ನಮ್ಮ ದೇಶದ ಅತ್ಯಂತ ರಹಸ್ಯವಾದ ಬೇಹುಗಾರಿಕಾ ವಿಭಾಗ ಎಂದರೆ ಅದು RAW. ರಾ ಎಂದರೆ ರಿಸರ್ಚ್ ಆ್ಯಂಡ್ ಅನಲಿಸಿಸ್ ವಿಂಗ್(RAW).ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಗುರಿಯಾಗಿಟ್ಟುಕೊಂಡು ಅದರಂತೆ ನಡೆವ ರಾ ಕುರಿತ ಆಸಕ್ತಿಕರ ಮಾಹಿತಿಗಳು ಇಲ್ಲಿವೆ.

ರಾ ಎಂದರೆ ರಾಜತಾಂತ್ರಿಕ, ರಾ ಎಂದರೆ ರಾಷ್ಟ್ರರಕ್ಷಣೆ, ರಾ ಎಂದರೆ ರಹಸ್ಯ, ರಾ ಎಂದರೆ ಬುದ್ಧಿವಂತಿಕೆ, ರಾ ಎಂದರೆ ರೋಚಕತೆ, ರಾ ಎಂದರೆ ರೋಮಾಂಚನಕಾರಿ ಕತೆಗಳು...

ನಮ್ಮ ದೇಶದ ಗುಪ್ತಚರ ಇಲಾಖೆ ರಾದ ಕಾರ್ಯತಂತ್ರ, ನಿಗೂಢ ನಡೆ, ಅದು ಯೋಜಿಸುವ ತಂತ್ರಗಳು- ಈ ಕುರಿತ ಕತೆಗಳನ್ನು ಕೇಳಲೇ ಎಷ್ಟೊಂದು ಚೆನ್ನಾಗಿರುತ್ತದೆ, ರಾಜಿ, ಮದ್ರಾಸ್ ಕೆಫೆ, ಪರಮಾಣುವಿನಂಥ ಸಿನಿಮಾಗಳಲ್ಲಿ ಇದರ ಕಾರ್ಯಶೈಲಿಯನ್ನು ಅಷ್ಟೋ ಇಷ್ಟೋ ಕಂಡಾಗ ವಾವ್ ಎನಿಸುತ್ತದೆ. ಇಂಥ ರಾದ ಕುರಿತ ಕೆಲ ಆಸಕ್ತಿಕರ ಮಾಹಿತಿಗಳು ಇಲ್ಲಿವೆ...

ಮಂಜಿನ ನಗರಿಯಲ್ಲಿ ಮನಸೆಳೆದ ಖಾದ್ಯೋತ್ಸವ, ಬಾಯಲ್ಲಿ ನೀರೂರಿಸುತ್ತೆ ತಿನಿಸುಗಳು..!

1. ಗೂಢಾಚಾರಿ ಬಳಿಯ ರಹಸ್ಯಗಳು ಆತನೊಂದಿಗೆ ಮಣ್ಣಾಗುತ್ತವೆ!

ನಮಗೆಲ್ಲ ಯಾರಾದರೂ ಗುಟ್ಟೆಂದು ಹೇಳಿದರೆ ಅದನ್ನು ಇನ್ನಿಬ್ಬರಿಗೆ ಹೇಳಿ ಅದನ್ನು ಗುಟ್ಟಾಗಿಡಿ ಎಂದು ಹೇಳಿ ಸಮಾಧಾನ ಮಾಡಿಕೊಳ್ಳುತ್ತೇವೆ ಅಲ್ಲವೇ ? ಆದರೆ ರಾ ಏಜೆಂಟ್ ಬಳಿ ಏನಾದರೂ ಸೀಕ್ರೆಟ್‌ಗಳಿದ್ದರೆ ಅವು ಆತ ಮಣ್ಣಾದರೆ ಅವನೊಂದಿಗೆ ಮಣ್ಣಾಗಿ ಹೋಗುತ್ತವೆ. ಆತನ ಪತ್ನಿಗೆ ಆತ ರಾ ಏಜೆಂಟ್ ಎಂಬ ವಿಷಯವೂ ತಿಳಿದಿರುವುದಿಲ್ಲ. ಭಾರತದ ಗುಪ್ತಚರ ಇಲಾಖೆ ಅಗತ್ಯವಿದ್ದಾಗ ತಾನಾಗಿಯೇ ನಿಮ್ಮ ಬಳಿ ಬರುತ್ತದೆಯೇ ಹೊರತು ನೀವು ಅದನ್ನು ಹುಡುಕಿಕೊಂಡು ಹೋಗಲಾರಿರಿ. 

2. ಹೇಳಿಕೊಂಡು ತಿರುಗೋಲ್ಲ

ರಾ ಕುರಿತು ನಿಮಗೆ ಹೆಚ್ಚು ಮಾಹಿತಿ ಇಲ್ಲದಿರಲು ಕಾರಣ ಈ ಏಜೆನ್ಸಿ ಎಲ್ಲವನ್ನೂ ಸೀಕ್ರೆಟ್ ಆಗಿಡುವುದು. ರಹಸ್ಯ ಕಾಪಾಡುವ ಉದ್ದೇಶದಿಂದ ತಮ್ಮ ಸಾಧನೆಗಳನ್ನೆಲ್ಲ ಅವರು ಬಹಿರಂಗಗೊಳಿಸುವುದಿಲ್ಲ. ಹೀಗಾಗಿ, ಇವರ ಅತ್ಯುತ್ತಮ ಕಾರ್ಯಾಚರಣೆಗಳು ಕೂಡಾ ಸುದ್ದಿಯಾಗುವುದಿಲ್ಲ. 

3. ರಾ ಅಧಿಕಾರಿ ಗನ್ ಇಟ್ಟುಕೊಳ್ಳುವಂತಿಲ್ಲ

ದೇಶದ ರಕ್ಷಣಾ ಇಲಾಖೆಗೆ ಹೊಂದಿಕೊಂಡಂತೆ ಕೆಲಸ ಮಾಡಿದರೂ ರಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಆನ್ ಡ್ಯೂಟಿಯಲ್ಲಿರುವಾಗ ಗನ್ ಇಟ್ಟುಕೊಳ್ಳುವಂತಿಲ್ಲ. ತೀರಾ ಸಾಮಾನ್ಯ ಬಟ್ಟೆ ಧರಿಸಿ, ಸಾಮಾನ್ಯನಂತಿರುವ ಭಾರತೀಯನೊಬ್ಬ ವಿದೇಶದಲ್ಲಿ ಟೆರರಿಸ್ಟೊ ಅಥವಾ ಮತ್ಯಾರೋ ದೇಶದ್ರೋಹಿಗಳನ್ನು ನೋಡಿ ಗುಂಡು ಹಾರಿಸಿದರೆ ಎಷ್ಟು ಅಪಾರ್ಥವಾಗುತ್ತದೆಯಲ್ಲವೇ? ಅಲ್ಲದೆ ಇದನ್ನು ಯಾರು ಬೇಕಾದರೂ ದುರುಪಯೋಗಗೊಳಿಸಿಕೊಳ್ಳಬಹುದು. ಹಾಗಾಗಿ, ಅವರ ಕೆಲಸವೇನಿದ್ದರೂ ಗುಪ್ತಚರರಾಗಿ ಮಾಹಿತಿ ಕಲೆ ಹಾಕುವುದು. 

ಧೋತಿ-ಕುರ್ತಾ, ಸೀರೆ: ನೊಬೆಲ್ ಸ್ವೀಕರಿಸಿದ ಬ್ಯಾನರ್ಜಿ ದಂಪತಿ!

4. ನಿಗೂಢತೆಯೇ ಅವರ ಅಸ್ತ್ರ

ಭಾರತವು ಅಣ್ವಸ್ತ್ರ ಪರೀಕ್ಷೆ ಮಾಡಿದಾಗ ಅದೆಷ್ಟು ರಹಸ್ಯವಾಗಿತ್ತು ಎಂದರೆ ಈ ಬಗ್ಗೆ ಅಮೆರಿಕದ ಸಿಐಎಗೆ ಕೂಡಾ ಕಂಡುಹಿಡಿಯಲಾಗಲಿಲ್ಲ. ಪರೀಕ್ಷೆ ನಂತರ ಭಾರತ ಇದನ್ನು ಹೇಳಿಕೊಂಡಿತು. ಈ ಕಾರ್ಯಾಚರಣೆಗೆ ಭಾರತ ನೀಡಿದ್ದ ಹೆಸರು ಆಪರೇಶನ್ ಸ್ಮೈಲಿಂಗ್ ಬುದ್ಧ. ಇದರ ಜವಾಬ್ದಾರಿ ಹೊತ್ತಿದ್ದು ರಾ. ಭಾರತೀಯ ವಿಜ್ಞಾನಿಗಳು ಹಾಗೂ ಸರಕಾರ ಏನು ಮಾಡುತ್ತಿದೆ ಎಂದು ಯಾರಿಂದಲೂ ಊಹಿಸಲಾಗದ್ದು ರಾ ದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. 

5. ರಾ ಎಂಬುದು ಬಿಗ್ ಬ್ರದರ್

ಎಂಥದೇ ಪರಿಸ್ಥಿತಿ ಬಂದರೂ ರಾ ಭಾರತೀಯ ಸಂಸತ್ತಿಗೆ ಉತ್ತರಿಸಬೇಕಾಗಿಲ್ಲ. ಇದೇ ಕಾರಣಕ್ಕಾಗಿ ರಾ ಮಾಹಿತಿ ಹಕ್ಕು ಕಾಯ್ದೆಯಡಿಯೂ ಬರುವುದಿಲ್ಲ. 

6. ತರಬೇತಿ

ರಾ ಅಧಿಕಾರಿಯ ಟ್ರೇನಿಂಗ್‌ಗಾಗಿ ಅವರನ್ನು ದೇಶಾದ್ಯಂತ ತಿರುಗಾಟಕ್ಕೆ ಕಳುಹಿಸಲಾಗುತ್ತದೆ. ಅಮೆರಿಕ, ಇಸ್ರೇಲ್, ಯುಕೆಯಂಥ ದೇಶಗಳಿಗೂ ಕಲುಹಿಸಲಾಗುತ್ತದೆ. ಸ್ವರಕ್ಷಣೆ, ತಾಂತ್ರಿಕ ವಸ್ತುಗಳ ಬಳಕೆ ಇತ್ಯಾದಿ ಕುರಿತ ತರಬೇತಿ ನೀಡಲಾಗುತ್ತದೆ. 

40 ಬಗೆಯ ಹಣ್ಣು ಕೊಡುತ್ತೆ ಈ ಮರ: ಅದ್ಭುತ ಗಿಡದ ಬೆಲೆ ಎಷ್ಟಿರಬಹುದು?

7. ಆಯ್ಕೆ ಪ್ರಕ್ರಿಯೆ 

ಆರಂಭದಲ್ಲಿ ತನಿಖಾ ಏಜೆನ್ಸಿ, ಭಾರತೀಯ ಪೋಲೀಸ್ ಸೇವೆಗಳು, ಮಿಲಿಟರಿ ಹಾಗೂ ಆದಾಯ ಇಲಾಖೆಗಳಿಂದ ಜನರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈಗ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳನ್ನು ಕೂಡಾ ರಾ ಅಧಿಕಾರಿಯಾಗಿ, ಇತರೆ ಸಿಬ್ಬಂದಿಯಾಗಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಉದ್ಯೋಗ ಬಯಸುವವರು ಡಿಗ್ರಿ ಹೊಂದಿರಬೇಕು, ಭಾರತೀಯ ಸಂಜಾತರಾಗಿದ್ದು, ಡ್ರಗ್ಸ್ ಸೇರಿದಂತೆ ಚಟಮುಕ್ತರಾಗಿರಬೇಕು. ಯಾವಾಗಲೂ ನೋಟಿಸ್ ಬಂದ ಒಂದೆರಡು ಗಂಟೆಯೊಳಗೆ ಪ್ಯಾಕ್ ಮಾಡಿ ಹೊರಡುವಂತಿರಬೇಕು. ಪೋಲೀಸ್ ರೆಕಾರ್ಡ್‌ನಲ್ಲಿ ಹೆಸರಿರಕೂಡದು. ಚೈನೀಸ್, ಅಫ್ಘಾನಿ, ಪಶ್ತೂನ್ ಅಥವಾ ಇತರೆ ಯಾವುದೇ ಪ್ರಾದೇಶಿಕ ಭಾಷೆಗಳು ಬರುತ್ತಿದ್ದಲ್ಲಿ ನಿಮ್ಮ ಆಯ್ಕೆ ಇತರರಿಗಿಂತ ಹೆಚ್ಚು ಖಚಿತ. ಎಲ್ಲಕ್ಕಿಂತ ಮುಖ್ಯವಾಗಿ ನೀವು ರಾ ಸೇರಬೇಕೆಂಬ ಆಕಾಂಕ್ಷೆಯನ್ನು ಯಾರಲ್ಲಿಯೂ ವ್ಯಕ್ತಪಡಿಸಿರಬಾರದು