ನವದೆಹಲಿ(ಆ.01): ಐಪಿಎಸ್‌ ಅಧಿಕಾರಿ ಅರುಣ್ ಬೋಥರಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಅವರು ಅನೇಕ ಹಾಸ್ಯಾಸ್ಪದ ವಿಡಿಯೋ ಹಾಗೂ ಜೋಕ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಲ್ಲದೇ ಇವು ತಮ್ಮ ಫಾಲೋವರ್ಸ್‌ ಜೊತೆಯೂ ಸಂಭಾಷಣೆ ನಡೆಸುತ್ತಾರೆ. ಇನ್ನು ತಮ್ಮನ್ನು ಯಾರಾದರೂ ಟ್ರೋಲ್ ಮಾಡಲು ಯತ್ನಿಸುತ್ತಿದ್ದಾರೆಂದು ತಿಳಿದರೆ ಅವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸುತ್ತಾರೆ. ಹೀಗಿರುವಾಗ ಸರ್ ಒಂದು ಜೋಕ್ ಹೇಳಿ ಎಂದು ಅವರ ಕಾಲೆಳೆಯಲು ಯತ್ನಿಸಿದ ವ್ಯಕ್ತಿಗೆ ಮಜದಾಯಕ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ. 

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ಟ್ವಿಟರ್‌ನಲ್ಲಿ ಇಶೀ ಹೆಸರಿನ ಬಳಕೆದಾರ ಅರುಣ್ ಬೋಥ್‌ರಾ 'ಒಂದು ಜೋಕ್ ಹೇಳಿ' ಎಂದು ಬರೆದಿದ್ದಾರೆ. ಇದನ್ನು ಓದಿದ ಐಪಿಎಸ್ ಆಫೀಸರ್ ತಮ್ಮದೇ ದಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿದವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಹೌದು ರಿಪ್ಲೈ ಕೊಟ್ಟ ಪೊಲೀಸ್ ಅಧಿಕಾರಿ 'ನೀವು ಬಹಳ ಬುದ್ಧಿವಂತರು' ಎಂದಿದ್ದಾರೆ. ಇದು ಈಗ ಭಾರೀ ವೈರಲ್ ಆಗಿದೆ.

ಜುಲೈ 30ರಂದು ಈ ಟ್ವೀಟ್ ಸಂಭಾಷಣೆ ನಡೆದಿದೆ. ಅನೇಕ ಮಂದಿ ಐಪಿಎಸ್‌ ಅಧಿಕಾರಿಯ ಕಾಲೆಳೆಯಲು ಹೋಗಿದ್ದಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದು ಬೈದಿದ್ದಾರೆ.