ಪೂಜಾ ಗೆಹ್ಲೋಟ್ ಸಂತೈಸಿದ ಪ್ರಧಾನಿ: ಸಾಮಾಜಿಕ ಜಾಲತಾಣದಲ್ಲಿ ‘ನಮೋ’ಗೆ ಪ್ರಶಂಸೆಯ ಸುರಿಮಳೆ
ಪ್ರಧಾನಿ ಮೋದಿ ಕುಸ್ತಿ ಪಟು ಪೂಜಾ ಗೆಹ್ಲೋಟ್‌ಗೆ ಸ್ಪೂರ್ತಿ ತುಂಬಿದ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಪ್ರಶಂಸೆ ದೊರೆತಿದೆ.
ಗಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರೂ, ಚಿನ್ನ ಗೆಲ್ಲಲಿಲ್ಲವೆಂದು ದೇಶದ ಕ್ಷಮೆ ಕೋರಿದ ಪುಜಾ ಗೆಹ್ಲೋಟ್‌ಗೆ ಪ್ರಧಾನಿಮೋದಿ ಟ್ವೀಟ್ ಮೂಲಕ ಸ್ಫೂರ್ತಿ ತುಂಬುವ ಮಾತನಾಡಿದ್ದಾರೆ. ಪ್ರಧಾನಿಯ ಈ ಟ್ವೀಟ್‌ಗೆ ಇಂಟರ್‌ನೆಟ್‌ನಲ್ಲಿ ಪ್ರಶಂಸೆಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಪತ್ರಕರ್ತ, ಅಮೆರಿಕ ಸೇರಿ ವಿದೇಶದಿಂದಲೂ ಪ್ರಧಾನಿಯ ಈ ಟ್ವೀಟ್‌ಗೆ ಭಾರಿ ಮೆಚ್ಚುಗೆ ಸಿಗುತ್ತಿದೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪೂಜಾ ಗೆಹ್ಲೋಟ್ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೂ, ಬಂಗಾರದ ಪದಕ ಗೆಲ್ಲಲು ಸಾಧ್ಯವಾಗದ್ದಕ್ಕೆ ಅವರು ದೇಶದ ಕ್ಷಮೆ ಕೋರಿದ್ದರು. ‘’ನಾನು ದೇಶಬಾಂಧವರಿಗೆ ಕ್ಷಮೆ ಕೋರುತ್ತೇನೆ. ಇಲ್ಲಿ ರಾಷ್ಟ್ರಗೀತೆ ಮೊಳಗಬೇಕಿತ್ತು ಎಂದು ನಾನು ಹಾರೈಸಿದ್ದೆ. ಆದರೆ, ನಾನು ನನ್ನ ತಪ್ಪುಗಳಿಂದ ಪಾಠ ಕಲಿಯುತ್ತೇನೆ ಹಾಗೂ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ’’ ಎಂದು ಪೂಜಾ ಗೆಹ್ಲೋಟ್ ಪದಕ ಗೆದ್ದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಕಂಚು ಗೆದ್ದು ಕಣ್ಣೀರಿಡುತ್ತಲೇ ದೇಶದ ಕ್ಷಮೆ ಕೋರಿದ ಪೂಜಾಗೆ ಸ್ಪೂರ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ
ಆದರೆ, ಈ ಸಂಬಂಧ ಭಾನುವಾರ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಪೂಜಾ ಗೆಹ್ಲೋಟ್ ಅನ್ನು ಸಂತೈಸಿದ್ದು, ಸ್ಪೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ. ‘’ಪೂಜಾ, ನಿಮ್ಮ ಪದಕವು ಆಚರಣೆಗಳಿಗೆ ಕರೆ ನೀಡುತ್ತದೆ, ಕ್ಷಮೆಯಲ್ಲ. ನಿಮ್ಮ ಜೀವನ ಪಯಣ ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮಗೆ ಸಂತೋಷವನ್ನು ನೀಡುತ್ತದೆ. ನೀವು ಮುಂದೆ ಮಹತ್ತರವಾದ ವಿಷಯಗಳಿಗೆ ಗುರಿಯಾಗಲಿದ್ದೀರಿ ...ಹೊಳೆಯುತ್ತಲೇ ಇರಿ!’’ಎಂದು ಅವರ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದರು.
ಸ್ಪೂರ್ತಿ ತುಂಬಿದ ಪ್ರಧಾನಿಗೆ ಪ್ರಶಂಸೆಯ ಸುರಿಮಳೆ..!
