Asianet Suvarna News Asianet Suvarna News

IPS Hemant Lohia Murder ಆರೋಪಿ ಯಾಸಿರ್‌ ಅಹ್ಮದ್‌ ಬಂಧನ!

ಜಮ್ಮು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಐಪಿಎಸ್‌ ಅಧಿಕಾರಿ ಹೇಮಂತ್‌ ಲೋಹಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮನೆಗೆಲಸದ ವ್ಯಕ್ತಿ ಯಾಸಿರ್‌ ಅಹ್ಮದ್‌ರ್ನು ಜಮ್ಮು ಕಾಶ್ಮೀರ ಪೊಲೀಸ್‌ ಬಂಧಿಸಿದೆ. ಕೊಲೆ ಪ್ರಕರಣ ವರದಿಯಾದ ಬೆನ್ನಲ್ಲಿಯೇ ಯಾಸಿರ್‌ ಶೋಧ ಕಾರ್ಯಕ್ಕೆ ದೊಡ್ಡ ಪಡೆಯನ್ನು ಪೊಲೀಸರು ನಿಯೋಜಿಸಿದ್ದರು.

IPS Hemant Lohia Murder Domestic helper Yasir Ahmed arrested By Jammu and Kashmir Police san
Author
First Published Oct 4, 2022, 12:53 PM IST

ಶ್ರೀನಗರ (ಅ.4): ಜಮ್ಮು ಕಾಶ್ಮೀರ ಪೊಲೀಸರು ರಾತ್ರಿಯಿಡೀ ನಡೆಸಿದ್ದ ಪ್ರಮುಖ ಶೋದ ಕಾರ್ಯಾಚರಣೆಯಲ್ಲಿ, ಕಾರಾಗೃಹ ವಿಭಾಗದ ಮಹಾನಿರ್ದೇಶಕ ಐಪಿಎಸ್‌ ಅಧಿಕಾರಿ ಹೇಮಂತ್‌ ಲೋಹಿಯಾರನ್ನು ಕೊಲೆ ಮಾಡಿದ್ದ ಮನೆಗೆಲಸದ ವ್ಯಕ್ತಿ, ಯಾಸಿರ್‌ ಅಹ್ಮದ್‌ರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ವಿಚಾರಣೆ ಆರಂಭವಾಗಿದ್ದು, ಕೊಲೆಯ ಹಿಂದಿನ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಎಡಿಜಿಪಿ ಮುಖೇಶ್‌ ಸಿಂಗ್‌ ಹೇಳಿದ್ದಾರೆ. ಸೋಮವಾರ ಹೇಮಂತ್‌ ಲೋಹಿಯಾ ಅವರು ತಮ್ಮ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಕೊಲೆಯಾಗಿದ್ದರು. ಇದರ ಬೆನ್ನಲ್ಲಿಯೇ ಭಯೋತ್ಪಾದಕ ಸಂಘಟನೆ ಪಿಎಎಫ್‌ಎಫ್‌, ಈ ಘಟನೆಯ ಹೊಣೆಯನ್ನು ಹೊತ್ತುಕೊಂಡು ಅಮಿತ್‌ ಶಾ ಜಮ್ಮು ಕಾಶ್ಮೀರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಪುಟ್ಟ ಕಾಣಿಕೆ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಹಾಕಿತ್ತು. ಆದರೆ, ಪೊಲೀಸರು ಈ ಘಟನೆಯ ಹಿಂದೆ ಸಂಘಟನೆಯ ಕೈವಾಡವಿದೆಯೇ ಎನ್ನುವುದನ್ನು ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಿದೆ. ಹೇಮಂತ್‌ ಲೋಹಿಯಾ ಅವರ ಕಾಲಿಗೆ ಊತವಿತ್ತು. ಕಾಲಿಗೆ ಎಣ್ಣೆ ಹಚ್ಚುವ ನೆಪದಲ್ಲಿ ಕಳೆದ 6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಯಾಸಿರ್‌ ಅವರ ಕೋಣೆಗೆ ನುಗ್ಗಿ, ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್ಭಾಗ್‌ ಸಿಂಗ್‌ ಹೇಳಿದ್ದಾರೆ.


ಲೋಹಿಯಾ (IPS Hemant Lohia Murder) ಅವರು ಕಳೆದ ಕೆಲ ದಿನಗಳಿಂದ ತಮ್ಮ ಸ್ನೇಹಿತರ ಮನೆಯಲ್ಲಿ ವಾಸವಿದ್ದರು. ಸೋಮವಾರ ಭೋಜನದ ಬಳಿಕ ಅವರು ತಮ್ಮ ಮನೆಗೆ ಬಂದು ಕೋಣೆಗೆ ತೆರಳಿದ್ದರು. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆಲಸದ ವ್ಯಕ್ತಿ ಕೋಣೆಗೆ ನುಗ್ಗಿದ್ದ ಎಂದು ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ.

