Follow Us:
Download App:
  • android
  • ios