ರಾಮ ಮಂದಿರದ ಉದ್ಘಾಟನೆ ವೇಳೆ ಉಗ್ರ ದಾಳಿಗೆ ಪ್ಲಾನ್, ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ!
ರಾಮ ಮಂದಿರ ಉದ್ಘಾಟನೆಗೆ ಬೆನ್ನಲ್ಲೇ ಉಗ್ರ ದಾಳಿ ಆತಂಕ ಎದುರಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಇತ್ತ ಆಯೋಧ್ಯೆಯಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ನವದೆಹಲಿ(ಜ.11) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಸಕಲ ತಯಾರಿ ನಡೆಯುತ್ತಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಆದರೆ ರಾಮ ಮಂದಿರ ಉದ್ಘಾಟನೆ ದಿನ ಆಯೋಧ್ಯೆ ಮೇಲೆ ಉಗ್ರ ದಾಳಿಯಾಗುವ ಸಾಧ್ಯತೆಯನ್ನು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. ಭಾರತದ ಅಸ್ಮಿತೆ, ಶತ ಶತಮಾನಗಳ ಹೋರಾಟದ ಫಲವಾಗಿ ತಲೆ ಎತ್ತಿ ನಿಂತಿರುವ ರಾಮ ಮಂದಿರವನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ರಾಜಕೀಯ ಗಣ್ಯರು, ಹಿಂದೂ ಮುಖಂಡರು, ಸಾಧು ಸಂತರು, ಸ್ವಾಮೀಜಿಗಳನ್ನು ಸೇರಲಿದ್ದಾರೆ. ಹೀಗಾಗಿ ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಆಯೋಧ್ಯೆ ಪ್ರಮುಖ ಸ್ಥಾನ ಪಡೆದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಸಮುದಾಯ ನಡುವೆ ಸಂಘರ್ಷ ಸೃಷ್ಟಿಸಲು, ಶ್ರೀರಾಮ ಮಂದಿರಜ ವಿಜ್ರಂಭಣೆಯಿಂದ ಉರಿದುಕೊಂಡಿರುವ ಉಗ್ರರ ಪಡೆ ಈ ದಾಳಿಗೆ ಪ್ಲಾನ್ ಮಾಡಿದೆ. ಮೂಲಭೂತವಾದಿಗಳ ಉಗ್ರರ ಗುಂಪು ದೊಡ್ಡ ದಾಳಿಗೆ ಸಜ್ಜಾಗಿದೆ. ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಭಾರತ ಸರ್ಕಾರದ ತೆಗೆದುಕೊಂಡ ನಿಲುವು ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಆಯೋಧ್ಯೆ ಮೇಲೆ ದಾಳಿಗೆ ಉಗ್ರರು ಪ್ಲಾನ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ 100 ಚಾರ್ಟೆಡ್ ಫ್ಲೈಟ್ ಆಯೋಧ್ಯೆಯಲ್ಲಿ ಲ್ಯಾಂಡ್!
ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತುರ್ತು ಸಭೆ ನಡೆಸಿದೆ. ಆಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲು ಸೂಚಿಸಿದೆ. ಸಿಸಿಟಿವಿ, ಭಯೋತ್ಪಾದನಾ ನಿಗ್ರಹ ಪಡೆ, ಪೊಲೀಸ್ ಅಧಿಕಾರಿಗಳು, ಭಾರತೀಯ ಸೇನೆ ಸೇರಿದಂತೆ ವಿವಿಧ ಭದ್ರತಾ ಎಜೆನ್ಸಿಗಳು ಭಾರಿ ಬಿಗಿ ಭದ್ರತೆ ಕೈಗೊಂಡಿದೆ.
ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಆಯೋಧ್ಯೆ ಭದ್ರತೆ, ಆಗಮಿಸುವ ಗಣ್ಯರು, ಭಕ್ತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲು ಹಲವು ಸಭೆ ನಡೆಸಿದೆ. ಟ್ರಾಫಿಕ್ ನಿಯಂತ್ರಣ ಸೇರಿದಂತೆ ಎಲ್ಲವನ್ನೂ ನಿಯಂತ್ರಿಸಲು ಎಲ್ಲಾ ಭಕ್ತರಿಗ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಸರಣಿ ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿದೆ.
ರಾಮ ಮಂದಿರ, ಹೊಸ ಸಂಸತ್, ಜಿ20; ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟ ಬಿಜೆಪಿ!
ಆಯೋಧ್ಯೆಯಲ್ಲಿ 1,500 ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸ್ ಹಾಗೂ ಭದ್ರತಾ ಪಡೆಯ ಸರ್ಪಗಾವಲು ಇರಲಿದೆ. 10,715 ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಆ್ಯಂಟಿ ಡ್ರೋನ್ ಸಿಸ್ಟಮ್ ನಿಯೋಜಿಸಲಾಗಿದೆ. ಸ್ಪೆಷಲ್ ಸೆಕ್ಯೂರಿಟಿ ಫೋರ್ಸ್ ತಂಡ ಕೂಡ ಆಯೋಧ್ಯೆಯಲ್ಲಿ ಬೀಡು ಬಿಟ್ಟಿದೆ.