2024ರಲ್ಲಿ ಬಿಜೆಪಿ ವಿರುದ್ಧ ಮತ ಹಾಕಿ... ಹೀಗೆ ಹೇಳಿದ್ರ ಆಮೀರ್ ಖಾನ್: ವೀಡಿಯೋದ ಅಸಲಿಯತ್ತೇನು?
ಬಾಲಿವುಡ್ ನಟ ಆಮೀರ್ ಖಾನ್ ಅವರು 2024ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ನವದೆಹಲಿ: ಬಾಲಿವುಡ್ ನಟ ಆಮೀರ್ ಖಾನ್ ಅವರು 2024ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಚ ರಾಜ್ಯಗಳ ಚುನಾವಣೆಯೂ ಸೇರಿದಂತೆ ಮುಂದಿನ ಲೋಕಸಭಾ ಚುನಾವಣೆಗಾಗಿ ದೇಶ ಸಜ್ಜುಗೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ವಿರೋಧಿ ಬಣ ಇಂಡಿಯಾ ಕೂಟ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯೋಜನೆ ಸಿದ್ಧಪಡಿಸುತ್ತಿದ್ದರೆ, ಇತ್ತ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿ ಉಳಿಯಲು ಕಸರತ್ತು ಮಾಡುತ್ತಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ವೀಡಿಯೋ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಹಲವರು ಇನ್ಸ್ಟಾಗ್ರಾಮ್ (Instagram) ಹಾಗೂ ಫೇಸ್‌ಬುಕ್ ಪೋಸ್ಟ್ ಪ್ರಕಾರ, ಬಾಲಿವುಡ್ ನಟ ನಿರ್ದೇಶಕ ಆಮೀರ್ ಖಾನ್, ವಿಡಿಯೋವೊಂದರಲ್ಲಿ ದೇಶದ ನಾಗರಿಕರಿಗೆ ಜವಾಬ್ದಾರಿಯಿಂದ ಮತ ಚಲಾಯಿಸುವಂತೆ ಹಾಗೂ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದ್ದು, ಈ ವೀಡಿಯೋಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. meraj_lifeline7 ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಆಗಿರುವ ಆಮೀರ್ ಖಾನ್ ಅವರ ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ವೀಡಿಯೋ ಪೋಸ್ಟ್ ಮಾಡಿದಾತ ನೀಡಿದ ಶೀರ್ಷಿಕೆಗೂ ಸಂಬಂಧವೇ ಇಲ್ಲದಂತೆ ಅಸಂಬದ್ಧ ಬರಹ ಬರೆಯಲಾಗಿದೆ.
ಫ್ಯಾಷನ್ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು
ನಿಜವಾಗಿಯೂ ಬಿಜೆಪಿ ವಿರುದ್ಧ ವೋಟ್ ಹಾಕಲು ಹೇಳಿದ್ರಾ ಆಮೀರ್ ಖಾನ್ ?
ಹೇಯ್ ನೋಡಿಲ್ಲಿ, ಈಗ ಆಮೀರ್ ಖಾನ್ ಕೂಡ ಬಿಜೆಪಿ ವಿರುದ್ಧವಾಗಿ ಮಾತನಾಡಿದ ವೀಡಿಯೋ ಹೊರಬಂದಿದೆ ಎಂದು ಈ ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ ಆದರೆ ಆ ವೀಡಿಯೋದಲ್ಲಿ ಆಮೀರ್ ಖಾನ್ 'ಸರಿಯಾಗಿ ಓಟು ಮಾಡಿ ನಿಮ್ಮ ವೋಟು ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವುದು ಎಂದು ಹೇಳುತ್ತಿರುವುದು ಮಾತ್ರ ಇದೆ. ಈ ವೈರಲ್ ವೀಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಿದ್ದು, ಆಮೀರ್ ಖಾನ್ ಹಾಗೆ ಹೇಳಿಯೇ ಇಲ್ಲವೆಂದು ವರದಿ ಆಗಿದೆ. ಬಿಜೆಪಿ ವಿರುದ್ಧ ಮತ ಹಾಕುವಂತೆ ಕೇಳಿದ್ದಾರೆ ಎನ್ನಲಾದ ವೀಡಿಯೋ ನಕಲಿ ಎಂದು ತಿಳಿದು ಬಂದಿದೆ. ಇದು 2019ರಲ್ಲಿ ಬಿಡುಗಡೆಯಾದ ವೀಡಿಯೋ ಆಗಿದೆ.
ಎಡಿಆರ್ (ADR) ಎಂಬ ಕಂಪನಿಯು ನಡೆಸುತ್ತಿರುವ ಲಾಭರಹಿತ ಪ್ಲಾಟ್‌ಫಾರ್ಮ್ ಮೈ ನೇತಾ (MyNeta.info) ಗಾಗಿ ಅಮೀರ್ ಖಾನ್ (Aamir Kha) ಜಾಹೀರಾತು ನೀಡಿದ ವೀಡಿಯೋ ಇದಾಗಿದೆ. ಎಡಿಆರ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ (YouTube channel) ಈ ವಿಡಿಯೋ ಕಂಡು ಬಂದಿದ್ದು, ಮತ ಚಲಾಯಿಸುವ ಮೊದಲು ಕ್ಷೇತ್ರದ ಅಭ್ಯರ್ಥಿಗಳನ್ನು ತಿಳಿದುಕೊಳ್ಳುವಂತೆ ಮಾತ್ರ ಅಮೀರ್ ಖಾನ್ ಮತದಾರರಿಗೆ ಈ ವೀಡಿಯೋದಲ್ಲಿ ಮನವಿ ಮಾಡುತ್ತಿದ್ದಾರೆ.
ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ
ಅಲ್ಲದೇ ಈ ವೀಡಿಯೋದಲ್ಲಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ (political party), ರಾಜಕಾರಣಿ ಅಥವಾ ಮೈತ್ರಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ, ಮತ್ತು 2019 ರ ಲೋಕಸಭೆ ಚುನಾವಣೆಗೆ ಮೊದಲು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಬಿಡುಗಡೆಗೊಂಡಿತ್ತು. ಹೀಗಾಗಿ ಈ ವೀಡಿಯೋ ಸುಳ್ಳು ಎಂಬುದು ಸಾಬೀತಾಗಿದೆ.
ಅಸಲಿ ವೀಡಿಯೋ ಇಲ್ಲಿದೆ ನೋಡಿ