ಅಂತಾರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ!
* ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ
* 51 ಹುಲಿ ಅಭಯಾರಣ್ಯಗಳಿಗೆ ನೆಲೆಯಾದ ಭಾರತ
* ಕಳೆದ 2018ರ ಹುಲಿ ಗಣತಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿ
ನವದೆಹಲಿ(ಜು.29): ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನ್ಯಜೀವಿ ಪ್ರೇಮಿಗಳಿಗೆ, ವಿಶೇಷವಾಗಿ ಹುಲಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಶುಭ ಕೋರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, “ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ"#InternationalTigerDay, ವನ್ಯಜೀವಿ ಪ್ರೇಮಿಗಳಿಗೆ, ವಿಶೇಷವಾಗಿ ಹುಲಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಶುಭಾಶಯಗಳು. ಜಾಗತಿಕವಾಗಿ ಶೇ.70ಕ್ಕೂ ಹೆಚ್ಚು ಹುಲಿಗಳಿಗೆ ಭಾರತವೇ ನೆಲೆಯಾಗಿದ್ದು, ನಮ್ಮ ಹುಲಿಗಳಿಗೆ ಸುರಕ್ಷಿತ ಆವಾಸಸ್ಥಾನಗಳನ್ನು ಖಾತರಿಪಡಿಸುವ ಮತ್ತು ಹುಲಿ ಸ್ನೇಹಿ ಪರಿಸರ ವ್ಯವಸ್ಥೆಗಳನ್ನು ಪೋಷಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ.ʼʼ
ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ
“ಭಾರತವು 51 ಹುಲಿ ಅಭಯಾರಣ್ಯಗಳಿಗೆ ನೆಲೆಯಾಗಿದ್ದು, ಇವು 18 ರಾಜ್ಯಗಳಲ್ಲಿ ವ್ಯಾಪಿಸಿವೆ. ಕಳೆದ 2018ರ ಹುಲಿ ಗಣತಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ʻಹುಲಿ ಸಂರಕ್ಷಣೆ ಕುರಿತಾದ ಸೇಂಟ್ ಪೀಟರ್ಸ್‌ಬರ್ಗ್ ಘೋಷಣೆʼಯ ನಿಗದಿತ ಸಮಯಕ್ಕಿಂತಲೂ 4 ವರ್ಷ ಮುಂಚಿತವಾಗಿ ಹುಲಿಗಳ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಭಾರತ ಸಾಧಿಸಿದೆ.ʼʼ
“ಹುಲಿ ಸಂರಕ್ಷಣೆ ಕುರಿತಾದ ಭಾರತದ ಕಾರ್ಯತಂತ್ರದಲ್ಲಿ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಭೂಮಿಯ ಮೇಲಿರುವ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಜತೆ ಸಹಬಾಳ್ವೆ ನಡೆಸುವ ನಮ್ಮ ಶತಮಾನಗಳ ಹಳೆಯ ತತ್ವದಂದ ನಾವು ಪ್ರೇರಿತರಾಗಿದ್ದೇವೆ." ಎಂದು ಹೇಳಿದ್ದಾರೆ.