ಖಾನಾಕುಲ್(ಏ.05)‌: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 6 ಹಂತಗಳು ಬಾಕಿ ಉಳಿದಿರುವಾಗಲೇ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯುತ್ತಿರುವ ಪ್ರಧಾನಿ ಮೋದಿ ದೇವರಾಗಿರಬೇಕು ಇಲ್ಲವೇ ಅತಿಮಾನುಷ ಶಕ್ತಿ ಇರುವ ಮಾನವ (ಸೂಪರ್‌ ಹ್ಯೂಮನ್‌) ಇರಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಭಾನುವಾರ ಹೂಗ್ಲಿ ಜಿಲ್ಲೆಯ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣವಚನ ಕಾರ‍್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದ ಪ್ರಧಾನಿ ಮೋದಿ ಹೇಳಿಕೆಯನ್ನು ಉಲ್ಲೇಖಿಸಿ, ‘ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಿ, ನೀವೇನು ದೇವರಾ ಅಥವಾ ಅತಿಮಾನುಷ ಶಕ್ತಿ ಇರುವವರಾ? ಎಂದು ಪ್ರಶ್ನಿಸಿದ್ದಾರೆ.

ಬಂಗಾಳದಲ್ಲಿ ಈಗಾಗಲೇ ನಿಮ್ಮ ಆಟ ಮುಗಿಯಿತು, ಬೇಕಿದ್ದರೆ ವಾರಾಣಸಿಗೆ ಬನ್ನಿ ಎಂದು ದೀದಿಗೆ ಶನಿವಾರ ಪ್ರಧಾನಿ ಮೋದಿ ಆಹ್ವಾನ ನೀಡಿದ್ದರು.