ಸಿಬಿಐ ಜಂಟಿ ನಿರ್ದೇಶಕರಾಗಿ ಕರ್ನಾಟಕ ಕೇಡರ್‌ನ ಪ್ರವೀಣ್ ಮಧುಕರ್ ನೇಮಕ
ಸಿಬಿಐ ಜಂಟಿ ನಿರ್ದೇಶಕರಾಗಿ ಕರ್ನಾಟಕ ಕೇಡರ್‌ನ ಪ್ರವೀಣ್ ಮಧುಕರ್ ನೇಮಕ. ಸಿಬಿಐನಲ್ಲಿ ಕರ್ನಾಟಕದ ಮೂವರು ಅಧಿಕಾರಿಗಳು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಣೆ

ನವದೆಹಲಿ (ನ.5): ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರಾಗಿ ಕರ್ನಾಟಕ ಕೇಡರ್‌ನ ಐಪಿಎಸ್ ಪ್ರವೀಣ್ ಮಧುಕರ್ ಪವಾರ್ ನೇಮಕಗೊಂಡಿದ್ದಾರೆ. ಐದು ವರ್ಷಗಳ ಅವಧಿಗೆ ಜಂಟಿ ನಿರ್ದೇಶಕರಾಗಿ ನೇಮಕವಾಗಿರುವ ಪ್ರವೀಣ್, 2003ರಿಂದ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಕೇಡರ್‌ನ ಪಿ. ಕೃಷ್ಣಕಾಂತ್ ಸಿಬಿಐ ಎಸ್‌ಪಿ ಆಗಿ ನೇಮಕಗೊಂಡಿದ್ದರು. ಇನ್ನು ಕರ್ನಾಟಕದ ಡಿಜಿಪಿಯಾಗಿದ್ದ ಪ್ರವೀಣ್ ಸೂದ್ ಹಾಲಿ ಸಿಬಿಐನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಾದದ ಬೆನ್ನಲ್ಲೇ ಆತ್ಮಚರಿತ್ರೆ ಹಿಂಪಡೆದ ಇಸ್ರೋ ಚೇರ್ಮೆನ್ ಎಸ್ ಸೋಮನಾಥ್!
ಪ್ರಸ್ತುತ ಸಿಬಿಐ ಮುಖ್ಯಸ್ಥ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಮೇ 25 ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೂದ್ ಅವರು ಅಧಿಕಾರ ವಹಿಸಿಕೊಂಡರು.
ಬೀದರ್: ಯನಗುಂದಾ ಗ್ರಾಮದಲ್ಲಿ ಹಸಿ ಗಾಂಜಾ ಜಪ್ತಿ, ಇಬ್ಬರ ಬಂಧನ
ನಿಯಮಗಳ ಪ್ರಕಾರ, ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ನೇಮಕಾತಿಯ ಅವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಬಹುದು.