ನವದೆಹಲಿ (ಜೂ. 26): ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿದ್ದರೂ ರಾಜನಾಥ್‌ ಸಿಂಗ್‌ ಅವರಿಗೆ ಹೆಚ್ಚಿನ ಮಹತ್ವವೇನೂ ಇರಲಿಲ್ಲ. ಆಗ ಸರ್ಕಾರದ ವಿಷಯಗಳಲ್ಲಿ ಅರುಣ್‌ ಜೇಟ್ಲಿ ಅವರು ಮೋದಿಗೆ ಆಪದ್ಬಾಂಧವರಾಗಿದ್ದರೆ, ಪಕ್ಷ ಮತ್ತು ರಾಜಕೀಯ ವಿಷಯದಲ್ಲಿ ಅಮಿತ್‌ ಶಾ ಮೇಲೆ ಮೋದಿ ಅವಲಂಬಿತರಾಗಿದ್ದರು.

ಹೆಚ್ಚುತ್ತಿದೆ ಇಂಡೋ- ಅಮೆರಿಕನ್ ಬಾಂಧವ್ಯ; ಚೀನಾಗೆ ಕಂಗಾಲು

ಆದರೆ ಮೋದಿ ಸರ್ಕಾರಕ್ಕೆ ಕೋವಿಡ್‌-19 ಕಾಟ ಶುರುವಾದ ಮೇಲೆ ಏಕಾಏಕಿ ರಾಜನಾಥ್‌ ಸಿಂಗ್‌ ಸರ್ಕಾರದ ಮುಖವಾಗಿ ಕಾಣಿಸಿಕೊಳ್ಳತೊಡಗಿದ್ದಾರೆ. ಕೋವಿಡ್‌ ನಿಯಂತ್ರಣದ ಸಚಿವರ ಸಮಿತಿಯ ಜವಾಬ್ದಾರಿಯನ್ನು ಅಮಿತ್‌ ಶಾಗೆ ಬಿಟ್ಟು, ಇನ್ನಿತರ ವ್ಯವಹಾರಗಳ ಹೊಣೆಯನ್ನು ರಾಜನಾಥ್‌ ಸಿಂಗ್‌ ಅವರಿಗೆ ಕೊಟ್ಟಮೋದಿ ಈಗ ಚೀನಾ ಘರ್ಷಣೆ, ನೇಪಾಳ ಕಿರಿಕಿರಿ ಬಗ್ಗೆ ಕೂಡ ರಾಜನಾಥ್‌ ಸಿಂಗ್‌ರಿಂದಲೇ ಹೇಳಿಕೆ ಕೊಡಿಸುತ್ತಿದ್ದಾರೆ. ರಾಜಕಾರಣದಲ್ಲಿ ಕೆಲವೊಮ್ಮೆ ಹೆಚ್ಚೆಚ್ಚು ಮಹತ್ವ ಪಡೆದವರು ಹರಕೆಯ ಕುರಿ ಆಗುವುದೂ ಉಂಟು!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