ಎಡಿಜಿಪಿ (ADGP Dilbagh Singh) ಮೂಲಗಳ ಪ್ರಕಾರ, ಮನೆ ಸಹಾಯಕ ಯಾಸಿರ್ ಅಹ್ಮದ್ ಕಳೆದ ಆರು ತಿಂಗಳಿನಿಂದ ತಮ್ಮ ಡಿಜಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದ. ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.

ಈ ವೇಳೆ ಪ್ರಮುಖ ಆರೋಪಿ 23 ವರ್ಷದ ಯಾಸಿರ್ ಅಹ್ಮದ್ (Yasir Ahmed),  ಖಾಸಗಿ ಡೈರಿಯೊಂದು ಪೊಲೀಸರಿಗೆ (Jammu Kashmir Police) ಸಿಕ್ಕಿದೆ. ಆತ ಖಿನ್ನತೆಗೆ ಒಳಗಾಗಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಆತ ಜೀವನದಲ್ಲಿ ಪ್ರೀತಿ 0%, ಒತ್ತಡ 90%, ದುಃಖ 100% ಮತ್ತು ನಕಲಿ ನಗು 100% ಎಂದು ಒಂದೆಡೆ ಬರೆದಿದ್ದಾರೆ. ಆತ ಖಿನ್ನತೆಯಿಂದ ಸಾವಿನ ಬಗ್ಗೆ ಯೋಚಿಸುತ್ತಿದ್ದರು.

ಅಮಿತ್‌ ಶಾ ಕಾಶ್ಮೀರಕ್ಕೆ ಬರ್ತಿದ್ದಾರಲ್ಲ, ಅವರಿಗೆ ಇದು ಸಣ್ಣ ಉಡುಗೊರೆ: ಡಿಜಿ ಕೊಲೆಗೆ ಪಿಎಎಫ್‌ಎಫ್‌ ಪ್ರತಿಕ್ರಿಯೆ!

ಪೊಲೀಸರ ಪ್ರಕಾರ, ಯಾಸಿರ್ ಅಹ್ಮದ್‌, ರಾಂಬನ್ (Ramban) ನಿವಾಸಿ. ಕಳೆದ 6 ತಿಂಗಳಿಂದ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆತನ ಡೈರಿಯಲ್ಲಿ ಕೆಲವು ಟಿಪ್ಪಣಿಗಳನ್ನು ಬರೆಯಲಾಗಿದೆ. ಇವು ಯಾವುದು ಕೂಡ ಒಂದೇ ಕಡೆ ಇಲ್ಲ. ವಿವಿಧ ಪುಟಗಳಲ್ಲಿ ಇವುಗಳನ್ನು ಬರೆಯಲಾಗಿದೆ. ಒಂದು ಪುಟದಲ್ಲಿ ಈ ರೀತಿ ಬರೆದಿದ್ದಾರೆ. "ಆತ್ಮೀಯ ಸಾವು, ನನ್ನ ಜೀವನದಲ್ಲಿ ಬನ್ನಿ. ನನ್ನನು ಕ್ಷಮಿಸು. ನನಗೆ ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನ ಎಲ್ಲವೂ ಕೆಟ್ಟದಾಗಿದೆ" ಎಂದು ಬರೆದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ: ಮನೆ ಕೆಲಸದವ ಪರಾರಿ

ಡೈರಿಯಲ್ಲಿ ಹಿಂದಿ ಹಾಡು ಕೂಡ ಇದೆ. ಅದರ ಶೀರ್ಷಿಕೆ ನನ್ನನ್ನು ಮರೆತುಬಿಡಿ ಎನ್ನುವುದಾಗಿದೆ. ಎರಡನೇ ಪುಟದಲ್ಲಿ ಸಣ್ಣ ಟಿಪ್ಪಣಿಗಳಿವೆ. ಇವುಗಳಲ್ಲಿ ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ ನನ್ನ ಜೀವನದಲ್ಲಿ ಕೇವಲ ಶೋಕವಿದೆ ಎಂದು ಬರೆಯಲಾಗಿದೆ. ಪೋನ್‌ ಬ್ಯಾಟರಿಯ ಚಿತ್ರವೊಂದನ್ನು ಪುಟದಲ್ಲಿ ಬಿಡಿಸಲಾಗಿದ್ದು, ಅದರ ಮೇಲೆ- ನನ್ನ ಜೀವನ 1%, ನನ್ನ ಜೀವನದಲ್ಲಿ ಪ್ರೀತಿ 0%, ಒತ್ತಡ 90%, ದುಃಖ 100% ಮತ್ತು ನಕಲಿ ನಗು 100%. ಎಂದು ಬರೆದಿದ್ದಾರೆ. ನಾನು ಬದುಕುತ್ತಿರುವ ಜೀವನದಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಮುಂದೆ ನಮಗೆ ಏನಾಗುತ್ತದೆ ಎಂಬುದೇ ಸಮಸ್ಯೆಯಾಗಿದೆ ಎಂದಿದ್ದಾರೆ.

Follow Us:
Download App:
  • android
  • ios