ಇನ್ನು, ಪ್ರಧಾನಿ ಮೋದಿಯ ಈ ಟ್ವೀಟ್ ದೇಶ, ವಿದೇಶಗಳಲ್ಲೆಲ್ಲ ಮೆಚ್ಚುಗೆಗೆ ಪಾತ್ರರಾಗುತ್ತಿದೆ. ನಮ್ಮ ಕಡು ವೈರಿ ರಾಷ್ಟ್ರ ಎನಿಸಿಕೋಂಡಿರುವ ಪಾಕಿಸ್ತಾನದ ಪತ್ರಕರ್ತ ಸಹ ಮೋದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತವು ತಮ್ಮ ಅಥ್ಲೀಟ್‌ಗಳನ್ನು ಈ ರೀತಿ ಪ್ರಸ್ತುತ ಪಡಿಸಿಕೊಳ್ಳುತ್ತದೆ. ಪೂಜಾ ಗೆಹ್ಲೋಟ್ ಕಂಚು ಗೆದ್ದು, ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದಿದ್ದಕ್ಕೆ ದುಃಖ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಪೂಜಾ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಇಂತಹ ಸಂದೇಶವನ್ನು ಎಂದಾದರೂ ನೋಡಿದ್ದೀರಾ? ಪಾಕಿಸ್ತಾನದ ಅಥ್ಲೀಟ್‌ಗಳು ಪದಕಗಳನ್ನು ಗೆಲ್ಲುತ್ತಿದ್ದಾರೆ ಎಂದು ಅವರಿಗೆ ತಿಳಿದಿದೆಯೇ..?’’ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದು, ಪಾಕ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೆರಿಕದ ಟೆಕ್ಸಾಸ್‌ನ ‘’Dallas County’’ ಎಂಬ ಟ್ವಿಟ್ಟರ್ ಖಾತೆ ‘’ಅವರ ರಾಜಕೀಯವನ್ನು ಒಪ್ಪದಿರಬಹುದು. ಆದರೆ ರಾಷ್ಟ್ರದ ಮುಖ್ಯಸ್ಥರು ಕ್ರೀಡಾಪಟುಗಳಿಗೆ ಈ ರೀತಿ ಹೇಳುವುದು ನಂಬಲಾಗದ ವಿಷಯ’’ ಎಂದೂ ಹೊಗಳಿದ್ದಾರೆ.
ಇದೇ ರೀತಿ, ಭಾರತದ ಹಾಗೂ ವಿದೇಶದ ಹಲವು ನೆಟ್ಟಿಗರು ಪ್ರಧಾನಿ ಮೋದಿಯ ಈ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನರೇಂದ್ರ ಮೋದಿ ತಮ್ಮ ವೈಯಕ್ತಿಕ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಿಂದ ಮಾಡಿದ ಟ್ವೀಟ್‌ಗೆ 46 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7 ಸಾವಿರಕ್ಕೂ ಅಧಿಕ ಜನ ರೀಟ್ವೀಟ್ ಮಾಡಿದ್ದಾರೆ.
Commonwealth Games 2022: ರವಿ ಕುಮಾರ್ ದಹಿಯಾ, ವಿನೇಶ್ ಪೋಗಟ್, ನವೀನ್‌ಗೆ ಸ್ವರ್ಣ!
ಇನ್ನು, ಕೆಲವು ನೆಟ್ಟಿಗರ ಮೆಚ್ಚುಗೆಯ ಮಾತುಗಳು ಹೀಗಿವೆ ನೋಡಿ..
‘’ನಾಯಕನೆಂದರೆ ಹೀಗಿರಬೇಕು’’ ಎಂದು ದೇಹಾತಿ ವತ್ಸ್ ಎಂಬುವರು ಟ್ವೀಟ್ ಮಾಡಿದ್ದಾರೆ.
ಹಾಗೆ, ‘’ಈ ಬಲವಾದ ವೈಯಕ್ತಿಕ ಬೆಂಬಲ ಬೇಕು, ನಮ್ಮ ಪ್ರಧಾನಿಯನ್ನು ಸಂಪೂರ್ಣವಾಗಿ ಆರಾಧಿಸಿ’’ ಎಂದು ರಚನಾ ಹೇಳಿಕೊಂಡಿದ್ದಾರೆ.
ಈ ಮಧ್ಯೆ, ‘’ನೀವು ಅವರನ್ನು ಪ್ರೀತಿಸುತ್ತೀರೋ ಅಥವಾ ದ್ವೇಷಿಸುತ್ತೀರೋ. ಆದರೆ ಯಾವುದೇ ಅಥ್ಲೀಟ್ ಕೇಳಲು ಇಷ್ಟಪಡುವ ಅತ್ಯುತ್ತಮ ವಿಷಯವಾಗಿದೆ’’ ಎಂದು ಪ್ರಥಮ ಎಂಬುವವರು ಟ್ವೀಟ್ ಮಾಡಿದ್ದಾರೆ.
ಸೋನಾ ಎಂಬುವರ ಟ್ವೀಟ್ ನೋಡಿ..
ಗೌತಮನ್ ಎಂಬುವರ ಟ್ವೀಟ್ ಹೀಗಿದೆ..