ಸರ್ಕಾರಿ ಶಾಲಾ ಮಕ್ಕಳು ಇಸ್ಲಾಮಿಕ್ ಆಚರಣೆ ಪಾಲನೆ ಕಡ್ಡಾಯ ಹೆಡ್ ಮಾಸ್ಟರ್‌ಗೆ ಕೊಲೆ ಬೆದರಿಕೆ ಹಾಕಿ ಆಚರಣೆ ಜಾರಿ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದಿಂದ ನೋಟಿಸ್
ಜಾರ್ಖಂಡ್(ಜು.06): ದೇಶದಲ್ಲಿ ಕೋಮು ಸೌಹರ್ಧಾತೆ ಒಂದಲ್ಲ ಒಂದು ಕಾರಣಕ್ಕೆ ಕದಡುತ್ತಲೇ ಇದೆ. ಹಿಜಾಬ್ ಗದ್ದಲದಿಂದ ಹಿಡಿದು, ಕನ್ನಹಯ್ಯ, ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದ ವರೆಗೆ ನಿರಂತರ ಕೋಮು ಸಂಘರ್ಷ ನಡೆಯುತ್ತಲೇ ಬಂದಿದೆ. ಇದೀಗ ಮತ್ತೊಂದು ಹೋರಾಟಕ್ಕೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಸರ್ಕಾರಿ ಶಾಲೆ ವೇದಿಕೆಯಾಗಿದೆ. ಇಲ್ಲಿನ ಶಾಲಾ ಮಕ್ಕಳ ಮೇಲೆ ಇಸ್ಲಾಮಿಕ್ ಆಚರಣೆಗಳನ್ನು ಕಡ್ಡಾಯವಾಗಿ ಹೇರಿದ ಘಟನೆ ವರದಿಯಾಗಿದೆ. ಈ ಪ್ರಕರಣ ಹೊರಬೀಳುತ್ತಿದ್ದಂತೆ ಸರ್ಕಕಾರ ತನಿಖೆಗೆ ಆದೇಶಿಸಿದೆ.
ಗರ್ವಾ ಜಿಲ್ಲೆಯ ಕೊರ್ವಾದಿಹ್ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಸುತ್ತಮುತ್ತ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಇಲ್ಲಿನ ಸ್ಥಳೀಯ ಮುಸ್ಲಿಮ್ ಕಿಡಿಗೇಡಿಗಳ ಗುಂಪು ಶಾಲೆಗೆ ಆಗಮಿಸಿ ಮುಖ್ಯೋಪಾದ್ಯಯರನ್ನು ಬೆದರಿಸಿ ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ಇಸ್ಲಾಮಿಕ್ ಆಚರಣೆಗಳನ್ನು ಹೇರಲಾಗಿದೆ. ಬೆಳಗ್ಗೆ ಇದ್ದ ಪ್ರಾರ್ಥನೆಯನ್ನು ಬದಲಿಸಿ ಷರಿಯಾ ಹಾಗೂ ಇಸ್ಲಾಮಿಕ್ ಪ್ರಾರ್ಥನೆಯನ್ನು ಮಕ್ಕಳಿಗೆ ಹೇಳಿಸಲಾಗುತ್ತಿತ್ತು. ಇನ್ನು ಶುಕ್ರವಾರ ಇಸ್ಲಾಮಿಕ್ ಪಾರ್ಥನೆ ಕಡ್ಡಾಯ ಮಾಡಲಾಗಿತ್ತು. ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದಲ್ಲಿ ದೂರು ದಾಖಲಾದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ.
Nupur Sharma ಉಗ್ರರಿಗೆ ತಲೆಬಾಗಬೇಡಿ, ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಡಚ್ ಸಂಸದ!
ಶಾಲೆಯಲ್ಲಿ ಇಸ್ಲಾಮಿಕ್ ಹಾಗೂ ಷರಿಯಾ ಆಚರಣೆಗಳನ್ನು ಹೇರಲಾಗಿದೆ. ಇದರಿಂದ ಮಕ್ಕಳನ್ನು ಮುಕ್ತಿಗೊಳಿಸಬೇಕು ಎಂದು ದೂರು ದಾಖಲಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಗರ್ವಾ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದೆ. ಇತ್ತ ಜಿಲ್ಲಾಡಳಿತ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದೆ. ಇದರ ಬೆನ್ನಲ್ಲೇ ಜಾರ್ಖಂಡ್ ಶಿಕ್ಷಣ ಸಚಿವ ಜಾಗರ್ನಾಥ್ ಮಹ್ತೋ ತನಿಖೆಗೆ ಆದೇಶಿಸಿದ್ದಾರೆ.
ಮಂಗಳವಾರ(ಜೂ.05) ಹಳ್ಳಿಯ ಶಾಲೆಯೊಂದರಲ್ಲಿ ಇಸ್ಲಾಮಿಕ್ ಹಾಗೂ ಷರಿಯಾ ಆಚರಣೆಗಳನ್ನು ಮಕ್ಕಳಲ್ಲಿ ಕಡ್ಡಾಯವಾಗಿ ಹೇರಲಾಗಿದೆ. ಎಲ್ಲರೂ ಇಸ್ಲಾಮ್ ಪಾಲನೆ ಮಾಡಲು ಆದೇಶಿಸಿರುವ ಕುರಿತು ದೂರು ಬಂದಿದೆ. ಶಾಲೆಯ ಪ್ರಾರ್ಥನೆಯನ್ನು ಬದಲಿಸಿದ್ದಾರೆ. ಇವೆಲ್ಲಾ ಮುಸ್ಲಿಮ್ ಕಿಡಿಗೇಡಿಗಳು ಮಾಡಿದ್ದಾರೆ ಎಂದು ನಮಗೆ ದೂರು ಬಂದಿದೆ. ಹೀಗಾಗಿ ನಾವು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದ್ದೇವೆ. ಈ ಕುರಿತು ತಕ್ಷಣ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಜಾರ್ಖಂಡ್ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನುಂಗೋ ಹೇಳಿದ್ದಾರೆ.
ಪಿಎಫ್ಐ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲು ಆಗ್ರಹಿಸಿದ ಸೂಫಿ ಇಸ್ಲಾಮಿಕ್ ಬೋರ್ಡ್!
ಇದೀಗ ಜಾರ್ಖಂಡ್‌ನ ಗರ್ವಾ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಸಮರ ನಡೆಯುತ್ತಿದೆ. ಒಂದರ ಹಿಂದೊಂದರಂತೆ ಕೋಮು ಸಂಘರ್ಷದ ಘಟನೆಗಳು ನಡೆಯುತ್ತಲೇ ಇದೆ. ಇದರಿಂದ ಸೌಹಾರ್ಧತೆ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗುತ್ತಿದೆ.
